AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ?; ಇಲ್ಲಿದೆ ಉತ್ತರ

Green Tea Health Benefits: ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಇನ್ನು ಕೆಲವರು ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಕುಡಿಯಲು ಬಯಸುತ್ತಾರೆ. ಆದರೆ, ಮಲಗುವ ಮುನ್ನ ಪ್ರತಿದಿನ ಗ್ರೀನ್ ಟೀ ಕುಡಿಯುವುದು ಸುರಕ್ಷಿತವೇ?

Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ?; ಇಲ್ಲಿದೆ ಉತ್ತರ
ಗ್ರೀನ್ ಟೀ
TV9 Web
| Edited By: |

Updated on:Oct 22, 2021 | 7:26 PM

Share

ನೀವು ಚಹಾ ಪ್ರಿಯರಾದರೆ ಈಗಂತೂ ಶುಂಠಿ ಚಹಾ (Ginger Tea), ಏಲಕ್ಕಿ ಟೀ (Elaichi Tea) , ಲೈಮ್ ಟೀ (Lime Tea), ಗ್ರೀನ್ ಟೀ (Green Tea), ಬ್ಲಾಕ್​ ಟೀ (Black Tea)ಹೀಗೆ ಏನೇನೋ ಆಯ್ಕೆಗಳಿವೆ. ಅದರಲ್ಲೂ ಡಯಟ್ (Diet Tips)  ಮಾಡುವವರು ಗ್ರೀನ್ ಟೀಯನ್ನು ಹೆಚ್ಚಾಘಿ ಕುಡಿಯುತ್ತಾರೆ. ನೀವೇನಾದರೂ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದರೆ ತಪ್ಪದೆ ಈ ಸುದ್ದಿಯನ್ನು ಓದಿ.

ತೂಕ ಇಳಿಸುವುದರಿಂದ ಹಿಡಿದು ಒತ್ತಡದಲ್ಲಿದ್ದಾಗ ನಮ್ಮ ದೇಹದ ನರಗಳಿಗೆ ವಿಶ್ರಾಂತಿ ನೀಡುವವರೆಗೆ ಗ್ರೀನ್ ಟೀಯಿಂದ ಹಲವು ಉಪಯೋಗಗಳಿವೆ. ಇದೇ ಕಾರಣಕ್ಕೆ ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಇನ್ನು ಕೆಲವರು ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಕುಡಿಯಲು ಬಯಸುತ್ತಾರೆ. ಆದರೆ, ಮಲಗುವ ಮುನ್ನ ಪ್ರತಿದಿನ ಗ್ರೀನ್ ಟೀ ಕುಡಿಯುವುದು ಸುರಕ್ಷಿತವೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಏನಿದು ಹಸಿರು ಚಹಾ?: ಹಸಿರು ಚಹಾ ಅಥವಾ ಗ್ರೀನ್ ಟೀ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಹೊರತೆಗೆಯಲಾಗುತ್ತದೆ. ಒಂದು ಕಪ್ ಹಸಿರು ಚಹಾವು ನರಗಳನ್ನು ಸಡಿಲಗೊಳಿಸುವುದಲ್ಲದೆ, ಮೆದುಳಿನ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಹಾಗೇ, ಇದು ನಿಮ್ಮ ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀಯನ್ನು ಕುಡಿಯಲು ಸರಿಯಾದ ಸಮಯ ಯಾವುದು? ಹಸಿರು ಚಹಾವನ್ನು ಕುಡಿಯಲು ಸರಿಯಾದ ಸಮಯದ ಬಗ್ಗೆ ನಿಖರವಾಗಿ ಹೇಳಲಾಗದಿದ್ದರೂ ಕೆಫೀನ್ ಇರುವ ಈ ಗ್ರೀನ್ ಟೀಯನ್ನು ಮಲಗುವ ವೇಳೆಗೆ ಕುಡಿಯುವುದು ಒಳ್ಳೆಯದಲ್ಲ. ಕೆಫೀನ್ ವ್ಯಕ್ತಿಯ ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಮತ್ತು ನಿದ್ರಾಹೀನತೆಯನ್ನು ಉಂಟು ಮಾಡಬಹುದು. ಏಕೆಂದರೆ ಇದು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ವ್ಯಕ್ತಿಗಳು ಮಲಗುವ ಮುನ್ನ ಹಸಿರು ಚಹಾ ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ನೀವೇನಾದರೂ ರಾತ್ರಿ ಗ್ರೀನ್ ಟೀ ಕುಡಿಯುವುದಾದರೆ ಮಲಗುವ ಮುನ್ನ ಕನಿಷ್ಠ 2ರಿಂದ 3 ಗಂಟೆಗಳ ಮೊದಲು ಕುಡಿಯಬಹುದು.

ದಿನವಿಡೀ 2ರಿಂದ 3 ಕಪ್ ಹಸಿರು ಚಹಾವನ್ನು ಸೇವಿಸಿದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಆದರೆ, 3 ಕಪ್​ಗಿಂತ ಹೆಚ್ಚು ಗ್ರೀನ್ ಟೀ ಕುಡಿದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಇದರಿಂದ ರಕ್ತಹೀನತೆ, ವಾಕರಿಕೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.

ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀಯಲ್ಲಿ ಪಾಲಿಫಿನಾಲ್‌ಗಳು ಮತ್ತು ಕೆಫೀನ್ ಇರುತ್ತದೆ. ದಿನದಲ್ಲಿ 3 ಕಪ್ ಗಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯಬೇಡಿ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅತಿಯಾದ ಕೆಫೀನ್ ವಾಂತಿ, ಅತಿಸಾರ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟಕ್ಕೆ ಮುಂಚೆ ಗ್ರೀನ್ ಟೀಯನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಅಥವಾ ವಾಕರಿಕೆ ಉಂಟಾಗಬಹುದು. ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ನಿದ್ದೆ ಕೂಡ ಬರುವುದಿಲ್ಲ. ಆದ್ದರಿಂದ, ದಿನಕ್ಕೆ ಒಂದು ಅಥವಾ ಎರಡು ಕಪ್ ಗ್ರೀನ್ ಟೀ ಮಾತ್ರ ಕುಡಿಯುವುದು ಒಳ್ಳೆಯದು.

ಗ್ರೀನ್ ಟೀ ಕುಡಿಯಲು ಉತ್ತಮ ಸಮಯ ಯಾವುದು?: ನೀವು ದಿನನಿತ್ಯ ವ್ಯಾಯಾಮ ಮಾಡುವುದಾದರೆ ಆ ವ್ಯಾಯಾಮ ಮಾಡುವುದಕ್ಕೂ ಮುಂಚೆ ಗ್ರೀನ್ ಟೀಯನ್ನು ಸೇವಿಸಿ. ಗ್ರೀನ್ ಟೀಯನ್ನು ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ. ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಎದ್ದ ಕೂಡಲೇ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗುತ್ತದೆ.

ಇದನ್ನೂ ಓದಿ: Chamomile Tea: ಕ್ಯಾಮೊಮೈಲ್ ಟೀಯಲ್ಲಿದೆ ಆರೋಗ್ಯದ ಗುಟ್ಟು; ಕಾಫಿ ಪಕ್ಕಕ್ಕಿಟ್ಟು ಹರ್ಬಲ್ ಚಹಾ ಕುಡಿದು ನೋಡಿ

Health Tips: ಶುಂಠಿ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

Published On - 7:24 pm, Fri, 22 October 21

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ