AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ?

ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ತುಸು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಜೆರಿಯಾಟ್ರಿಕ್ ಕಿಟ್ ಬಳಸುವುದು ಬಹಳ ಉತ್ತಮ. ಇದನ್ನು ನಾವು ಸುಲಭವಾಗಿ ಹಿರಿಯ ನಾಗರಿಕರ ಆರೈಕೆ ಕಿಟ್ ಎನ್ನಬಹುದು. ಇದು ಮನೆಯಲ್ಲಿದ್ದರೆ ಸ್ವಲ್ಪ ಮಟ್ಟಿಗೆ ದೈರ್ಯವಿರುತ್ತದೆ. ಹಾಗಾದರೆ ಇದರಲ್ಲಿ ಏನೇನಿರುತ್ತದೆ, ಹಿರಿಯರು ಇರುವ ಮನೆಯಲ್ಲಿ ಇದು ಯಾಕೆ ಮುಖ್ಯವಾಗಿ ಇರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ?
Geriatric Kit For SeniorsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 05, 2026 | 8:39 PM

Share

ಇಂದಿನ ವೇಗದ ಜೀವನಶೈಲಿಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ದೈಹಿಕ ಸಾಮರ್ಥ್ಯ ನಿಧಾನವಾಗಿ ಕುಗ್ಗುವುದು ಸಹಜ, ಅದರಲ್ಲಿಯೂ ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳೂ ಗಂಭೀರವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ತಕ್ಷಣದ ಸಹಾಯ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಜೆರಿಯಾಟ್ರಿಕ್ ಕಿಟ್ (Geriatric Kit) ಇದ್ದರೆ ಬಹಳ ಒಳ್ಳೆಯದು. ಇದನ್ನು ನಾವು ಸುಲಭವಾಗಿ ಹಿರಿಯ ನಾಗರಿಕರ ಆರೈಕೆ ಕಿಟ್ ಎನ್ನಬಹುದು. ಹಾಗಾದರೆ ಇದರಲ್ಲಿ ಏನೇನಿರುತ್ತದೆ, ಹಿರಿಯರು ಇರುವ ಮನೆಯಲ್ಲಿ ಇದು ಯಾಕೆ ಮುಖ್ಯವಾಗಿ ಇರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೆರಿಯಾಟ್ರಿಕ್ ಕಿಟ್ ಎಂದರೇನು?

ಹಿರಿಯ ನಾಗರಿಕರ ಆರೈಕೆ ಕಿಟ್ ಎಂಬುದು ಅವರ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಒಂದು ವಿಶೇಷ ಮೆಡಿಕಲ್ ಕಿಟ್. ಇದು ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆಸ್ಪತ್ರೆ ತಲುಪುವವರೆಗೆ ಅಗತ್ಯ ಸಹಾಯವನ್ನು ನೀಡಲು ಇದು ಉಪಯುಕ್ತವಾಗುತ್ತದೆ. ತಜ್ಞರ ಪ್ರಕಾರ, ಈ ಕಿಟ್‌ನಲ್ಲಿ ದಿನನಿತ್ಯ ಬಳಕೆಯ ಔಷಧಿಗಳು, ಫಸ್ಟ್ ಏಡ್ ಸಾಮಗ್ರಿಗಳು ಮತ್ತು ಕೆಲವು ಪ್ರಮುಖ ವೈದ್ಯಕೀಯ ಉಪಕರಣಗಳು ಇರಬೇಕು. ಉದಾಹರಣೆಗೆ ರಕ್ತದೊತ್ತಡ ಮಾಪಕ (BP ಯಂತ್ರ), ಥರ್ಮಾಮೀಟರ್, ಸ್ಟೆತಸ್ಕೋಪ್, ತೂಕದ ಯಂತ್ರ, ನಾಡಿ ಮಾಪಕ, ಶ್ರವಣ ಸಾಧನ, ಶುಗರ್ ಲೆವೆಲ್ ಪರೀಕ್ಷಾ ಸಾಧನಗಳು ಇತ್ಯಾದಿ. ಜೊತೆಗೆ ಪೇನ್ ಕಿಲರ್, ಬ್ಯಾಂಡೆಜ್, ಆಂಟಿಸೆಪ್ಟಿಕ್ ಕ್ರೀಮ್ ಮತ್ತು ಇತರ ಮೂಲಭೂತ ಔಷಧಿಗಳನ್ನು ಸೇರಿಸಬಹುದು. ಎಲ್ಲಾ ಔಷಧಿಗಳನ್ನು ವೈದ್ಯರ ಸಲಹೆಯಂತೆ ಇಡುವುದು ಮತ್ತು ಅವುಗಳ ಅವಧಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ: ಕಿವಿ ಕೇಳಿಸದಿರುವುದು ಕೇವಲ ವೃದ್ಧಾಪ್ಯದ ಸಮಸ್ಯೆಯಲ್ಲ; ಚಿಕ್ಕ ವಯಸ್ಸಿನಲ್ಲಿ ಹೀಗಾಗುವುದಕ್ಕೆ ಕಾರಣವೇನು?

ಹಿರಿಯರಿಗೆ ಇದು ಏಕೆ ಮುಖ್ಯ?

ಆರೋಗ್ಯ ಸಮಸ್ಯೆಗಳು ಹಿರಿಯರಲ್ಲಿ ಅಚಾನಕ್ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಸಣ್ಣ ತೊಂದರೆಗಳು ಕೂಡ ತ್ವರಿತವಾಗಿ ಗಂಭೀರವಾಗಬಹುದು. ಇಂತಹ ಸಂದರ್ಭಗಳಲ್ಲಿ ಜೆರಿಯಾಟ್ರಿಕ್ ಕಿಟ್ ಅಥವಾ ಈ ಆರೈಕೆ ಕಿಟ್ ತಕ್ಷಣದ ನೆರವನ್ನು ಒದಗಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಸಿದ್ಧಪಡಿಸಿಕೊಳ್ಳುವಾಗ, ಮೊದಲು ವೈದ್ಯರ ಸಲಹೆ ಪಡೆದು ಹಿರಿಯರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಅವನ್ನು ಸ್ವಚ್ಛವಾದ ಡಬ್ಬಿಯಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿ, ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿ ಇಡಬೇಕು. ಸಮಯಕ್ಕೆ ತಕ್ಕಂತೆ ಕಿಟ್ ಅನ್ನು ನವೀಕರಿಸುವುದೂ ಕೂಡ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us