Heart Problem: ಹೃದ್ರೋಗಿಗಳ ವಯಸ್ಸು ಯಾವುದಿರಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ
ಹೃದ್ರೋಗಿಗಳ ವಯಸ್ಸು ಯಾವುದಿರಲಿ ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ ಎಂಬುದು ವೈದ್ಯರ ಮಾತು. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇತರೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಹೃದ್ರೋಗಿಗಳ ವಯಸ್ಸು ಯಾವುದಿರಲಿ ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ ಎಂಬುದು ವೈದ್ಯರ ಮಾತು. ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇತರೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಯಾರಿಗಾದರೂ ತಮಗೆ ಕಾಯಿಲೆ ಇದೆ ಎಂದು ತಿಳಿದಾಗ ಕ್ರಮೇಣವಾಗಿ ಖಿನ್ನತೆಗೆ ಒಳಗಾಗುವುದು ಸಾಮಾನ್ಯ.
ಪಂಚದಾದ್ಯಂತ ಸಂಭವಿಸುವ ಸಾವುಗಳಿಗೆ ಸಿವಿಡಿ ಪ್ರಮುಖ ಕಾರಣವಾಗಿದ್ದು, 7.4 ದಶಲಕ್ಷ ಜನರು ಇಸ್ಕೆಮಿಕ್ ಹೃದ್ರೋಗ (ಐಎಚ್‌ಡಿ) ಮತ್ತು ಕೊರೋನರಿ ಆರ್ಟರಿ ರೋಗದಿಂದ (ಸಿಎಡಿ) ಸಾವಿಗೀಡಾಗುತ್ತಾರೆ. ಐಎಚ್‌ಡಿ ಎಂಬುದು ಒಂದು ಸ್ಥಿತಿಯಾಗಿದ್ದು, ಆರ್ಟರಿಯಲ್ಲಿ ಪ್ಲೇಕ್ ಕಟ್ಟಿಕೊಂಡು ಹೃದಯಕ್ಕೆ ರಕ್ತಸಂಚಾರವಾಗದಂತೆ ಮಾಡುತ್ತದೆ. ಅಧಿಕ ರಕ್ತದೊತ್ತಡ (ಆರ್ಟೀರಿಯಲ್ ರಕ್ತದೊತ್ತಡವು ಒಳಗೊಂಡಂತೆ) ಡಯಾಬಿಟಿಸ್ ಕುಟುಂಬದ ಐಎಚ್‌ಡಿ ಹಿನ್ನೆಲೆ ಡಿಸ್ಲಿಪಿಡೀಮಿಯಾ ಧೂಮಪಾನ ಬೊಜ್ಜು ದೈಹಿಕ ನಿಷ್ಕ್ರಿಯತೆ ಒತ್ತಡ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯು ವೈದ್ಯಕೀಯ ಅರ್ಥದಲ್ಲಿ ನಿಜವಾಗಿ ಅನಾರೋಗ್ಯಕ್ಕೊಳಗಾಗದೆ ಕೋಪ, ಆತಂಕ, ಭ್ರಮೆ, ಖಿನ್ನತೆ ಮತ್ತು ಗೊಂದಲಮಯ ಭಾವನೆಗಳಂತಹ ಲಕ್ಷಣಗಳನ್ನು ಹೊರಹಾಕಬಹುದು, ಅಂತೆಯೇ ಮಾನಸಿಕ ತೊಳಲಾಟವು, ವೈದ್ಯಕೀಯವಾಗಿ ವ್ಯಾಖ್ಯಾನಿಸಲಾದ ರೋಗಲಕ್ಷಣಗಳನ್ನು ಅಥವಾ ಸ್ಥಿತಿಯನ್ನು ಗುಂಪಾಗಿ ಒಟ್ಟುಗೂಡಿಸುತ್ತದೆ. ಮಾನಸಿಕ ಅಸ್ವಸ್ಥತೆ ಅಥವಾ ಮಾನಸಿಕ ತೊಳಲಾಟ, ಇವು ವ್ಯಕ್ತಿಯು ಜೀವನದಲ್ಲಿ ಗೊಂದಲ ಮತ್ತು ತೊಂದರೆಗಳು ಎದುರಾದಾಗ ಅನುಭವಿಸುವ ರೋಗಲಕ್ಷಣಗಳನ್ನು ಹೆಸರಿಸಲು ಬಳಸುವ ಪದಗಳಾಗಿವೆ. ರೋಗದ ಹೊರತಾಗಿಯು,ರೋಗದ ಹೊರತಾಗಿಯು, ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಘಟನೆಗಳು
ನಿರುದ್ಯೋಗ ನಿದ್ರೆಯ ಕೊರತೆ
ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಒತ್ತಡ ನಿಂದನೆ ಅಪಘಾತ
ಮಾನಸಿಕ ಅಸ್ವಸ್ಥತೆ ಮತ್ತು ಐಎಚ್‌ಡಿ ನಡುವೆ ಸಂಬಂಧ ಇರುವುದು ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಲ್ಲಿ ಐಎಚ್‌ಡಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ, ಐಎಚ್‌ಡಿ ಹೊಂದಿರುವ ರೋಗಿಗಳು ಕೂಡ ಹೆಚ್ಚು ಮಾನಸಿಕ ತೊಳಲಾಟಕ್ಕೀಡಾಗಬಹುದು.
ಧ್ಯಾನ: ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಇದು ಸಣ್ಣ ಅವಧಿಗಳೊಂದಿಗೆ ಪ್ರಾರಂಭವಾಗಬೇಕು, ಉದಾ, ಒಂದು ಬಾರಿಗೆ 10 ನಿಮಿಷಗಳು.
ಉಸಿರಾಟದ ವ್ಯಾಯಾಮ: ನೀವು ನಿತ್ಯ 10-15 ನಿಮಿಷಗಳ ಕಾಲ ನಿಯಮಿತವಾಗಿ ಉಸಿರಾಟದ ವ್ಯಾಯಾಮ ಮಾಡುವುದು ಸಹಾಯಕವಾಗಲಿದೆ.
ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ): ಒತ್ತಡ, ಖಿನ್ನತೆ, ಆತಂಕ ಇರುವ ರೋಗಿಗಳಿಗೆ ಸಿಬಿಟಿ ಒಳ್ಳೆಯದು. ಹೊರಗಿನ ಚಿಂತನೆಗಳಿಂದ ಉಂಟಾಗುವ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಗುರುತಿಸಲು ಸಿಬಿಟಿ ನೆರವಾಗುತ್ತದೆ.
ವ್ಯಾಯಾಮ: ದಿನಕ್ಕೆ ಕನಿಷ್ಠ 30 ನಿಮಿಷಗಳಾದರೂ ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮ, ಟ್ರೆಡ್‌ಮಿಲ್‌ನಲ್ಲಿ ನಡೆಯುವುದು, ಸೈಕ್ಲಿಂಗ್, ಈಜು, ಜಾಗಿಂಗ್, ಮೆಟ್ಟಿಲು ಹತ್ತುವುದು ಮತ್ತು ಚುರುಕಾದ ನಡಿಗೆ ಮುಂತಾದ ಚಟುವಟಿಕೆಗಳು.