Kidney Problems: ಈ ರೀತಿಯ ಲಕ್ಷಣಗಳು ಪದೇ ಪದೇ ಕಂಡು ಬಂದರೆ ನಿಮ್ಮ ಕಿಡ್ನಿ ಆರೋಗ್ಯವಾಗಿಲ್ಲ ಎಂದರ್ಥ
ಜನರಲ್ಲಿ ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೂತ್ರಪಿಂಡದ ಸಮಸ್ಯೆಗಳನ್ನು ಕೂಡ ಎದುರಿಸುವಂತಾಗಿದೆ. ಆದರೆ ಇಂತಹ ಆರೋಗ್ಯ ಸಮಸ್ಯೆಗಳು ಬರುವ ಮೊದಲು ಸಾಮಾನ್ಯವಾಗಿ, ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಅವುಗಳನ್ನು ಸರಿಯಾಗಿ ತಿಳಿದು ಅವುಗಳು ಬರದಂತೆ ತಡೆಯಬೇಕಾಗುತ್ತದೆ. ಅದೇ ರೀತಿ ವ್ಯಕ್ತಿಗೆ ಕಿಡ್ನಿಗೆ ಸಂಬಂಧಿತ ಸಮಸ್ಯೆ ಇದ್ದಾಗಲೂ ಕೂಡ ದೇಹದಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆಗ ಅವುಗಳನ್ನು ನಿರ್ಲಕ್ಷ್ಯ ಮಾಡದೆಯೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಹಾಗಾದರೆ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಾಗ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಒತ್ತಡ ಜೀವನಶೈಲಿಯಿಂದಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾವೇ ಅನೇಕ ರೋಗಗಳನ್ನು ಆಹ್ವಾನಿಸುವಂತಾಗಿದೆ. ಅಷ್ಟೇ ಅಲ್ಲ, ಅನೇಕರು ಅಪೌಷ್ಟಿಕತೆ, ಹಾರ್ಮೋನುಗಳ ಅಸಮತೋಲನ ಇತ್ಯಾದಿಗಳಿಂದಾಗಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೂತ್ರಪಿಂಡದ ಸಮಸ್ಯೆಗಳನ್ನು ಕೂಡ ಎದುರಿಸುವಂತಾಗಿದೆ. ಆದರೆ ಇಂತಹ ಆರೋಗ್ಯ ಸಮಸ್ಯೆಗಳು ಬರುವ ಮೊದಲು ಸಾಮಾನ್ಯವಾಗಿ, ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಅವುಗಳನ್ನು ಸರಿಯಾಗಿ ತಿಳಿದು ಅವುಗಳು ಬರದಂತೆ ತಡೆಯಬೇಕಾಗುತ್ತದೆ. ಅದೇ ರೀತಿ ವ್ಯಕ್ತಿಗೆ ಕಿಡ್ನಿಗೆ ಸಂಬಂಧಿತ ಸಮಸ್ಯೆ ಇದ್ದಾಗಲೂ ಕೂಡ ದೇಹದಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆಗ ಅವುಗಳನ್ನು ನಿರ್ಲಕ್ಷ್ಯ ಮಾಡದೆಯೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಹಾಗಾದರೆ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಾಗ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಮ್ಮ ಮೂತ್ರಪಿಂಡ ಅಥವಾ ಕಿಡ್ನಿ ಆರೋಗ್ಯಕರವಾಗಿದ್ದಾಗ ಮಾತ್ರ ನಾವು ಕೂಡ ಆರೋಗ್ಯವಾಗಿರುತ್ತೇವೆ. ಏಕೆಂದರೆ ಇದು ನಮ್ಮ ದೇಹದ ನೈಸರ್ಗಿಕ ಫಿಲ್ಟರ್ ಗಳಾಗಿ ಕಾರ್ಯನಿರ್ವಹಿಸುವ ಮೂಲಕ ದೇಹದಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಹಾಗಾಗಿ ನಮ್ಮ ಎಲ್ಲಾ ಅಂಗಗಳಂತೆ, ನಮ್ಮ ಮೂತ್ರಪಿಂಡಗಳನ್ನು ಸಹ ರಕ್ಷಿಸಬೇಕಾಗಿದೆ. ಅವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಅದು ಸೂಚಿಸುತ್ತದೆ. ಆ ಸಮಸ್ಯೆಗಳು ಚಿಕ್ಕ ಇರುವಾಗಲೇ ಅಂದರೆ ಅದು ಕಾಣಿಸಿಕೊಂಡಾಗಲೇ ಅವುಗಳನ್ನು ಸರಿಯಾಗಿ ಗಮನಿಸಿ ಪರಿಹರಿಸಬೇಕು. ಇಲ್ಲದಿದ್ದರೆ ಅವು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತವೆ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತವೆ. ಮೂತ್ರಪಿಂಡ ವೈಫಲ್ಯ ಅಥವಾ ಕಿಡ್ನಿ ವೈಫಲ್ಯ ಆಗುವ ಮೊದಲು ದೇಹದ ಈ ಭಾಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಲಕ್ಷಣಗಳೇನು?
ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದಾಗ ಕಂಡು ಬರುವ ಮೊದಲ ಲಕ್ಷಣವೆಂದರೆ ಕೆಳ ಬೆನ್ನಿನಲ್ಲಿ ತೀವ್ರ ನೋವು ಕಂಡುಬರುತ್ತದೆ. ಇದರ ಜೊತೆಗೆ ಮೂತ್ರಕೋಶದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಈ ಲಕ್ಷಣಗಳು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. ಅಲ್ಲದೆ, ಮೂತ್ರಪಿಂಡಗಳಲ್ಲಿ ಕಲ್ಲುಗಳಿದ್ದಾಗ ಸೊಂಟದ ಸುತ್ತ ಊತ ಕಂಡು ಬರುತ್ತದೆ. ಪಕ್ಕೆಲುಬುಗಳ ಸುತ್ತಲೂ ನೋವಿರುತ್ತದೆ. ಆಗಾಗ ವಾಕರಿಕೆ, ವಾಂತಿ, ಹಸಿವಾಗದಿರುವುದು ಸಹ ಇದರ ಲಕ್ಷಣಗಳಾಗಿವೆ. ಅಲ್ಲದೆ, ಪಾದಗಳಲ್ಲಿ ಊತ, ಕಡಿಮೆ ಉಸಿರಾಟ, ನಿದ್ರಾಹೀನತೆ, ಅತಿಯಾದ ಅಥವಾ ಕಡಿಮೆ ಮೂತ್ರವಿಸರ್ಜನೆ ಮೂತ್ರಪಿಂಡದ ಸಮಸ್ಯೆಗಳ ಕೆಲವು ಲಕ್ಷಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ. ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ತೀವ್ರ ಹೊಟ್ಟೆ ನೋವಿಗೆ ಕಾರಣವಾಗಬಹುದು. ಇದು ಮೂತ್ರಪಿಂಡ ವೈಫಲ್ಯದ ಸಂಕೇತವೂ ಆಗಿರಬಹುದು.
ಇದನ್ನೂ ಓದಿ: ಮಾವಿನ ಹಣ್ಣು ಇಷ್ಟ ಆಗುತ್ತಾ? ಈ ಸಮಯದಲ್ಲಿ ತಿನ್ನುವುದು ಒಳ್ಳೆಯದು
ಈ ರೀತಿಯ ಆಹಾರಗಳ ಸೇವನೆ ಮಾಡಿ
ಅಂತಹ ಅಪಾಯಕಾರಿ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸಬೇಕು. ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಸರಿಯಾದ ಆಹಾರವನ್ನು ಸೇವಿಸಬೇಕು. ಸೋಡಿಯಂ, ಪೊಟ್ಯಾಸಿಯಮ್ ಕಡಿಮೆ ಮತ್ತು ಫೈಬರ್ ಅಧಿಕವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಪೋಷಕಾಂಶ ಭರಿತ ತರಕಾರಿಗಳನ್ನು ತಿನ್ನುವುದು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರು ಉಪ್ಪು, ಆಲ್ಕೋಹಾಲ್ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು. ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದು ಬಹಳ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ