ತಣ್ಣಗಾದ vs ಬಿಸಿ ಬಿಸಿ ಹಾಲು ಇವೆರಡರಲ್ಲಿ ನಮ್ಮ ಆರೋಗ್ಯಕ್ಕೆ ಯಾವುದು ಉತ್ತಮ?

ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಮಕ್ಕಳಿಗಾಗಲಿ ಅಥವಾ ವಯಸ್ಸಾದವರಿಗಾಗಲಿ ಆರೋಗ್ಯ ಕಾಪಾಡಿಕೊಳ್ಳಲು ಹಾಲು ಕುಡಿಯಿರಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಅನೇಕರಿಗೆ ಹಾಲನ್ನು ತಣ್ಣಗಿರುವಾಗ ಕುಡಿಯಬೇಕೋ ಅಥವಾ ಅದನ್ನು ಬಿಸಿ ಇರುವಾಗಲೇ ಸೇವನೆ ಮಾಡಬೇಕೋ ಎಂಬ ಅನುಮಾನ ಇರುತ್ತದೆ. ಅದರಲ್ಲಿಯೂ ಹಾಲನ್ನು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯುವುದರಿಂದ ವಿಭಿನ್ನ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಹೇಗೆ ಸೇವನೆ ಮಾಡಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ತಣ್ಣಗಾದ vs ಬಿಸಿ ಬಿಸಿ ಹಾಲು ಇವೆರಡರಲ್ಲಿ ನಮ್ಮ ಆರೋಗ್ಯಕ್ಕೆ ಯಾವುದು ಉತ್ತಮ?
Hot Milk Vs Cold Milk

Updated on: Jul 22, 2025 | 7:40 PM

ಪ್ರತಿನಿತ್ಯ ಹಾಲು (Milk) ಕುಡಿಯುವ ಅಭ್ಯಾಸ ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಅದಕ್ಕಾಗಿಯೇ ವೈದ್ಯರು ಹಾಲು ಸಂಪೂರ್ಣ ಆರೋಗ್ಯಕ್ಕೆ ಅತ್ಯಗತ್ಯ ಎಂದು ಪದೇ ಪದೇ ಹೇಳುತ್ತಾರೆ. ಮಾತ್ರವಲ್ಲ ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಲ್ಲಿ ವಿಟಮಿನ್‌ಗಳು, ಪ್ರೋಟೀನ್‌ಗಳು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಒಂದೇ ಒಂದು ಪಾನೀಯದಲ್ಲಿ ಎಲ್ಲಾ ರೀತಿಯ ಅಂಶಗಳು ಇರುವುದರಿಂದ ಬೆಳೆಯುತ್ತಿರುವ ಮಕ್ಕಳು ಹಾಲು ಕುಡಿಯಬೇಕು ಎಂದು ಹೇಳಲಾಗುತ್ತದೆ. ಹಾಲು ಮಕ್ಕಳ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಹಾಲಿನಲ್ಲಿ ವಿಟಮಿನ್ ಡಿ ಇದೆ, ಇದು ದೇಹಕ್ಕೆ ಬಹಳ ಅವಶ್ಯಕವಾಗಿದೆ. ಆದರೆ ಅನೇಕರಿಗೆ ಹಾಲನ್ನು ತಣ್ಣಗಿರುವಾಗ ಕುಡಿಯಬೇಕೋ ಅಥವಾ ಅದನ್ನು ಬಿಸಿ ಇರುವಾಗಲೇ ಸೇವನೆ ಮಾಡಬೇಕೋ ಎಂಬ ಬಗ್ಗೆ ಅನುಮಾನ ಇರುತ್ತದೆ. ಅದರಲ್ಲಿಯೂ ಹಾಲನ್ನು ಬಿಸಿಯಾಗಿ ಅಥವಾ ತಣ್ಣಗೆ (Hot milk vs cold milk) ಕುಡಿಯುವುದರಿಂದ ವಿಭಿನ್ನ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಹೇಗೆ ಸೇವನೆ ಮಾಡಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ತಣ್ಣಗಿರುವ ಹಾಲು ಯಾರಿಗೆ ಒಳ್ಳೆಯದು?

ತಜ್ಞರು ಹೇಳುವ ಪ್ರಕಾರ ಹಾಲು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯುವುದರಿಂದ ವಿಭಿನ್ನ ರೀತಿಯ ಪ್ರಯೋಜನಗಳು ಸಿಗುತ್ತವೆ. ನಮಗೆ ಯಾವುದು ಅನುಕೂಲವೋ ಆ ರೀತಿ ಸೇವನೆ ಮಾಡಬಹುದು. ಅಂದರೆ ಕೆಲವರಿಗೆ ಕೆಲವು ರೀತಿಯ ಸಮಸ್ಯೆಗಳಿರುತ್ತವೆ, ಅಂತಹ ಸಮಯದಲ್ಲಿ ಯಾವುದು ದೇಹಕ್ಕೆ ಒಳ್ಳೆಯದೋ ಆ ರೀತಿಯಾಗಿ ಹಾಲನ್ನು ಕುಡಿಯಬೇಕಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿರುವವರು ತಣ್ಣನೆಯ ಹಾಲು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ತಣ್ಣಗಿರುವ ಹಾಲು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನಮ್ಮ ಸ್ನಾಯುಗಳಿಗೂ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ವ್ಯಾಯಾಮ ಮಾಡಿ ಬಂದ ನಂತರ ತಣ್ಣನೆಯ ಹಾಲು ಕುಡಿಯಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಮೂಳೆಗಳ ಆರೋಗ್ಯವನ್ನು ಸುಧಾರಿಸುವುದಕ್ಕೂ ಕೂಡ ತಣ್ಣನೆಯ ಹಾಲು ಕುಡಿಯುವುದು ಒಳ್ಳೆಯದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ, ಇದು ಮೂಳೆಗಳನ್ನು ಬಲಪಡಿಸುವ ಶಕ್ತಿ ಹೊಂದಿದೆ.

ಇದನ್ನೂ ಓದಿ: ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!

ಇದನ್ನೂ ಓದಿ
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ಬಿಸಿಯಾಗಿರುವ ಹಾಲು ಯಾರಿಗೆ ಒಳ್ಳೆಯದು?

ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದು ತುಂಬಾ ಒಳ್ಳೆಯದು, ಏಕೆಂದರೆ ಇದು ನಿದ್ರೆ ಚೆನ್ನಾಗಿ ಬರುವುದಕ್ಕೆ ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಾತ್ರವಲ್ಲ ಬೆಚ್ಚಗಿನ ಹಾಲು ತಣ್ಣನೆಯ ಹಾಲಿಗಿಂತ ವೇಗವಾಗಿ ಜೀರ್ಣವಾಗುತ್ತದೆ, ಆದ್ದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳಿರುವವರು ಬೆಚ್ಚಗಿನ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ. ಜೊತೆಗೆ ಬಿಸಿ ಬಿಸಿಯಾಗಿರುವ ಹಾಲು ದೇಹವನ್ನು ಉಲ್ಲಾಸದಿಂದ ಕೂಡಿರುವಂತೆ ಮಾಡುತ್ತದೆ, ಅದಕ್ಕಾಗಿಯೇ ವೈದ್ಯರು ಪ್ರತಿದಿನ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಬೆಚ್ಚಗಿನ ಹಾಲು ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ