Periods Pain: ಮುಟ್ಟಿನ ನೋವನ್ನು ಎಂದಿಗೂ ಕಡೆಗಣಿಸಬೇಡಿ! ಈ ಸಮಸ್ಯೆಯಾಗಿರಬಹುದು

ಋತುಚಕ್ರದ ವೇಳೆ ಕಾಡುವ ಕಿಬ್ಬೊಟ್ಟೆ ನೋವು ಕೆಲವರಲ್ಲಿ ಸೌಮ್ಯವಾಗಿದ್ದರೆ ಹಲವರಲ್ಲಿ ತಡೆಯಲು ಸಾಧ್ಯವಾಗದಿರಬಹುದು. ಇದನ್ನು ಪರಿಹರಿಸಿಕೊಳ್ಳಲು ಕೆಲವರು ಆಯುರ್ವೇದ ಔಷಧಿಯ ಮೊರೆ ಹೋದರೆ ಮತ್ತೊಂದಿಷ್ಟು ಜನ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಮುಟ್ಟಿನ ನೋವನ್ನು ಎಂದಿಗೂ ಕಡೆಗಣಿಸಬಾರದು ಏಕೆಂದರೆ ಇದು ಹಲವಾರು ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.

Periods Pain: ಮುಟ್ಟಿನ ನೋವನ್ನು ಎಂದಿಗೂ ಕಡೆಗಣಿಸಬೇಡಿ! ಈ ಸಮಸ್ಯೆಯಾಗಿರಬಹುದು
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 29, 2024 | 4:37 PM

ಪ್ರತೀ ತಿಂಗಳು ಋತುಚಕ್ರದ ವೇಳೆ ಕಾಡುವ ಕೆಲವೊಂದು ಸಮಸ್ಯೆಗಳು ಮಹಿಳೆಯರನ್ನು ಇನ್ನಿಲ್ಲದಂತೆ ಕಾಡುತ್ತದೆ. ಅದರಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕೂಡ ಒಂದು. ಕೆಲವರಲ್ಲಿ ಈ ನೋವು ಸೌಮ್ಯವಾಗಿದ್ದರೆ ಹಲವರಲ್ಲಿ ತಡೆಯಲು ಸಾಧ್ಯವಾಗದಷ್ಟು ನೋವು, ಸೆಳೆತ ಕಂಡು ಬರುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಕೆಲವರು ಆಯುರ್ವೇದ ಔಷಧಿಯ ಮೊರೆ ಹೋದರೆ ಮತ್ತೊಂದಿಷ್ಟು ಜನ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಆದರೆ ಮುಟ್ಟಿನ ನೋವನ್ನು ಎಂದಿಗೂ ಕಡೆಗಣಿಸಬಾರದು ಏಕೆಂದರೆ ಇದು ಹಲವಾರು ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.

ಎಂಡೊಮೆಟ್ರಿಯೊಸಿಸ್ ಎಂದರೇನು?

ಇತ್ತೀಚಿಗೆ ಬಾಲಿವುಡ್ ನಟಿ ಶಮಿತಾ ಶೆಟ್ಟಿ ಎಂಡೊಮೆಟ್ರಿಯೊಸಿಸ್ ಎಂಬ ಗಂಭೀರ ಕಾಯಿಲೆಯಿಂದ ಬಳುತ್ತಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ನಮ್ಮಲ್ಲಿ ಹೆಚ್ಚಿನವರಿಗೆ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ತಿಳಿದಿಲ್ಲ. ಇನ್ನು ಮುಟ್ಟಿನ ಸೆಳೆತಕ್ಕೂ, ಎಂಡೊಮೆಟ್ರಿಯೊಸಿಸ್ ಕಾಯಿಲೆಗೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಮುಟ್ಟಿನ ಸಮಯದಲ್ಲಿ ಮತ್ತು ಅದರ ಸುತ್ತಲೂ ತೀವ್ರವಾದ ನೋವು ಈ ಕಾಯಿಲೆಯ ಲಕ್ಷ್ಣವಾಗಿರಬಹುದು. ಎಂಡೊಮೆಟ್ರಿಯೊಸಿಸ್ ಕಾಯಿಲೆಯಲ್ಲಿ ಗರ್ಭಾಶಯದ ಒಳ ಪದರದಂತಹ ಅಂಗಾಂಶವು ಗರ್ಭಾಶಯದ ಹೊರಗೆ ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ. ಈ ಅಂಗಾಂಶವು ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು, ಗರ್ಭಾಶಯದ ಹೊರ ಭಾಗ, ಮೂತ್ರಕೋಶ ಮತ್ತು ಕರುಳು ಸೇರಿದಂತೆ ಅನೇಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಎಂಡೊಮೆಟ್ರಿಯೊಸಿಸ್ ಅಂಗಾಂಶವು ಗರ್ಭಾಶಯದ ಒಳಪದರದಂತೆ ಕಾರ್ಯನಿರ್ವಹಿಸುತ್ತದೆ. ಇದು ಪ್ರತಿ ಋತುಚಕ್ರದೊಂದಿಗೆ ದಪ್ಪವಾಗುತ್ತದೆ, ಒಡೆಯುತ್ತದೆ ಮತ್ತು ರಕ್ತಸ್ರಾವವಾಗುತ್ತದೆ.

ತೀವ್ರ ಮುಟ್ಟಿನ ನೋವನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಅದರ ರೋಗಲಕ್ಷಣಗಳು ಉಲ್ಬಣಗೊಂಡರೆ, ಚಿಕಿತ್ಸೆ ನೀಡಲು ಸಮಸ್ಯೆ ಉಂಟಾಗಬಹುದು ಹಾಗಾಗಿ ಅತಿಯಾದ ಮುಟ್ಟಿನ ರಕ್ತಸ್ರಾವ ಅಥವಾ ನೋವು ಕಂಡುಬರುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯೊಂದಿಗೆ, ಎಂಡೊಮೆಟ್ರಿಯೊಸಿಸ್ ರೋಗಲಕ್ಷಣಗಳನ್ನು ಕಂಡು ಹಿಡಿದು ಆ ಬಳಿಕ ಅದರಿಂದ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಯಬಹುದಾಗಿದೆ.

ಇದನ್ನೂ ಓದಿ: ಎಕ್ಕದ ಗಿಡದ ಎಲೆಗಳನ್ನು ಈ ರೀತಿ ಬಳಸಿದರೆ ಮಂಡಿ ನೋವು ಮಾಯ

ಇದನ್ನು ತಡೆಯುವುದು ಹೇಗೆ?

*ಪ್ರತಿನಿತ್ಯ ಆರೋಗ್ಯಕರವಾದ ಪದಾರ್ಥಗಳನ್ನು ಸೇವಿಸಿ.

*ವ್ಯಾಯಾಮ ಅಥವಾ ಯೋಗ ಮಾಡಿ.

*ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಮಾಡಬೇಡಿ.

*ಧೂಮಪಾನ ಮತ್ತು ಸಿಗರೇಟ್ ಬಳಕೆಯನ್ನು ತಪ್ಪಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!