
ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ಮಕ್ಕಳು ಹೊರಾಂಗಣದಲ್ಲಿ ಹೆಚ್ಚು ಸಮಯ ಆಟವಾಡುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಆದರೆ ಈಗ ಮೊಬೈಲ್, ಟಿವಿ, ಟ್ಯಾಬ್ಲೆಟ್ ಮತ್ತು ವಿಡಿಯೊ ಗೇಮ್‌ಗಳ ಬಳಕೆ ಹೆಚ್ಚಿರುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಇದರ ಜೊತೆಗೆ ಫಾಸ್ಟ್ ಫುಡ್, ಸಕ್ಕರೆ ಹೆಚ್ಚಿರುವ ಪಾನೀಯಗಳು ಮತ್ತು ಪ್ಯಾಕೆಟ್ ಸ್ನ್ಯಾಕ್ಸ್‌ಗಳ ಸೇವನೆಯೂ ಹೆಚ್ಚಾಗಿದೆ. ಪರಿಣಾಮವಾಗಿ ಮಕ್ಕಳಲ್ಲಿ ಸ್ಥೂಲಕಾಯ (Childhood Obesity) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಅಧಿಕ ತೂಕವು ಕೇವಲ ದೇಹದ ಆಕಾರದ ಸಮಸ್ಯೆಯಲ್ಲ. ಇದು ಮುಂದಿನ ದಿನಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು (Fatty Liver), ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅತ್ಯಗತ್ಯ.
ಪ್ರತಿದಿನ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡಿ: ಮಕ್ಕಳು ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲ ರನ್ನಿಂಗ್, ಸೈಕಲ್ ಸವಾರಿ, ಈಜು, ಕ್ರೀಡೆ ಅಥವಾ ಇತರೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಹೆಚ್ಚುವರಿ ಕ್ಯಾಲೊರಿಗಳು ಕರಗುತ್ತವೆ ಮತ್ತು ದೇಹ ಫಿಟ್ ಆಗಿರುತ್ತದೆ.
ಸಕ್ಕರೆ ಹೆಚ್ಚಿರುವ ಪಾನೀಯಗಳನ್ನು ಕಡಿಮೆ ಮಾಡಿ: ಕೋಲ್ಡ್ ಡ್ರಿಂಕ್ಸ್, ಪ್ಯಾಕೆಟ್ ಜ್ಯೂಸ್, ಎನರ್ಜಿ ಡ್ರಿಂಕ್ಸ್ ಮತ್ತು ಹೆಚ್ಚು ಸಕ್ಕರೆ ಇರುವ ಪಾನೀಯಗಳ ಬದಲು ನೀರು, ಹಾಲು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಸಕ್ಕರೆ ರಹಿತ ಪಾನೀಯಗಳನ್ನು ನೀಡಿ.
ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರ ನೀಡಿ: ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚಿಪ್ಸ್ ಹಾಗೂ ಇನ್‌ಸ್ಟಂಟ್ ಆಹಾರಗಳ ಬದಲು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಿ. ಮನೆಯ ಆಹಾರದಲ್ಲಿ ಅಗತ್ಯ ಪೋಷಕಾಂಶಗಳು ಸಮತೋಲನವಾಗಿ ದೊರೆಯುತ್ತವೆ.
ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ: ಜಂಕ್ ಫುಡ್ ವಿರುದ್ಧ ಸಮರ ಸಾರಿದ ಆಹಾರ ಸುರಕ್ಷಿತ ಇಲಾಖೆ
ಸ್ಕ್ರೀನ್ ಟೈಮ್‌ಗೆ ಮಿತಿ ಹಾಕಿ: ಮೊಬೈಲ್, ಟಿವಿ ಮತ್ತು ಟ್ಯಾಬ್ಲೆಟ್ ಬಳಕೆಯನ್ನು ನಿಯಂತ್ರಿಸಿ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕಳೆಯುವುದರಿಂದ ಮಕ್ಕಳು ಚಟುವಟಿಕೆ ಕಡಿಮೆ ಮಾಡುತ್ತಾರೆ ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಸಾಕಷ್ಟು ನಿದ್ರೆ ಮಾಡಿಸಿರಿ: ವಯಸ್ಸಿಗೆ ತಕ್ಕಷ್ಟು ನಿದ್ರೆ ಮಕ್ಕಳ ಬೆಳವಣಿಗೆ ಮತ್ತು ಹಾರ್ಮೋನ್ ಸಮತೋಲನಕ್ಕೆ ಅಗತ್ಯ. ನಿದ್ರೆಯ ಕೊರತೆ ಹಸಿವಿನ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಹೆಚ್ಚು ತಿನ್ನುವ ಪ್ರವೃತ್ತಿಯನ್ನು ಹೆಚ್ಚಿಸಬಹುದು.
ಮಕ್ಕಳ ದೈನಂದಿನ ಆಹಾರದಲ್ಲಿ ಈ ಪೌಷ್ಟಿಕ ಆಹಾರಗಳನ್ನು ಸೇರಿಸಿ:
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ