ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುವ ಕಬ್ಬಿಣಾಂಶವುಳ್ಳ ಸಸ್ಯಾಹಾರ ಮೂಲಗಳು ಇಲ್ಲಿವೆ
ನೀವು ಸಾಕಷ್ಟು ಕಬ್ಬಿಣವನ್ನು ಸೇವಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು, ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಕಬ್ಬಿಣಾಂಶ ಹೇರಳವಾಗಿರುವ ಕೆಲವು ಸಸ್ಯಾಹಾರಿ ಆಹಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ಸಸ್ಯಾಹಾರ ಪದಾರ್ಥಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಕಬ್ಬಿಣದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಕಬ್ಬಿಣಾಂಶವು ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಕಬ್ಬಿಣದ ಕೊರತೆಯು ಪೌಷ್ಟಿಕಾಂಶದ ಕೊರತೆಯ ಸಾಮಾನ್ಯ ವಿಧವಾಗಿದೆ. ದೇಹದಲ್ಲಿ ಅನೇಕ ಕಾರ್ಯಗಳನ್ನು ಸುಗಮಗೊಳಿಸುವುದರ ಜೊತೆಗೆ, ಕಬ್ಬಿಣವು ನಿಮ್ಮ ಒಟ್ಟಾರೆ ಆರೋಗ್ಯವನ್ನು ವಿವಿಧ ರೀತಿಯಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಬ್ಬಿಣಾಂಶದ ಸೇವನೆಯ ಪ್ರಯೋಜನಗಳು ಇಲ್ಲಿವೆ:
- ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.
- ಆಲಸ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಚರ್ಮದ ಆರೋಗ್ಯ ಕಾಪಾಡುತ್ತದೆ.
- ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
ನೀವು ಸಾಕಷ್ಟು ಕಬ್ಬಿಣವನ್ನು ಸೇವಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು, ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಕಬ್ಬಿಣಾಂಶ ಹೇರಳವಾಗಿರುವ ಕೆಲವು ಸಸ್ಯಾಹಾರಿ ಆಹಾರಗಳ ಕುರಿತು ಮಾಹಿತಿ ನೀಡಿದ್ದಾರೆ. “ಕಬ್ಬಿಣವು ಅಗತ್ಯವಾದ ಪೋಷಕಾಂಶವಾಗಿದ್ದು ಅದು ಅನೇಕ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಬ್ಬಿಣದ ಕೊರತೆಯಿರುವ ಆಹಾರವು ಕಡಿಮೆ ಶಕ್ತಿಯ ಮಟ್ಟಗಳು, ಉಸಿರಾಟದ ತೊಂದರೆ, ತಲೆನೋವು, ಕಿರಿಕಿರಿ, ತಲೆತಿರುಗುವಿಕೆ ಅಥವಾ ರಕ್ತಹೀನತೆಗೆ ಕಾರಣವಾಗಬಹುದು ಎಂದು ಬಾತ್ರಾ ಹೇಳುತ್ತಾರೆ.ನೀವು ಸಸ್ಯಾಹಾರಿಯಾಗಿದ್ದರೆ, ಚಿಂತಿಸಬೇಡಿ! ಸಸ್ಯಹಾರಿಗಳಿಗೂ ಸಹಾಯಕವಾಗುವ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿರುವಾಗ ಉಸಿರಾಟದ ಸಮಸ್ಯೆಯಾಗದಿರಲು ಏನು ಮಾಡಬೇಕು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಇಲ್ಲಿದೆ ಮಾಹಿತಿ
ಕಬ್ಬಿಣಾಂಶಗಳು ಹೇರಳವಾಗಿರುವ ಸಸ್ಯಹಾರಗಳು:
- ಬಾಳೆಹಣ್ಣು
- ರಾಗಿ
- ಒಣದ್ರಾಕ್ಷಿ
- ಸೋಯಾ ಬೀನ್
- ಕರಿಬೇವಿನ ಎಲೆ
ಇದಲ್ಲದೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮಿಟಮಿನ್ ಸಿ-ಭರಿತ ಆಹಾರಗಳನ್ನು ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಊಟದೊಂದಿಗೆ ಕಾಫಿ ಮತ್ತು ಚಹಾವನ್ನು ತಪ್ಪಿಸಿ, ಇದು ನಿಮ್ಮ ನಿಮ್ಮ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ ನೀವು ಕಾಫಿ, ಟೀ ಪ್ರಿಯರಾಗಿದ್ದರೆ, ನಿಮ್ಮ ಊಟದ ನಂತರ 30 ನಿಮಿಷಗಳ ನಂತರ ಕಾಫಿ ಟೀ ಕುಡಿಯಿರಿ ಎಂದು ಹೇಳುತ್ತಾರೆ. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ನೆನೆಸುವುದು, ಮೊಳಕೆಯೊಡೆಯುವುದು ಮತ್ತು ಹುದುಗಿಸುವುದು ಈ ಆಹಾರಗಳಲ್ಲಿ ನೈಸರ್ಗಿಕವಾಗಿ ಇರುವ ಫೈಟೇಟ್‌ಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: