ಅಂತಾರಾಷ್ಟ್ರೀಯ ನೋ ಡಯೆಟ್ ದಿನ; ಯಾವ ರೀತಿಯ ಸಮತೋಲನ ಆಹಾರ ಸೇವಿಸಬೇಕು?

ತೂಕ ಇಳಿಸಿಕೊಳ್ಳಲು ಮಾತ್ರವಲ್ಲದೆ ಉತ್ತಮ ಆರೋಗ್ಯಕ್ಕಾಗಿಯೂ ಡಯೆಟ್ ಫಾಲೋ ಮಾಡುವುದು ಬಹಳ ಮುಖ್ಯ. ಡಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿ ಮಾರ್ಪಟ್ಟಿದೆ. ಏನು ತಿನ್ನಬೇಕು? ಎಷ್ಟು ತಿನ್ನಬೇಕು? ಎಂಬುದರ ಕುರಿತು ಹಲವು ರೀತಿಯ ಸಲಹೆಗಳು ಇಂಟರ್‌ನೆಟ್‌ ತುಂಬಾ ಹರದಾಡುತ್ತವೆ. ಇಂಥ ಸಮಯದಲ್ಲಿ ಹಲವರು ತಪ್ಪು ಸಲಹೆಗಳಿಂದ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಅಂತಾರಾಷ್ಟ್ರೀಯ ನೋ ಡಯೆಟ್ ದಿನ; ಯಾವ ರೀತಿಯ ಸಮತೋಲನ ಆಹಾರ ಸೇವಿಸಬೇಕು?
ಡಯಟ್Image Credit source: istock
Follow us
ಸುಷ್ಮಾ ಚಕ್ರೆ
|

Updated on: May 06, 2024 | 3:23 PM

ಪ್ರತಿಯೊಬ್ಬರೂ ಡಯೆಟ್ (Diet) ಮಾಡುವುದು ಮುಖ್ಯ. ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸಿ ಡಯೆಟ್ ಮಾಡುವುದಕ್ಕಿಂತ ಪರಿಣಿತ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಪ್ರತಿ ವರ್ಷ ಮೇ 6ರಂದು ಅಂತಾರಾಷ್ಟ್ರೀಯ ನೋ ಡಯೆಟ್ ದಿನವನ್ನು (International No Diet Day) ಆಚರಿಸಲಾಗುತ್ತದೆ. ಈ ಮೂಲಕ ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದಾಗಿದೆ. ಹೀಗಾಗಿ, ಉತ್ತಮ ರೀತಿಯಲ್ಲಿ ಡಯೆಟ್ ಫಾಲೋ ಮಾಡುವುದು ಅಗತ್ಯ.

ಈ ಕುರಿತು ಕಿಂಡರ್‌ ಆಸ್ಪತ್ರೆಯ ಡಯಟಿಷಿಯನ್ ತಜ್ಞೆ ಆಗಿರುವ ಡಾ. ಸಂಜನಾ ಪ್ರೇಮಲಾಲ್‌ ಮಾತನಾಡಿ, ಎಲ್ಲದಕ್ಕೂ ಡಯೆಟ್ ನೆಪವೊಡ್ಡಿ ನಿರಾಕರಿಸುವುದಕ್ಕಿಂತ ಸಮತೋಲಿತ ಪೋಷಣೆಯುಳ್ಳ ಆಹಾರ ಸೇವನೆಯ ಬಗ್ಗೆ ಈ ದಿನ ಅರಿವು ಮೂಡಿಸುವುದಾಗಿದೆ. ಸಾಮಾನ್ಯವಾಗಿ ಬಹುಪಾಲು ಜನರ ಡಯಟ್‌ ಕೆಲ ದಿನ, ತಿಂಗಳು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಸಮಾಜದಲ್ಲಿ ದೈಹಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ. ಆದರೆ, ನೋ ಡಯಟ್‌ ಡೇ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಜೊತೆಗೆ ಕೆಟ್ಟ ಡಯಟ್‌ ಪದ್ಧತಿಗಳನ್ನು ತಿರಸ್ಕರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಯಾವ ಆಹಾರ ನಮ್ಮ ಹಲ್ಲುಗಳನ್ನು ಹಾನಿಗೊಳಿಸುತ್ತವೆ?

ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದಲ್ಲದೆ, ಬಹುಅಂಗಾಂಗ ವೈಫಲ್ಯ ಉಂಟಾಗಬಹುದು. ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್ ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ಬಿಡುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ. ಉತ್ತಮ ಆಹಾರ ಪದ್ದತಿ ದೀರ್ಘಕಾಲ ಪರಿಣಾಮಕಾರಿಯಾಗುವುದರ ಜೊತೆಗೆ ಸಮತೋಲಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದ್ದಾರೆ.

ಇದಲ್ಲದೆ ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂತಹ ಸೇವನೆಯ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಗಂಭೀರವಾದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿಯಾದ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನು ಕಾಣಬೇಕಾಗುತ್ತದೆ. ತಪ್ಪಾದ ಡಯಟ್​ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ನಿಪುಣ ಆರೋಗ್ಯ ತಜ್ಞರಿಂದ ಮಾಗರ್ದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ ಪೋಷಣೆ ಹಾಗೂ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಸೇವನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಸಂಜನಾ ಪ್ರೇಮ್‌ಲಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Pumpkin Seeds: ನಿಮ್ಮ ಡಯೆಟ್​ನಲ್ಲಿ ಕುಂಬಳಕಾಯಿ ಬೀಜವನ್ನು ಹೇಗೆಲ್ಲ ಬಳಸಬಹುದು?

ಅಡ್ಡ ಪರಿಣಾಮಗಳು:

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ಹಸಿವಾಗದಿರುವುದು, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ, ತುಂಬ ದಿನಗಳ ಕಾಲ ಆಹಾರ ಸೇವಿಸುವುದರಿಂದ ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಾಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದ್ದಾರೆ.

ತಪ್ಪಾದ ಡಯಟ್ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಜೀವಶೈಲಿಗೆ ಅನುಗುಣವಾಗಿ ಪೋಷಣೆಗೆ ಬೇಕಾದಂತಹ ಸಮತೋಲಿತ ಆಹಾರ ಸೇವಿಸುವ ವಿಧಾನಕ್ಕೆ ಆದ್ಯತೆ ನೀಡಿದರೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್