Mustard Seeds: ಸಾಸಿವೆಯ ಆರೋಗ್ಯ ಪ್ರಯೋಜನ ತಿಳಿದರೆ ಪ್ರತಿದಿನ ಸೇವನೆ ಮಾಡುತ್ತೀರಿ
ಸಾಸಿವೆ ಒಗ್ಗರಣೆಗೆ ಮಾತ್ರವಲ್ಲ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಉಸಿರಾಟದ ತೊಂದರೆಗಳು, ನೋವು ಮತ್ತು ಜೀರ್ಣಕಾರಿ ಸಮಸ್ಯೆ ನಿವಾರಿಸುತ್ತದೆ. ಸಾಸಿವೆಯಲ್ಲಿರುವ ಫೈಬರ್ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಚರ್ಮದ ಸಮಸ್ಯೆ ಮತ್ತು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಇನ್ನಿತರ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.
ಆಯುರ್ವೇದದಲ್ಲಿ ಸಾಸಿವೆ ಬಳಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದನ್ನು ಒಗ್ಗರಣೆಗೆ ಮಾತ್ರವಲ್ಲ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಉಸಿರಾಟದ ತೊಂದರೆಗಳು, ನೋವು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಾಸಿವೆಯಲ್ಲಿರುವ ಫೈಬರ್ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಚರ್ಮದ ಸಮಸ್ಯೆಗಳು ಮತ್ತು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಇನ್ನಿತರ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.
ಹಲ್ಲುನೋವನ್ನು ತ್ವರಿತವಾಗಿ ನಿವಾರಿಸುತ್ತದೆ:
ಸಾಸಿವೆಯನ್ನು ದಿನನಿತ್ಯದ ಆಹಾರದಲ್ಲಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ದಿನನಿತ್ಯ ಸಾಸಿವೆ ಸೇವನೆ ಮಾಡುವವರಿಗೆ ಹಲ್ಲಿನಲ್ಲಿ ಕಂಡು ಬರುವ ಸಮಸ್ಯೆಗಳು ಕಡಿಮೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಹಲ್ಲು ನೋವಿನಿಂದ ಬಳಲುತ್ತಿರುವವರು, ಸಾಸಿವೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಅಥವಾ ಬಾಯಿ ಮುಕ್ಕಳಿಸುವುದು ಹಲ್ಲುನೋವನ್ನು ತ್ವರಿತವಾಗಿ ನಿವಾರಿಸುತ್ತದೆ. ಸಾಸಿವೆಯನ್ನು ಪುಡಿಯನ್ನು ಗಾಯಗಳಿಗೆ ಹಚ್ಚುವುದರಿಂದ ಇದನ್ನು ತ್ವರಿತವಾಗಿ ಕಡಿಮೆ ಮಾಡಬಹುದು.
ಕೀಲು ನೋವಿದ್ದರೆ ಸಾಸಿವೆಯನ್ನು ಈ ರೀತಿ ಬಳಸಿ:
ಕೆಲವರಿಗೆ ಕೀಲು ನೋವು ಕಂಡು ಬರುತ್ತದೆ. ಇನ್ನು ಕೆಲವರಿಗೆ ನಡೆಯಲು ಸಾಧ್ಯವಾಗುವುದಿಲ್ಲ. ಅಂತವರು ಸಾಸಿವೆಯಿಂದ ಪರಿಹಾರ ಪಡೆಯಬಹುದು. ಒಂದು ಟೀ ಸ್ಪೂನ್ ಸಾಸಿವೆ ಪುಡಿ ಮತ್ತು ಕರ್ಪೂರವನ್ನು ಬೆರೆಸಿ ಮೃದುವಾದ ಪುಡಿ ಮಾಡಿ. ಸ್ವಲ್ಪ ನೀರಿನೊಂದಿಗೆ ಪೇಸ್ಟ್ ಮಾಡಿ ಮತ್ತು ಅದನ್ನು ನೋವಿರುವ ಪ್ರದೇಶಕ್ಕೆ ಹಚ್ಚಿ. ಈ ರೀತಿ ಮಾಡುವುದರಿಂದ ನೋವು ಬಹು ಬೇಗನೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯ ತಪ್ಪಿಸಬಹುದು
ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ:
ಸಾಸಿವೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಇವು ಸ್ನಾಯುಗಳ ಆರೋಗ್ಯವನ್ನು ಕಾಪಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ ಇದು ತೂಕವನ್ನು ಕಡಿಮೆ ಮಾಡುತ್ತದೆ. ಫುಡ್ ಪಾಯಿಸನ್ ನಿಂದಾಗಿ ನಿಮಗೆ ಹೊಟ್ಟೆ ಉಬ್ಬರವಾಗುತ್ತಿದ್ದರೆ, ಒಂದು ಚಮಚ ಸಾಸಿವೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ, ಹೊಟ್ಟೆಯಲ್ಲಿರುವ ವಿಷಕಾರಿ ಆಹಾರವು ವಾಂತಿಯ ರೂಪದಲ್ಲಿ ಹೊರಬರುತ್ತದೆ. ಬಳಿಕ ಹೊಟ್ಟೆ ನಿರಾಳವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ