ಹಾಲಿನ ಜತೆ ಬಾಳೆಹಣ್ಣು ಮಿಶ್ರಣ ಮಾಡಿ ಸವಿಯುವುದು ಬಹಳ ರುಚಿಕರವಾಗಿರುತ್ತದೆ. ಅದರಲ್ಲಿಯೂ ಬೇಸಿಗೆ ಸಮಯದಲ್ಲಂತೂ ಪಾಯಸ ಮಾಡಿ ಸವಿಯುತ್ತೇವೆ. ಬೆಳಿಗ್ಗೆ ದೋಸೆಗೆ, ಮಧ್ಯಾಹ್ನದ ಊಟಕ್ಕೆ ಬಾಳೆಹಣ್ಣಿನ ಪಾಯಸ ಸವಿಯುತ್ತಿದ್ದರೆ ಎಲ್ಲಿಲ್ಲದ ಆನಂದ. ಹಲವರು ರಾತ್ರಿ ಹಾಲು ಸೇವಿಸಿದ ಬಳಿಕವೇ ಬಾಳೆಹಣ್ಣು ತಿಂದು ಮಲಗುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಆದರೆ ಹಾಲಿನ ಜತೆಗೆ ಬಾಳೆಹಣ್ಣು ಮಿಶ್ರಣ ಮಾಡಿ ಸವಿಯುವುದು ಆರೋಗ್ಯಕ್ಕೆ ಎಷ್ಟು ಹಾನಿ ಎಂಬುದನ್ನು ತಿಳಿಯಿರಿ.
ಯಾವುದೇ ಆಹಾರವಾಗಲಿ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಲು ಮತ್ತು ಬಾಳೆಹಣ್ಣು ಅತಿಯಾದ ನ್ಯೂಟ್ರೀಷಿನ್ ಹೊಂದಿದೆ. ಹಾಲಿನಲ್ಲಿ ಪ್ರೋಟೀನ್, ಪೊಟ್ಯಾಷಿಯಂ, ವಿಟಮಿನ್ ಬಿ ಅಂಶಗಳಿರುವುದರಿಂದ ಇದು ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಬಾಳೆಹಣ್ಣಿನಲ್ಲಿ ಫೈಬರ್, ಮೆಗ್ನೀಸಿಯಂ, ಪೊಟ್ಯಾಷಿಯಂ, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಅಂಶಗಳಿರುತ್ತವೆ. ಆದರೆ ತಜ್ಞರು, ಹಾಲು ಮತ್ತು ಬಾಳೆಹಣ್ಣನ್ನು ಮಿಶ್ರಣ ಮಾಡಿ ಸೇವಿಸಲು ಸೂಚನೆ ನೀಡುವುದಿಲ್ಲ.
ಹಾಲಿನ ಜತೆ ಬಾಳೆಹಣ್ಣಿನ ಮಿಶ್ರಣವು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಜತೆಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಲು ಮತ್ತು ಬಾಳೆಹಣ್ಣು ಸೇವನೆ ಮಾಡುವವರು ಮೊದಲು ಹಾಲನ್ನು ಸೇವಿಸಿ 20 ನಿಮಿಷದ ಬಳಿಕ ಬಾಳೆ ಹಣ್ಣನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ಯಾರು ಬಾಳೆಹಣ್ಣು ಮತ್ತು ಹಾಲಿನ ವಿಶ್ರಣವನ್ನು ಸೇವಿಸಬಾರದು?
ಹೆಚ್ಚು ದೇಹದ ತೂಕವನ್ನು ಹೊಂದಿರುವವರು ಆದಷ್ಟು ಬಾಳೆಹಣ್ಣು ಮತ್ತು ಹಾಲಿನ ಮಿಶ್ರಣ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಇದು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುವರಿಂದ ದೇಹದ ತೂಕವನ್ನು ಹೆಚ್ಚಿಸುತ್ತದೆ. ಜತೆಗೆ ಜೀರ್ಣಕ್ರಿಯೆಗೆ ಸಮಸ್ಯೆಯಾಗುವದರಿಂದ ಜೊಜ್ಜಿನ ಹೆಚ್ಚಳಕ್ಕೆ ಕಾರಣವಾಗಬಹುದು.
ಅಸ್ತಮಾ ಸಮಸ್ಯೆ ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಹಾಲು ಮತ್ತು ಬಾಳೆಹಣ್ಣನ್ನು ಸೇವಿಸದಿರುವುದು ಉತ್ತಮ. ಈ ಎರಡು ಪದಾರ್ಥಗಳು ಉಸಿರಾಟ ಕ್ರಿಯೆಗೆ ತೊಂದರೆಯನ್ನುಂಟು ಮಾಡಬಹುದು.
ಆಯುರ್ವೇದದ ಪ್ರಕಾರ ಎಲ್ಲಾ ಆಹಾರವೂ ಸಹ ಒಂದೊಂದು ರುಚಿಯನ್ನು ಹೊಂದಿದೆ. ಪ್ರತಿಯೊಂದು ಹಣ್ಣು ಕೂಡಾ ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಎರಡು ವಿರುದ್ಧ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು ಅಥವಾ ಆಹಾರವನ್ನು ಮಿಶ್ರಣ ಮಾಡಿ ಸೇವಿಸಿದಾಗ ಅದು ದೇಹಕ್ಕೆ ನಕಾರಾತ್ಮಕ ಪರಿಣಾಮವನ್ನು ಬೀರುವುದು ಹೆಚ್ಚು.
ಇದನ್ನೂ ಓದಿ:
Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ
Health Tips: ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು, ಆದರೆ ಹಾಲಿನೊಂದಿಗೆ ಈ ಐದು ಪದಾರ್ಥಗಳನ್ನು ಸೇವಿಸುವುದು ಅಪಾಯಕಾರಿ
Published On - 7:19 am, Thu, 8 July 21