ತುಪ್ಪ ಅಥವಾ ತೆಂಗಿನ ಎಣ್ಣೆ: ಅಡುಗೆಗೆ ಆರೋಗ್ಯಕರ ಆಯ್ಕೆ ಯಾವುದು? ಇಲ್ಲಿದೆ ನೋಡಿ

|

Updated on: Dec 19, 2024 | 5:09 PM

ನಿಮ್ಮ ದಿನನಿತ್ಯದ ಅಡುಗೆಯಲ್ಲಿ ತುಪ್ಪ ಅಥವಾ ತಂಗಿನ ಎಣ್ಣೆ ಯಾವುದು ಉತ್ತಮ. ಇದರಲ್ಲಿ ಯಾವುದು ನಿಮ್ಮ ಆರೋಗ್ಯಕ್ಕೆ ಪೂರಕವಾಗಿದೆ ಎಂಬ ಬಗ್ಗೆ ಅನೇಕರಲ್ಲಿ ಚರ್ಚೆಯಾಗಿರಬಹುದು. ನಿಮ್ಮ ಆರೋಗ್ಯದಲ್ಲಿ ಅಡುಗೆಯಿಂದ ಏರುಪೇರು ಆಗಬಹುದು . ಅದನ್ನು ತಪ್ಪಿಸುವುದು ಹೇಗೆ? ಇದರ ನಮ್ಮ ದೇಹಕ್ಕೆ ಆರೋಗ್ಯವಾಗಿರುವುದು ಎಂಬ ಬಗ್ಗೆ ಯೋಚನೆ ನಿಮ್ಮಲ್ಲಿ ಬಂದಿರಬಹುದು. ಚಿಂತೆ ಬೇಡ ಫಿಟ್ನೆಸ್ ತರಬೇತುದಾರ ರಾಲ್ಸ್ಟನ್ ಡಿಸೋಜಾ ಹೇಳಿರುವ ಈ ನಿಯಮವನ್ನು ಪಾಲಿಸಿ ಹಾಗೂ ತುಪ್ಪ ಅಥವಾ ತಂಗಿನ ಎಣ್ಣೆ, ಇದರಲ್ಲಿ ಯಾವುದು ಉತ್ತಮ. ಯಾವುದನ್ನು ಅಡುಗೆ ಬಳಸಬೇಕು ಎಂಬ ಬಗ್ಗೆ ಹೇಳಿದ್ದಾರೆ. ಇಲ್ಲಿದೆ ನೋಡಿ.

ತುಪ್ಪ ಅಥವಾ ತೆಂಗಿನ ಎಣ್ಣೆ: ಅಡುಗೆಗೆ ಆರೋಗ್ಯಕರ ಆಯ್ಕೆ ಯಾವುದು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಪ್ರತಿ ಮನೆಯಲ್ಲಿ ಮಹಿಳೆಯರು ತನ್ನ ಕುಟುಂಬ ಆರೋಗ್ಯ ರಕ್ಷಣೆ ಹೇಗೆ ಮಾಡುವುದು ಎಂಬ ಬಗ್ಗೆ ಚಿಂತೆ ಇರುತ್ತದೆ. ಅದಕ್ಕಾಗಿ ಅಡುಗೆ ಮಾಡುವಾಗ ಅಚ್ಚುಕಟ್ಟುಗಳನ್ನು ಹಾಗೂ ಆರೋಗ್ಯಯುತವಾದ ಅಡುಗೆ ಬಗ್ಗೆ ಗಮನ ನೀಡುತ್ತಾರೆ. ಆದರೆ ಮನೆಯಲ್ಲಿ ಅಡುಗೆ ಮಾಡುವಾಗ ತುಪ್ಪ ಅಥಾವ ತಂಗಿನ ಎಣ್ಣೆ ಯಾವುದು ಉತ್ತಮ ಎಂಬುದು ಇಲ್ಲಿದೆ ನೋಡಿದೆ. ತುಪ್ಪ ಮತ್ತು ತೆಂಗಿನ ಎಣ್ಣೆ ದೈನಂದಿನ ಅಡುಗೆಗೆ ಅಗತ್ಯವಾದ ಪದಾರ್ಥಗಳಾಗಿವೆ. ತುಪ್ಪವನ್ನು ಉತ್ತರ ಭಾರತದಲ್ಲಿ ಹಾಗೂ ಎಣ್ಣೆಯನ್ನು ದಕ್ಷಿಣ ಭಾರತದಲ್ಲಿ ಉಪಯೋಗಿಸುತ್ತಾರೆ. ಮೇಲೋಗರ ಮತ್ತು ಸಬ್ಜಿಗಳಿಂದ ಹಿಡಿದು ಬ್ರೆಡ್‌ನವರೆಗೆ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

ತುಪ್ಪ ಮತ್ತು ತೆಂಗಿನ ಎಣ್ಣೆಯು ಅವುಗಳ ಪೋಷಕಾಂಶಗಳು ಮತ್ತು ಪ್ರಯೋಜನಗಳಲ್ಲಿ ಭಿನ್ನವಾಗಿರುತ್ತವೆ. ಇದರಲ್ಲಿ ನಮ್ಮ ಆರೋಗ್ಯ ಹಾಗೂ ಅಡುಗೆಗೆ ಯಾವುದು ಉತ್ತಮ ಎಂಬ ಬಗ್ಗೆ ಚಿಂತೆಯೇ. ಚಿಂತೆ ಬೇಡ ಫಿಟ್ನೆಸ್ ತರಬೇತುದಾರ ರಾಲ್ಸ್ಟನ್ ಡಿಸೋಜಾ ಅವರು ಈ ಬಗ್ಗೆ ಇನ್​ಸ್ಟಾಗ್ರಾಮ್​​​ ನಲ್ಲಿ ಹಂಚಿಕೊಂಡಿದ್ದಾರೆ.

ತುಪ್ಪದ ಪ್ರಯೋಜನಗಳೇನು?

ಹಲವಾರು ಕಾರಣಗಳಿಗಾಗಿ ತುಪ್ಪವು ನಮ್ಮ ಆಹಾರಕ್ರಮಕ್ಕೆ ಅಳವಡಿಸಲಾಗಿದೆ. ತುಪ್ಪ ಗೋಲ್ಡನ್ ವಂಡರ್ ಬ್ಯುಟರಿಕ್ ಆಮ್ಲವನ್ನು ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಹೊಂದಿದೆ. ಇದಲ್ಲದೆ, ತುಪ್ಪವು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಇ ಮತ್ತು ಕೆಗಳಿಂದ ಸಮೃದ್ಧವಾಗಿದೆ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ.

ತೆಂಗಿನ ಎಣ್ಣೆಯ ಪ್ರಯೋಜನಗಳೇನು?

ತೆಂಗಿನ ಎಣ್ಣೆಯನ್ನು ಅತ್ಯಂತ ತೂಕ ನಷ್ಟ ವಸ್ತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತೆಂಗಿನ ಎಣ್ಣೆಯು ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಚಯಾಪಚಯ ನಿಯತಾಂಕಗಳನ್ನು ಸುಧಾರಿಸಲು ಸಹಾಯ ಮಾಡಿದೆ. ಜೊತೆಗೆ, ತೆಂಗಿನ ಎಣ್ಣೆಯ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮವನ್ನು ಒಳಗಿನಿಂದ ಪೋಷಕಾಂಶವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ದೆಹದಲ್ಲಿ ಆರೋಗ್ಯಕರ ಹೊಳಪನ್ನು ನೀಡುತ್ತದೆ. ಹಾಗೂ ತೆಂಗಿನ ಎಣ್ಣೆಯಲ್ಲಿರುವ ಕೆಲವು ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಆಯುರ್ವೇದದ ಪ್ರಕಾರ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಆಹಾರ ಎಷ್ಟು ಗಂಟೆಗೆ ಸೇವಿಸಬೇಕು?

ತುಪ್ಪ Vs ತೆಂಗಿನ ಎಣ್ಣೆ – ಅಡುಗೆಗೆ ಯಾವುದು ಆರೋಗ್ಯಕರ?

ಫಿಟ್ನೆಸ್ ತರಬೇತುದಾರ ರಾಲ್ಸ್ಟನ್ ಡಿಸೋಜಾ ಪ್ರಕಾರ, ತುಪ್ಪಕ್ಕೆ ಹೋಲಿಸಿದರೆ ತೆಂಗಿನ ಎಣ್ಣೆ ಅಡುಗೆಗೆ ಉತ್ತಮ ಆಯ್ಕೆಯಾಗಿದೆ . ತುಪ್ಪವು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ತುಪ್ಪವನ್ನು ಉರಿಯಲ್ಲಿ ಬಿಸಿ ಮಾಡಿದಾಗ ಆಕ್ಸಿಡೀಕರಣ ಮತ್ತು ಆಕ್ಸಿಸ್ಟರಾಲ್ಗಳನ್ನು ಉತ್ಪಾದಿಸುತ್ತದೆ. ಇದು ತುಪ್ಪದಲ್ಲಿರುವ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ ಸಂಪೂರ್ಣವಾಗಿ ತುಪ್ಪವನ್ನು ಅಡುಗೆ ಉಪಯೋಗಿಸಬಾರದು ಎಂದಲ್ಲ. ಹೆಚ್ಚು ಉಪಯೋಗಿಸಬೇಡಿ. ಏಕೆಂದರೆ ಇದು ಜೀವಸತ್ವಗಳು ಮತ್ತು ಬ್ಯುಟೈರೇಟ್‌ಗಳಲ್ಲಿ ಸಮೃದ್ಧವಾಗಿದೆ. ಆ ಕಾರಣದಿಂದ ಇದು ಕರುಳಿನ ಆರೋಗ್ಯವನ್ನು ಹಾಗೂ ಕೊಬ್ಬಿನಾಮ್ಲವಾಗಿದೆ. ಹಾಗಾಗಿ ತುಪ್ಪಕ್ಕಿಂತ ತೆಂಗಿನ ಎಣ್ಣೆಯನ್ನು ಬಳಸಿ ಎಂಬುದು ರಾಲ್ಸ್ಟನ್ ಡಿಸೋಜಾ ಅವರ ಸಲಹೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ