Dengue spike: ಮಕ್ಕಳಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಡೆಂಗ್ಯೂ, ಪೋಷಕರೇ ಎಚ್ಚರ ವಹಿಸಿ ಎಂದ ಡಾ.ಸುಧೀರ್

ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಗಳ ವೈದ್ಯರು ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಗಮನಾರ್ಹ ಹೆಚ್ಚಳವನ್ನು ಗಮನಿಸಿದ್ದು ಪ್ರತಿದಿನ ಸರಾಸರಿ 10 ಪ್ರಕರಣಗಳು ವರದಿಯಾಗುತ್ತಿದ್ದು ತಿಂಗಳಿಗೆ ಸರಿಸುಮಾರು 300- 400 ಮಕ್ಕಳಲ್ಲಿ ಇದು ಕಂಡುಬರುತ್ತಿದೆ ಎಂಬ ಆಘತಕಾರಿ ಹೇಳಿಕೆಯನ್ನು ಹಂಚಿಕೊಂಡಿದ್ದು, ಮಕ್ಕಳಲ್ಲಿ ಪೋಷಕರು ಗಮನಿಸಬೇಕಾದ ರೋಗಲಕ್ಷಣಗಳು ಮತ್ತು ಅವರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

Dengue spike: ಮಕ್ಕಳಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಡೆಂಗ್ಯೂ, ಪೋಷಕರೇ ಎಚ್ಚರ ವಹಿಸಿ ಎಂದ ಡಾ.ಸುಧೀರ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2024 | 12:38 PM

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ, ಹಾಗಾಗಿ ಬೇಗ ಎಚ್ಛೆತ್ತುಕೊಂಡು ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಮಳೆಯು ಸೊಳ್ಳೆಗಳಿಗೆ, ವಿಶೇಷವಾಗಿ ಡೆಂಗ್ಯೂ ವೈರಸ್ ಹರಡಲು ಕಾರಣವಾದ ಈಡಿಸ್ ಜಾತಿಗಳಿಗೆ ಸೂಕ್ತ ಸಂತಾನೋತ್ಪತ್ತಿ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಬಗ್ಗೆ ಸಂಬಂಧ ಪಟ್ಟಂತೆ ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಗಳ ವೈದ್ಯರು ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಗಮನಾರ್ಹ ಹೆಚ್ಚಳವನ್ನು ಗಮನಿಸಿದ್ದು ಪ್ರತಿದಿನ ಸರಾಸರಿ 10 ಪ್ರಕರಣಗಳು ವರದಿಯಾಗುತ್ತಿದ್ದು ತಿಂಗಳಿಗೆ ಸರಿಸುಮಾರು 300- 400 ಮಕ್ಕಳಲ್ಲಿ ಇದು ಕಂಡುಬರುತ್ತಿದೆ ಎಂಬ ಆಘತಕಾರಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಮದರ್ ಹುಡ್ ಆಸ್ಪತ್ರೆಗಳ ಮಕ್ಕಳ ತಜ್ಞ ಡಾ. ಸುಧೀರ್ ಯು. ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮಕ್ಕಳಲ್ಲಿ ಪೋಷಕರು ಗಮನಿಸಬೇಕಾದ ರೋಗಲಕ್ಷಣಗಳು ಮತ್ತು ಅವರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಮಕ್ಕಳಲ್ಲಿ ಡೆಂಗ್ಯೂ ರೋಗದ ಲಕ್ಷಣಗಳು

“ಡೆಂಗ್ಯೂವಿನ ಆರಂಭಿಕ ಹಂತಗಳಿಂದ ಬಳಲುತ್ತಿರುವ ಮಕ್ಕಳಲ್ಲಿ ಆಯಾಸ, ತಲೆನೋವು ಮತ್ತು ವಾಕರಿಕೆ ಕಂಡುಬರಬಹುದು, ಇದು ಡೆಂಗ್ಯೂವಿನ ಕೆಲವು ಸಾಮಾನ್ಯ ಲಕ್ಷಣವಾಗಿದ್ದು ಈ ಹಂತದಲ್ಲಿ ಅವುಗಳನ್ನು ಗುರುತಿಸುವುದು ಕೂಡ ವೈದ್ಯಕೀಯ ಆರೈಕೆಗೆ ಅತ್ಯಗತ್ಯ” ಎಂದು ಡಾ. ಸುಧೀರ್ ಹೇಳುತ್ತಾರೆ. ವೈದ್ಯರ ಪ್ರಕಾರ, ಇದು ಹೆಚ್ಚಾದಲ್ಲಿ ತೀವ್ರ ವಾಂತಿ ಮತ್ತು ರಕ್ತಸ್ರಾವ ಸೇರಿದಂತೆ ಇನ್ನಿತರ ರೋಗಲಕ್ಷಣಗಳು ಕಂಡು ಬರಬಹುದು. ಆದ್ದರಿಂದ, ಸೊಳ್ಳೆ ಕಡಿತ ಮತ್ತು ಡೆಂಗ್ಯೂ ಸೋಂಕು ಹರಡುವುದನ್ನು ತಪ್ಪಿಸಲು ಪೋಷಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದರಲ್ಲಿಯೂ ಆರಂಭಿಕ ಹಂತಗಳಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮಗು ಗಂಭೀರ ರೋಗಲಕ್ಷಣಗಳಿಂದ ಪಾರಾಗಬಹುದು.

ಇದನ್ನೂ ಓದಿ: ಮಕ್ಕಳ‌ಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ; ಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಮಕ್ಕಳನ್ನು ರಕ್ಷಿಸಲು ಪೋಷಕರು ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳು;

  • ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
  • ಮಕ್ಕಳು ಹೊರಗಡೆ ಹೋಗುವಾಗ ಸೊಳ್ಳೆ ನಿವಾರಕಗಳನ್ನು ಬಳಸುವುದನ್ನು ಮರೆಯಬೇಡಿ.
  • ಮಕ್ಕಳಿಗೆ ದೇಹ ಮುಚ್ಚುವ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವಂತೆ ಹೇಳಿ. ಅಂದರೆ, ಸ್ಲೀವ್ ಲೆಸ್ ಅಥವಾ ಅರ್ಧ ತೋಳಿನ ಟಿ-ಶರ್ಟ್ ಗಳ ಬದಲು ಪೂರ್ಣ ತೋಳಿನ ಶರ್ಟ್ ಗಳು, ದಪ್ಪದ ಪ್ಯಾಂಟ್ ಇತರ ಬಟ್ಟೆಗಳನ್ನು ಬಳಸಿ.

ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದರೆ, ಮಗುವನ್ನು ಸ್ವಲ್ಪ ದಿನಗಳ ಕಾಲ ಹೊರಾಂಗಣ ಚಟುವಟಿಕೆಗಳಿಗೆ ಹೋಗದಂತೆ ತಡೆಯಿರಿ. ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಅನುಮಾನ ಬಂದರೂ ಕೂಡ ನಿಮ್ಮ ವೈದ್ಯರನ್ನು ಸಂಪರ್ಕಿಸಿ ರಕ್ಷಣಾತ್ಮಕ ಕ್ರಮಗಳನ್ನು ಚರ್ಚಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ