AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ತೊಳೆಯಬಾರದಂತೆ? ಏಕೆ ಗೊತ್ತಾ?

ಸಾಮಾನ್ಯವಾಗಿ ಎಲ್ಲರೂ ಸಹ ಚಿಕನ್‌ ಅನ್ನು ಚೆನ್ನಾಗಿ ನೀರಿನಿಂದ ಎರಡು ಮೂರು ಬಾರಿ ತೊಳೆದ ಬಳಿಕವೇ ಕೋಳಿ ಪದಾರ್ಥ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಚಿಕನ್‌ ಚೆನ್ನಾಗಿ ಕ್ಲೀನ್‌ ಆಗುತ್ತೆ, ಬ್ಯಾಕ್ಟೀರಿಯಾಗಳೆಲ್ಲಾ ಸತ್ತು ಹೋಗುತ್ತವೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಅಡುಗೆ ಮಾಡುವ ಮುನ್ನ ಚಿಕನ್‌ ತೊಳೆಯುವುದರಿಂದ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು ಇನ್ನಷ್ಟು ಹರಡುತ್ತವೆ.‌ ಇದು ಕಾಯಿಲೆಗಳು ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಅಡುಗೆಗೂ ಮುನ್ನ ಕೋಳಿ ಮಾಂಸವನ್ನು ತೊಳೆಯಬೇಡಿ.

ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ತೊಳೆಯಬಾರದಂತೆ? ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 07, 2026 | 4:42 PM

Share

ಪ್ರತಿಯೊಬ್ಬರೂ ಸಹ ಅಡುಗೆ ಮಾಡುವ ಮುನ್ನ ತರಕಾರಿ, ಮಾಂಸ ಎಲ್ಲವನ್ನೂ ಚೆನ್ನಾಗಿ ತೊಳೆಯುತ್ತಾರೆ. ಅದರಲ್ಲೂ ಕೋಳಿ (chicken) ಇತ್ಯಾದಿ ಮಾಂಸಗಳನ್ನು ಎರಡು ಮೂರು ಬಾರಿ ಸ್ವಚ್ಛಗೊಳಿಸುತ್ತಾರೆ. ಇದರಿಂದ ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಸತ್ತು ಹೋಗುತ್ತವೆ, ಮಾಂಸ ಚೆನ್ನಾಗಿ ಕ್ಲೀನ್‌ ಆಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಹೀಗೆ ಅಡುಗೆಗೂ ಮುನ್ನ ಕೋಳಿ ಮಾಂಸವನ್ನು ತೊಳೆಯಲೇಬಾದಂತೆ. ಇದರಿಂದ ಹಾನಿಕಾರ ಬ್ಯಾಕ್ಟೀರಿಯಾ ಇನ್ನಷ್ಟು ಹರಡುತ್ತದೆ, ಇದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಹಾಗಿದ್ರೆ ಅಡುಗೆಗೂ ಮುನ್ನ ಕೋಳಿ ಮಾಂಸವನ್ನು ತೊಳೆಯುವುದರಿಂದ ಏನೆಲ್ಲಾ ಅಪಾಯಗಳು ಉದ್ಭವಿಸುತ್ತವೆ, ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಅಡುಗೆ ಮಾಡುವ ಮೊದಲು ಕೋಳಿ ತೊಳೆಯುವುದು ಏಕೆ ಹಾನಿಕಾರಕ?

ಹಸಿ ಕೋಳಿ ಮಾಂಸದಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಾಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅವುಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ ಮತ್ತು ಫುಡ್‌ ಪಾಯಿಸನ್‌ನಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನೀವು ಹಸಿ ಕೋಳಿ ಮಾಂಸವನ್ನು ತೊಳೆದಾಗ, ಆ ನೀರಿನ ಹನಿಗಳು  ಸಿಂಕ್, ತಟ್ಟೆಗಳು, ಪಾತ್ರೆಗಳು ಮತ್ತು ಕೌಂಟರ್‌ಗಳಿಗೆ  ಚಿಮ್ಮುವ ಮೂಲಕ ಈ ಬ್ಯಾಕ್ಟೀರಿಯಾಗಳು ಹರಡಬಹುದು. ಹರಿಯುವ ನೀರಿನ ಅಡಿಯಲ್ಲಿ ಕೋಳಿ ಮಾಂಸವನ್ನು ತೊಳೆಯುವುದರಿಂದ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಎಂದು ಹಲವರು ನಂಬುತ್ತಾರೆ. ಆದರೆ ನೀರು ಬ್ಯಾಕ್ಟೀರಿಯಾವನ್ನು ಕೊಲ್ಲುವುದಿಲ್ಲ. ಇದಕ್ಕೆ ಹೆಚ್ಚಿನ ತಾಪಮಾನ ಬೇಕಾಗುತ್ತದೆ. ಆದ್ದರಿಂದ, ಕೋಳಿ ಮಾಂಸವನ್ನು ತೊಳೆಯುವ ಬದಲು ನೇರವಾಗಿ ಚೆನ್ನಾಗಿ ಬೇಯಿಸಬೇಕು. ಇದು ಬ್ಯಾಕ್ಟೀರಿಯಾ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕುರಿತ ಮಾಹಿತಿಯನ್ನು ಅವನೀಶ್ ಛಾಬ್ರಿಯಾ ಎಂಬವವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಅಮೇರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಪ್ರಕಾರ, ಹಸಿ ಕೋಳಿಯನ್ನು ತೊಳೆಯುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಡುಗೆ ಮಾಡುವ ಮೊದಲು ಹಸಿ ಕೋಳಿಯನ್ನು ತೊಳೆಯುವುದರಿಂದ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ, ಸಾಲ್ಮೊನೆಲ್ಲಾ, ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಮತ್ತು ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಬ್ಯಾಕ್ಟೀರಿಯಾಗಳು ಹರಡುತ್ತವೆ.ಸೋಂಕಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಸಿ ಕೋಳಿಯನ್ನು ತೊಳೆಯುವುದು ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ವಿಶೇಷವಾಗಿ ಹಾನಿಕಾರಕವಾಗಿದೆ.

ಕೋಳಿಯನ್ನು ಹೇಗೆ ಸ್ವಚ್ಛಗೊಳಿಸಬೇಕು?

ಕೋಳಿಯಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಕೋಳಿಯನ್ನು ಸೂಕ್ತ ತಾಪಮಾನದಲ್ಲಿ ಚೆನ್ನಾಗಿ ಬೇಯಿಸುವುದು ಅತ್ಯಗತ್ಯ. ಕೋಳಿಯನ್ನು ಕನಿಷ್ಠ 75°C ಅಥವಾ 165°F ತಾಪಮಾನದಲ್ಲಿ ಕೋಳಿಯನ್ನು ಬೇಯಿಸಬೇಕು. ಈ ತಾಪಮಾನದಲ್ಲಿ ಕೋಳಿಯನ್ನು ಬೇಯಿಸುವುದರಿಂದ ಲೋಳೆ ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ:  ನೀವು ಮಾಡುವ ತಪ್ಪುಗಳು ಕುಕ್ಕರ್‌ ಸ್ಫೋಟಗೊಳ್ಳಲು ಕಾರಣವಾಗಬಹುದು

ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯುವುದು ಹೇಗೆ?

  • ಕೋಳಿಯನ್ನು ನೀರಿನಿಂದಲೇ ತೊಳೆಯಬೇಕು ಅಂತಿದ್ದರೆ, ತೊಳೆಯಲು ಬಯಸಿದರೆ, ಚಿಕನ್‌ ಕ್ಲೀನ್‌ ಮಾಡಿದ ತಕ್ಷಣವೇ  ಸಿಂಕ್, ಪಾತ್ರೆಗಳು, ಕೌಂಟರ್‌ ಟಾಪ್‌ಗಳನ್ನು ಸ್ವಚ್ಛಗೊಳಿಸಿ. ತಕ್ಷಣವೇ ಬಿಸಿನೀರು ಮತ್ತು ಸೋಪಿನಿಂದ ಸಿಂಕ್ ಅನ್ನು ಚೆನ್ನಾಗಿ ತೊಳೆಯಿರಿ.
  • ಹಸಿ ಕೋಳಿ ಮಾಂಸವನ್ನು ರೆಫ್ರಿಜರೇಟರ್‌ನಲ್ಲಿ ಇಡುವುದನ್ನು ಯಾವಾಗಲೂ ತಪ್ಪಿಸಿ. ಇದು ಬ್ಯಾಕ್ಟೀರಿಯಾಗಳು ಇತರ ಆಹಾರ ಪದಾರ್ಥಗಳಿಗೆ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಯಾವಾಗಲೂ ಕೋಳಿ ಮಾಂಸವನ್ನು ಮುಚ್ಚಿಡಿ.
  • ಕೋಳಿ ಕ್ಲೀನ್‌ ಮಾಡಿದರ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ಹೋಟೆಲ್​ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್