Sesame Oil: ಎಳ್ಳಿನ ಎಣ್ಣೆ ಉಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?
Health Benefits: ಎಳ್ಳಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇದನ್ನು ಉಪಯೋಗಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಆಯುರ್ವೇದದ ಪ್ರಕಾರ ಎಳ್ಳಿನ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಎಳ್ಳನ್ನು ನೂರಾರು ವರ್ಷಗಳಿಂದ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಎಳ್ಳು ಬೀಜಗಳನ್ನು ಪುಡಿ ಮಾಡಿ ಪೇಸ್ಟ್ ರೂಪದಲ್ಲಿ ಅಥವಾ ಎಣ್ಣೆಯ ರೂಪದಲ್ಲಿ ಸೇವಿಸಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜತೆಗೆ ಚರ್ಮದ ಆರೋಗ್ಯ ರಕ್ಷಣೆಯನ್ನು ಮಾಡುತ್ತದೆ.
ಎಳ್ಳಿನ ಎಣ್ಣೆ ತಯಾರಿಸಿ ಅಡುಗೆಯಲ್ಲಿ ಬಳಸುವ ಮೂಲಕ ಇದನ್ನು ಸೇವಿಸಬಹುದು. ಇಲ್ಲದಿದ್ದರೆ ಎಳ್ಳಿನ ಎಣ್ಣೆ ಮಸಾಜ್ ಕೂಡಾ ಮಾಡಬಹುದು. ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳನ್ನು ಇದು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕಗಳು ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿರುವಾಗ ಅಡುಗೆಯಲ್ಲಿ ಎಳ್ಳನ್ನು ಬಳಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.
ಎಳ್ಳಿನ ಎಣ್ಣೆಯ ಪ್ರಯೋಜನಗಳು ಚರ್ಮದ ಆರೋಗ್ಯಕ್ಕೆ ಸಹಾಯಕ ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದು ಆಯುರ್ವೇದ ಪದ್ಧತಿಯಾಗಿದೆ. ಇದು ಚರ್ಮದ ಪದರುಗಳಿಗೆ ಸುಲಭವಾಗಿ ತಲುಪುತ್ತದೆ. ಜತೆಗೆ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಎಳ್ಳಿನ ಎಣ್ಣೆಯಲ್ಲಿ ವಿಟಮಿನ್ ಇ ಕೂಡಾ ಇದ್ದು ನಿಮ್ಮ ಚರ್ಮವನ್ನು ಮಾಲಿನ್ಯದಿಂದ ರಕ್ಷಿಸುತ್ತದೆ.
ನಿಮ್ಮನ್ನು ಬೆಚ್ಚಗಿರಿಸುತ್ತದೆ ಎಳ್ಳಿನ ಎಣ್ಣೆ ನಿಮ್ಮ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ನಿಜವಾಗಿಯೂ ಪರಿಣಾಮಕಾರಿ. ಹೀಗಿರುವಾಗ ಬೇಸಿಗೆ ಕಾಲಕ್ಕಿಂತ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಎಳ್ಳಿನ ಎಣ್ಣೆಯ ಪ್ರಯೋಜನಗಳನ್ನು ಹೆಚ್ಚು ಪಡೆಯಬಹುದು.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಳ್ಳಿನ ಎಣ್ಣೆ ಜೀರ್ಣಕ್ರಿಯೆಗೆ ಸಹಾಯಕ. ಇದರಲ್ಲಿರುವ ಫೈಬರ್ ಅಂಶ ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯಕ. ಮಲಬದ್ಧತೆ ಸಮಸ್ಯೆಗೆ ಒಳ್ಳೆಯ ಪರಿಹಾರವನ್ನು ನೀಡುತ್ತದೆ. ಉರಿಯೂತ, ಹಲ್ಲು ನೋವಿಗೂ ಸಹ ಎಳ್ಳಿನ ಎಣ್ಣೆಯ ಬಳಕೆ ಒಳ್ಳೆಯದು.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಳ್ಳಿನ ಎಣ್ಣೆಯ ಬಳಕೆಯ ಮೂಲಕ ಕೀಲುಗಳಲ್ಲಿ ಮಸಾಜ್ ಮಾಡುವುದರಿಂದ ನೋವು, ಸಂಧಿವಾತ, ಉರಿಯೂತದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಲಗುವ ಮುನ್ನ ಹಣೆಯ ಮೇಲೆ ಎಳ್ಳು ಎಣ್ಣೆಯನ್ನು ಹಚ್ಚಿ ನಿದ್ರಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಎಳ್ಳಿನ ಎಣ್ಣೆಯಿಂದ ನಿದ್ರಾಹೀನತೆ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು.
ಇದನ್ನೂ ಓದಿ:
Health Tips: ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು
Health Tips: ಬಿಸಿ ನೀರು ಕುಡಿಯುವಾಗ ಈ 3 ಪದಾರ್ಥಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ