AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ

Health benefits of Mango Seed: ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.

Mango Seed: ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
ಮಾವಿನ ಗೊರಟೆ ಅಥವಾ ಮಾವಿನ ಬೀಜದ ಮಹಿಮೆ ತಿಳಿದುಕೊಳ್ಳಿ
TV9 Web
| Edited By: ಸಾಧು ಶ್ರೀನಾಥ್​|

Updated on: May 18, 2022 | 6:06 AM

Share

ಹಣ್ಣುಗಳ ರಾಜ ಮಾವು ಈಗ ಮಾರುಕಟ್ಟೆಯಲ್ಲಿ ನಳನಳಿಸುತ್ತಿದೆ. ಮಾವಿನ ಹಣ್ಣು ತಿಂದ ನಂತರ ಗೊರಟೆಗಳನ್ನು (Mango Seed) ಕಸವೆಂದು ಬಿಸಾಡದೆ ಈ ರೀತಿ ಉಪಯೋಗಿಸಿ (Health benefits of Mango Seed).

* ಮಾವಿನ ಗೊರಟೆಗಳನ್ನು ( ಗುಟ್ಟಲಿ) ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. * ಗೊರಟೆಯಯೊಳಗಿನ ಬೀಜಗಳನ್ನು ಬೇರ್ಪಡಿಸಿಕೊಂಡು, ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನಂತರ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ನೆರಳಲ್ಲಿ ಒಣಗಿಸಿ. * ಈ ಬೀಜಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, ಕತ್ತರಿಸಿದ ಚೂರುಗಳನ್ನು ಸ್ವಲ್ಪ ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. * ಹುರಿದ ಈ ಚೂರುಗಳಿಗೆ ಕರಿ ಉಪ್ಪು ಸೇರಿಸಿ. * ಊಟದ ನಂತರ ಒಂದಿಷ್ಟು ಚೂರುಗಳನ್ನು ತಿಂದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. * ಈ ಬೀಜಗಳನ್ನು ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಶೋಧಿಸಿ ಇಟ್ಟುಕೊಳ್ಳಿ. ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲಿಗೆ ಹೊಳಪು ಬರುತ್ತದೆ. * ಬೀಜಗಳ ಪೌಡರ್ 10 ಗ್ರಾಂ ನಷ್ಟು ಬೆಳಿಗ್ಗೆ ಮೊಸರಿನಲ್ಲಿ ತೆಗೆದುಕೊಂಡರೆ ಅತಿಸಾರ ಭೇದಿ ಕಡಿಮೆಯಾಗುತ್ತದೆ. * ಚಿಕ್ಕ ಮಕ್ಕಳ ಭೇದಿ ತಡೆಗಟ್ಟಲು ಹುರಿದ ಪೌಡರ್ 05 ಗ್ರಾಂ ನಷ್ಟು ಜೇನುತುಪ್ಪ ಸೇರಿಸಿ ಕೊಡಬಹುದು. * ಹೊಟ್ಟೆ ನೋವಿಗೆ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು. * ಹುರಿದ ಬೀಜಗಳ ಚೂರುಗಳ ಸೇವನೆ ಮಧುಮೇಹಿಗಳಿಗೆ ಕೂಡ ಉತ್ತಮ. * ಒಂದು ಬಾರಿಗೆ 5 ಗ್ರಾಂ ನಷ್ಟು ಉಪಯೋಗಿಸಬಹುದು. * ತುಪ್ಪದಲ್ಲಿ ಹುರಿದ ಚೂರುಗಳಿಗೆ ಸಿಹಿ ಬೇಕಾದರೆ ಜೇಷ್ಠ ಮಧು ಪೌಡರ್ ಉಪಯೋಗಿಸಬಹುದು. * ಒಣಗಿದ ಮಾವಿನ ಎಲೆಗಳು ಮತ್ತು ಈ ಬೀಜಗಳನ್ನು ಸೇರಿಸಿ ನಯವಾದ ಪುಡಿ ಮಾಡಿ ಸೋಸಿಕೊಳ್ಳಿ. ಈ ಪುಡಿಯಿಂದ ಹಲ್ಲು ಉಜ್ಜಿದರೆ ವಸಡುಗಳು ಗಟ್ಟಿಯಾಗಿ ಹಲ್ಲುಗಳು ಕೂಡ ಸ್ವಚ್ಛವಾಗಿ, ಬಾಯಿಯ ದುರ್ಗಂಧ ಕೂಡ ದೂರವಾಗುತ್ತದೆ. * ಸಂಗ್ರಹಿಸಿದ ವಿವಿಧ ಜಾತಿಯ ಮಾವಿನ ಗೊರಟೆಗಳಿಂದ ಮಾವಿನ ಸಸಿಗಳನ್ನು ಕೂಡ ತಯಾರಿಸಬಹುದು. (ಮಾಹಿತಿ ಲೇಖನ -ಎಸ್​ ಹೆಚ್​ ನದಾಫ್)

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ