AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದೆಯುರಿ – ಅಸಿಡಿಟಿಯಿಂದ ಬಳಲುತ್ತಿದ್ದೀರಾ? ಈ ಎರಡು ಸಲಹೆ ತುಂಬಾ ಶಕ್ತಿಯುತ, ಪ್ರಯತ್ನಿಸಿ ನೋಡಿ

ಗ್ಯಾಸ್​​ ಮತ್ತು ಎದೆಯುರಿ ಉಂಟಾದಾಗ ಅದರಿಂದ ಹುಳಿ ತೇಗು ಆರಂಭವಾಗುತ್ತದೆ. ಗ್ಯಾಸ್ ನಿಂದಾಗಿ ಹೊಟ್ಟೆ ಉಬ್ಬುವುದು, ಎದೆ ಮತ್ತು ಗಂಟಲು ಉರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಿಂದ ಆಹಾರವು ಸರಿಯಾಗಿ ಜೀರ್ಣವಾಗದ ಕಾರಣ ಅದು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಈ ಸ್ಥಿತಿಯಿಂದ ತಕ್ಷಣದ ಪರಿಹಾರ ಪಡೆಯಲು ಅಲೊ ವೇರಾ ಜ್ಯೂಸ್ (Aloe Vera Juice) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಎದೆಯುರಿ - ಅಸಿಡಿಟಿಯಿಂದ ಬಳಲುತ್ತಿದ್ದೀರಾ? ಈ ಎರಡು ಸಲಹೆ ತುಂಬಾ ಶಕ್ತಿಯುತ, ಪ್ರಯತ್ನಿಸಿ ನೋಡಿ
ಹೊಟ್ಟೆ ನೋವು- ಅಸಿಡಿಟಿಯಿಂದ ಬಳಲುತ್ತಿದ್ದೀರಾ?
ಸಾಧು ಶ್ರೀನಾಥ್​
|

Updated on: Oct 26, 2023 | 6:06 AM

Share

ಹಬ್ಬ ಹರಿದಿನಗಳಲ್ಲಿ ಜನರು ದಿನನಿತ್ಯ ತಿನ್ನುವುದಕ್ಕಿಂತ ಸ್ವಲ್ಪ ಹೆಚ್ಚು ಆಹಾರ ತೆಗೆದುಕೊಳ್ಳುತ್ತಾರೆ. ಆದರೆ ಆ ನಿಮ್ಮ ಪುಷ್ಕಳ ಸಂತೋಷಕ್ಕೆ ಅಸಿಡಿಟಿ (Acidity) ಅಡ್ಡಿಪಡಿಸಿದರೆ ಕಷ್ಟವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಆಮ್ಲೀಯತೆ ಉಂಟಾಗುತ್ತದೆ. ಇದು ಜೀರ್ಣಾಂಗವ್ಯೂಹದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವರು ಸಮಯಕ್ಕೆ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಮಧ್ಯಾಹ್ನ 12 ಗಂಟೆಗೆ ಉಪಹಾರ ಮಾಡಿ ಮತ್ತು ರಾತ್ರಿ ವೇಳೆಗೆ ಊಟ ಮಾಡುತ್ತಾರೆ. ಮಧ್ಯದಲ್ಲಿ ಹಸಿವು ಎನಿಸಿದರೆ ಜಂಕ್ ಫುಡ್​ ಅಥವಾ ಹೊರಗಿನ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುತ್ತೀರಾ. ಇದು ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಸಮಸ್ಯೆಗಳು ಮುಖ್ಯವಾಗಿ ಗ್ಯಾಸ್​​ ಮತ್ತು ಎದೆಯುರಿಯನ್ನು ಉಂಟುಮಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಆರೋಗ್ಯ (Health) ತಜ್ಞರು ನೈಸರ್ಗಿಕ ವಿಧಾನಗಳನ್ನು ಶಿಫಾರಸು ಮಾಡುತ್ತಾರೆ (Home Remedies). ಅದೇನೆಂದು ತಿಳಿದುಕೊಳ್ಳೋಣ..

ಅಲೊ ವೇರಾ ಜ್ಯೂಸ್ (Aloe Vera Juice)

ಗ್ಯಾಸ್​​ ಮತ್ತು ಎದೆಯುರಿ ಉಂಟಾದಾಗ ಅದರಿಂದ ಹುಳಿ ತೇಗು ಆರಂಭವಾಗುತ್ತದೆ. ಗ್ಯಾಸ್ ನಿಂದಾಗಿ ಹೊಟ್ಟೆ ಉಬ್ಬುವುದು, ಎದೆ ಮತ್ತು ಗಂಟಲು ಉರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಎದೆ ನೋವು ಕೂಡ ಉಂಟಾಗುತ್ತದೆ. ತಿಂದ ಆಹಾರವು ಸರಿಯಾಗಿ ಜೀರ್ಣವಾಗದ ಕಾರಣ ಅದು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಸ್ಟ್ರೀಟ್ ಫುಡ್ ಕೂಡ ಅತಿಸಾರದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸ್ಥಿತಿಯಿಂದ ತಕ್ಷಣದ ಪರಿಹಾರ ಪಡೆಯಲು ಅಲೊ ವೇರಾ ಜ್ಯೂಸ್ (Aloe Vera Juice) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಅಲೊ ವೇರಾ ಜ್ಯೂಸ್ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ. ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಕಲೆಗಳನ್ನು ತೆಗೆದುಹಾಕಲು ಇದು ವಿಶೇಷವಾಗಿ ಉಪಯುಕ್ತವಾಗಿದೆ. ಆದರೆ ಅಲೊ ವೇರಾ ಜ್ಯೂಸ್ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಲೊ ವೇರಾ ಜ್ಯೂಸ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಇದನ್ನೂ ಓದಿ: ಬೆಳಗ್ಗೆ ಹಲ್ಲುಜ್ಜದೆ ಆಹಾರ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮ್ಮ ವಸಡಿಗೆ ಮಾತ್ರವಲ್ಲ ಹೃದಯಕ್ಕೂ ಅಪಾಯ

ಇದು ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಈ ಪದಾರ್ಥಗಳು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯನ್ನು ಶಾಂತವಾಗಿರಿಸುತ್ತದೆ. ತಾಜಾ ಅಲೊ ವೇರಾ ಜ್ಯೂಸ್ವ ಅನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅಸಿಡಿಟಿಯಿಂದ ತಕ್ಷಣವೇ ಪರಿಹಾರ ಸಿಗುತ್ತದೆ. ದಿನಕ್ಕೆ 2-3 ಬಾರಿ ಅಲೊ ವೇರಾ ಜ್ಯೂಸ್ ಕುಡಿಯುವುದರಿಂದ ಗ್ಯಾಸ್ ಮತ್ತು ಎದೆಯುರಿಯಿಂದ ಪರಿಹಾರ ಪಡೆಯಬಹುದು.

ಮಸಾಲಾ ದಿನಸಿ ಪದಾರ್ಥದಿಂದ ಹೀಗೆ ಮಾಡಿಕೊಳ್ಳಿ.. ನೀವು ಎದೆಯುರಿ ಅನುಭವಿಸಿದಾಗ, ತಕ್ಷಣದ ಪರಿಹಾರಕ್ಕಾಗಿ ಕೆಲವು ಮಸಾಲೆಗಳನ್ನು ಬಳಸಬಹುದು. ಇವು ನಿಮಗೆ ಗ್ಯಾಸ್ ಮತ್ತು ಎದೆಯುರಿಯಿಂದ ತ್ವರಿತ ಪರಿಹಾರವನ್ನು ನೀಡುತ್ತವೆ. ಅಂತಹ ಪ್ರಯೋಜನಕಾರಿ ಮಸಾಲೆಗಳಲ್ಲಿ ಜೀರಿಗೆ, ಅಲೋವೆರಾ, ದಾಲ್ಚಿನ್ನಿ ಚಕ್ಕೆ ಮತ್ತು ಅಲೋವೆರಾ ಪುಡಿ ಪ್ರಮುಖವಾಗಿವೆ. ಈ ಮಸಾಲೆಗಳು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹಲ್ಲು ನೋವು ಕಾಡುತ್ತಿದೆಯೇ?; ಈ ಆಯುರ್ವೇದ ಮದ್ದುಗಳನ್ನು ಬಳಸಿ

ಅದರಲ್ಲೂ ಗ್ಯಾಸ್ ಸಮಸ್ಯೆ ನಿವಾರಣೆಗೆ ಇವು ತುಂಬಾ ಉಪಯುಕ್ತವಾಗಿದೆ. ಯಾವುದಾದರೂ ಒಂದು ಬಗೆಯ ಮಸಾಲೆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಬೆರೆಸಿ. ತರುವಾಯ, ಯಾವುದೇ ಸಮಯದಲ್ಲಿ ತಣ್ಣೀರು ಜೊತೆಗೆ ಕುಡಿಯುವುದರಿಂದ ಆಮ್ಲೀಯತೆಯನ್ನು ನಿವಾರಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ