AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಪ್ರತಿದಿನ ಸುಸ್ತು ಅತಿಯಾದ ಆಯಾಸದಿಂದ ಬಳಲುತ್ತಿದ್ದೀರಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ

ನೀವು ಅತಿಯಾದ ಆಯಾಸ ಸುಸ್ತು ಅನುಭವಿಸುತ್ತಿದ್ದರೆ, ಈ ಸಮಸ್ಯೆಯನ್ನು ಪರಿಹಾರಗೊಳಿಸಲು ಈ ಐದು ವಿಷಯಗಳನ್ನು ಪಾಲಿಸಿ.

Health Tips: ಪ್ರತಿದಿನ ಸುಸ್ತು ಅತಿಯಾದ ಆಯಾಸದಿಂದ ಬಳಲುತ್ತಿದ್ದೀರಾ? ಆರೋಗ್ಯ ತಜ್ಞರ ಸಲಹೆ ಇಲ್ಲಿದೆ
Lower EnergyImage Credit source: Hindustan Times
TV9 Web
| Edited By: |

Updated on:Nov 09, 2022 | 6:45 PM

Share

ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಯಾಸ, ಸುಸ್ತು ಸಾಮಾನ್ಯ. ಆದರೆ ನೀವು ಅತಿಯಾದ ಆಯಾಸದಿಂದ ಬಳಲುತ್ತಿದ್ದರೆ, ನೀವು ಆರೋಗ್ಯದ ಕಡೆ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಒತ್ತಡ ಮತ್ತು ನಿದ್ರೆಯ ಮಟ್ಟ ಮತ್ತು ನೀವು ಸೇವಿಸುವ ಆಹಾರಗಳು ಎಲ್ಲವೂ ಒಳಗೊಂಡಿದೆ. ಕೆಲವೊಮ್ಮೆ ಕೆಲಸದ ಒತ್ತಡದ ನಡುವೆ ಸರಿಯಾದ ಆಹಾರ ಸೇವಿಸದೇ ಇರುವುದು, ಅಥವಾ ಡೊನಟ್ಸ್ ಮುಂತಾದ ಆಹಾರವನ್ನು ರೂಢಿಸಿಕೊಳ್ಳುವುದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ.

ಪ್ರತಿದಿನ ಸುಸ್ತು ಅತಿಯಾದ ಆಯಾಸದಿಂದ ಬಳಲುತ್ತಿದ್ದರೆ, ಇದಕ್ಕೆ ಕಾರಣವಾಗುವ ಪ್ರಮುಖ 5 ಕಾರಣಗಳ ಕುರಿತು ಯೋಗ ತರಬೇತುದಾರ ಮತ್ತು ಸಾತ್ವಿಕ್ ಯೋಗದ ಸಂಸ್ಥಾಪಕಿ ರಾಧಿಕಾ ಗುಪ್ತಾರವರು ಸಲಹೆ ನೀಡುತ್ತಾರೆ. ಅವುಗಳು ಈ ಕೆಳಗಿನಂತಿವೆ:

1. ಮದ್ಯಪಾನ ಅತಿಯಾದ ಮದ್ಯಪಾನ ಸೇವನೆ ನಿಮ್ಮ ದೇಹ ದೈನಂದಿನ ಚಟುವಟಿಕೆಗಳಲ್ಲಿ ಚುರುಕುತದಿಂದಿರಲು ಅಡ್ಡಿಪಡಿಸುತ್ತದೆ. ಹಾಗೂ ಯಾವುದೇ ರೋಗದ ವಿರುದ್ಧ ಹೋರಾಡುವ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆಗೊಳಿಸುತ್ತದೆ.

2.ನಕಾರಾತ್ಮಕ ವಿಷಯವನ್ನು ನೋಡುವುದು ಗೊಂದಲದ ಅಥವಾ ಭಯಾನಕ ವಿಷಯವು ನಿಮ್ಮನ್ನು ದುರ್ಬಲಗೊಳಿಸುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಇದು ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ ಆದಷ್ಟು ಯೋಗ ಹಾಗೂ ಮನಸ್ಸಿಗೆ ಶಾಂತಿ ನೀಡುವ ವಿಷಯಗಳ ಕುರಿತು ಗಮನಹರಿಸುವುದು ಉತ್ತಮ.

3. ಅಧಿಕ ಆಹಾರದ ಸೇವನೆ: ಯಾವುದೇ ಸಮಾರಂಭಗಳಲ್ಲಿ ಅಧಿಕವಾಗಿ ತಿನ್ನುವುದು, ಭಾರವಾದ ಆಹಾರಗಳು ನಮ್ಮ ಶಕ್ತಿಯನ್ನು 70-80% ತೆಗೆದುಕೊಳ್ಳುತ್ತವೆ ಮತ್ತು ನಮಗೆ ಆಲಸ್ಯವನ್ನುಂಟುಮಾಡುತ್ತವೆ. ಆದ್ದರಿಂದ ಆದಷ್ಟು ಹಿತ ಮಿತವಾಗಿರುವ ಆಹಾರ ಪದಾರ್ಥಗಳ ಬಗ್ಗೆ ಗಮನಹರಿಸುವುದು ಉತ್ತಮ.

4.ಸುಳ್ಳು: ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೆಚ್ಚು ಸುಳ್ಳನ್ನು ಸೃಷ್ಟಿಸುವುದು. ಇದು ಪ್ರತಿ ಸಲ ನಿಮ್ಮನ್ನು ಭಯದ ವಾತಾವರಣದಲ್ಲಿ ಇರುವಂತೆ ಮಾಡುತ್ತದೆ. ನಿಮ್ಮೊಂದಿಗೆ ಮತ್ತು ಇತರರೊಂದಿಗೆ ನೀವು ಪ್ರಾಮಾಣಿಕವಾಗಿರಲು ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ. ನಿಮ್ಮ ಸತ್ಯದಿಂದ ಆರಾಮವಾಗಿ ಇರಬಹುದು.

ಇದನ್ನು ಓದಿ: ನಿಮ್ಮ ಈ 5 ದೈನಂದಿನ ಅಭ್ಯಾಸಗಳು ಮರೆವಿನ ಕಾಯಿಲೆಯನ್ನು ಹೆಚ್ಚಿಸಬಹುದು ಎಚ್ಚರದಿಂದಿರಿ

5.ಧೀರ್ಘ ಉಸಿರು ತೆಗೆದುಕೊಳ್ಳಿ:

ನಿಮ್ಮ ಉಸಿರು ನಿಮ್ಮ ಎಲ್ಲಾ ಚಲನೆಗಳಿಗೆ ಶಕ್ತಿ ನೀಡುತ್ತದೆ. ನಿಮ್ಮ ಉಸಿರಾಟವು ಆಳವಿಲ್ಲದ ಮತ್ತು ವೇಗವಾಗಿದ್ದರೆ, ಒಂದು ನಿರ್ದಿಷ್ಟ ಜಡತ್ವವು ವ್ಯವಸ್ಥೆಯಲ್ಲಿ ಬರುತ್ತದೆ. ಹೆಚ್ಚಿನ ಮತ್ತು ಸ್ಥಿರವಾದ ಶಕ್ತಿಗಾಗಿ ಆಳವಾದ, ಸ್ಥಿರವಾದ, ನಿಧಾನವಾದ ಉಸಿರಾಟವು ಅತ್ಯಗತ್ಯವಾಗಿರುತ್ತದೆ. ಬಹು ಮುಖ್ಯವಾಗಿ, ಆಳವಾಗಿ ಉಸಿರಾಡಲು ಪ್ರಾರಂಭಿಸಿ. 10 ನಿಮಿಷಗಳ ಪ್ರಾಣಾಯಾಮ ಅಭ್ಯಾಸದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:45 pm, Wed, 9 November 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ