AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Benefits Of Calotropis: ಎಕ್ಕದ ಗಿಡದ ಎಲೆಗಳನ್ನು ಈ ರೀತಿ ಬಳಸಿದರೆ ಮಂಡಿ ನೋವು ಮಾಯ

ಎಕ್ಕದ ಅಥವಾ ಎಕ್ಕೆ ಗಿಡದ ಎಲೆ ಮತ್ತು ಹೂವುಗಳು ಹಲವು ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದು ಸುಲಭವಾಗಿ ಮೂಳೆಗಳು ಮತ್ತು ಸಂಧಿವಾತದಿಂದ ಉಂಟಾಗುವ ಕೀಲು ನೋವು, ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಮಾತ್ರವಲ್ಲ ಮೊಣಕಾಲು ನೋವನ್ನು ತಕ್ಷಣ ಶಮನಗೊಳಿಸುವ ಶಕ್ತಿಯನ್ನು ಹೊಂದಿದೆ.

Health Benefits Of Calotropis: ಎಕ್ಕದ ಗಿಡದ ಎಲೆಗಳನ್ನು ಈ ರೀತಿ ಬಳಸಿದರೆ ಮಂಡಿ ನೋವು ಮಾಯ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 29, 2024 | 2:59 PM

Share

ಎಕ್ಕದ ಅಥವಾ ಎಕ್ಕೆ ಗಿಡ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಈ ಎಕ್ಕದ ಗಿಡ, ಅರ್ಕ ಅಥವಾ ದೇವ ರೇಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಒಂದು ಜಾತಿಯ ಸಸ್ಯ. ಇದರ ಎಲೆ ಹಾಗೂ ಹೂವುಗಳಿಗೆ ಪೂಜೆಯಲ್ಲಿ, ಕೆಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಆಯುರ್ವೇದದಲ್ಲಿಯೂ ಅಗ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಗಿಡದ ಎಲೆ ಮತ್ತು ಹೂವುಗಳು ಹಲವು ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದು ಸುಲಭವಾಗಿ ಮೂಳೆಗಳು ಮತ್ತು ಸಂಧಿವಾತದಿಂದ ಉಂಟಾಗುವ ಕೀಲು ನೋವು, ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಮಾತ್ರವಲ್ಲ ಮೊಣಕಾಲು ನೋವನ್ನು ತಕ್ಷಣ ಶಮನಗೊಳಿಸುವ ಶಕ್ತಿಯನ್ನು ಹೊಂದಿದೆ.

ಈ ಸಸ್ಯದ ಬಗ್ಗೆ ಹಿರಿಯ ತಲೆಮಾರಿಗೆ ಪರಿಚಯವಿದ್ದರೂ ಯುವ ಜನಾಂಗಕ್ಕೆ ಅಷ್ಟಾಗಿ ಈ ಬಗ್ಗೆ ತಿಳಿದಿಲ್ಲ. ಚರ್ಮ ಸುಕ್ಕುಗಟ್ಟಿದರೆ, ವಿಷದ ಮುಳ್ಳು ತಾಗಿದರೆ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದರೆ ಅದನ್ನು ಪರಿಹಾರ ಮಾಡಲು ಈ ಗಿಡದ ಔಷಧಿ ಅತ್ಯುತ್ತಮವಾಗಿದೆ. ಇದು ಪ್ರಕೃತಿದತ್ತವಾಗಿ ಬೆಳೆಯುವ ರಸ್ತೆ ಬದಿಯ ಸಂಜೀವಿನಿ ಎಂದರೂ ತಪ್ಪಾಗಲಾರದು. ಇನ್ನು ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕೊರತೆಯಾಗುತ್ತದೆ. ಇದರಿಂದ ಕುಳಿತರೂ, ನಿಂತರೂ ನೋವು ಕಾಡಲಾರಂಭಿಸುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಹಾಗಾದರೆ ಇದನ್ನು ಯಾವ ರೀತಿ ಬಳಸಬೇಕು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಮಳೆಗಾಲದಲ್ಲಿ ಕಾಲಿನ ಬೆರಳುಗಳ ಸಂದಿಯಲ್ಲಿ ಬರುವ ಹುಳಗಳ ಬಗ್ಗೆ ಎಚ್ಚರವಿರಲಿ

ಎಕ್ಕದ ಎಲೆಗಳಿಂದ ಮಂಡಿ ನೋವು ಕಡಿಮೆ ಮಾಡುವುದು ಹೇಗೆ?

ಎಕ್ಕದ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ, ಬಳಿಕ ಆ ಎಲೆಗಳನ್ನು ತೆಗೆದು ಅದಕ್ಕೆ ಹರಳೆಣ್ಣೆ ಹಚ್ಚಿ ಬಳಿಕ ಅದನ್ನು ನೋವಿರುವ ಜಾಗದಲ್ಲಿ ಎಣ್ಣೆ ಸಹಾಯದಿಂದ ಅಂಟಿಸಿಕೊಳ್ಳಿ. ಬಳಿಕ ಒಂದು ಹಳೆ ಬಟ್ಟೆ ತೆಗೆದುಕೊಂಡು ಅದನ್ನು ಕುದಿಸಿದ ನೀರಿನಲ್ಲಿ ಅದ್ದಿ ಎಲೆ ಅಂಟಿಸಿಟ್ಟ ಜಾಗಕ್ಕೆ ಬಿಸಿ ಶಾಖ ಕೊಡಿ. ಈ ರೀತಿ ಮಾಡುವುದರಿಂದ ಕಾಲು, ಕೀಲು ನೋವುಗಳು ಮಾಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More