ಚಳಿಗಾಲದಲ್ಲಿ ನೀವು ಮುಸುಕು ಹಾಕಿ ಮಲಗ್ತೀರಾ? ಹೃದಯಾಘಾತದ ಸಾಧ್ಯತೆ

ಚಳಿಗಾಲದಲ್ಲಿ ತಂಪಾದ ವಾತಾವರಣವಿರುವ ಕಾರಣ ಬೆಚ್ಚಗೆ ಹೊದ್ದು ಮಲಗಲು ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಹೀಗಾಗಿ ಹೆಚ್ಚಿನವರು ಕಾಲಿನಿಂದ ತಲೆಯವರೆಗ ಬೆಡ್ ಶೀಟ್ ಮುಚ್ಚಿಕೊಂಡು ಮಲಗುತ್ತಾರೆ. ಆದರೆ ಇದು ಚಳಿಯಿಂದ ರಕ್ಷಣೆ ನೀಡಿದರೂ ಕೂಡ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಬೆಡ್ ಶೀಟ್ ನಿಂದ ಮುಖ ಮುಚ್ಚಿಕೊಂಡು ಮಲಗುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿಯಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ನೀವು ಮುಸುಕು ಹಾಕಿ ಮಲಗ್ತೀರಾ? ಹೃದಯಾಘಾತದ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 3:57 PM

ಚಳಿಗಾಲ ಆರಂಭವಾಗಿದ್ದು, ಈ ಚುಮುಚುಮು ಚಳಿಗೆ ಬೆಚ್ಚಗೆ ಹೊದ್ದು ಮಲಗಿ ಬಿಡೋಣ ಎಂದೆನಿಸುತ್ತದೆ. ಹೆಚ್ಚಿನವರು ತಂಪಾದ ವಾತಾವರಣದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು ಕಂಬಳಿ ಹಾಗೂ ಬೆಚ್ಚಗಿನ ಸ್ವೆಟರ್‌ಗಳನ್ನು ಬಳಸುತ್ತಾರೆ. ಆದರೆ ಕೆಲವರಿಗೆ ರಾತ್ರಿ ಮಲಗುವಾಗ ಕಾಲಿನಿಂದ ತಲೆಯವರೆಗೇ ಬೆಡ್ ಶೀಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಲಗುವುದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ರೀತಿ ಮಲಗುವ ಅಭ್ಯಾಸದಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂದು ತಿಳಿದುಕೊಳ್ಳುವುದು ಸೂಕ್ತ.

  • ಚರ್ಮಕ್ಕೆ ಹಾನಿಕಾರಕ : ಚಳಿಗಾಲದ ಋತುವಿನಲ್ಲಿ ಮುಖಕ್ಕೆ ಬೆಡ್ ಶೀಟ್ ಹಾಕಿ ಮಲಗುವುದರಿಂದ, ಈ ಹೊದಿಕೆಯಲ್ಲಿರುವ ಅಶುದ್ಧ ಗಾಳಿ ಹೊರಗೆ ಹೋಗುವುದಿಲ್ಲ. ಈ ಕೆಟ್ಟ ಗಾಳಿಯಿಂದ ತ್ವಚೆಯ ಬಣ್ಣ ಮಾಸುವಂತೆ ಮಾಡುತ್ತದೆ. ಸುಕ್ಕುಗಳು, ಮೊಡವೆಗಳು ಸೇರಿದಂತೆ ಇನ್ನಿತ್ತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.
  • ಶ್ವಾಸಕೋಶದ ಸಮಸ್ಯೆ : ಮುಖವನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಶ್ವಾಸಕೋಶಕ್ಕೆ ಗಾಳಿ ಸಿಗುವುದಿಲ್ಲ. ಇದರಿಂದ ಶ್ವಾಸಕೋಶಗಳು ಸಂಕುಚಿತಗೊಳ್ಳುತ್ತವೆ. ತಜ್ಞರು ಹೇಳುವಂತೆ ಈ ರೀತಿಯ ಅಭ್ಯಾಸದಿಂದ ಕ್ರಮೇಣವಾಗಿ ತಲೆನೋವು ಮತ್ತು ಅಸ್ತಮಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
  • ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ : ಹೊದಿಕೆ ಹೊದ್ದು ಮಲಗುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುವುದಿಲ್ಲ. ದೇಹದ ಪ್ರತಿಯೊಂದು ರಕ್ತವು ಸರಿಯಾದ ಪ್ರಮಾಣದಲ್ಲಿ ಹರಿಯುವುದಿಲ್ಲ.
  • ಆಯಾಸ : ಮುಖದ ಮೇಲೆ ಹೊದಿಕೆ ಹಾಕಿಕೊಂಡು ಮಲಗಿದರೆ ಆಮ್ಲಜನಕವು ಸರಿಯಾಗಿ ಸಿಗುವುದಿಲ್ಲ. ಇದರಿಂದ ಅತಿಯಾದ ಆಯಾಸ, ಸುಸ್ತು ಉಂಟಾಗುತ್ತದೆ. ಅದಲ್ಲದೇ, ತಲೆನೋವು, ವಾಕರಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
  • ಕೂದಲು ಉದುರುವಿಕೆ ಸಮಸ್ಯೆ : ತಲೆಯನ್ನು ಹೊದಿಕೆಯಿಂದ ಮುಚ್ಚಿಕೊಂಡು ಮಲಗುವುದರಿಂದ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
  • ನಿದ್ರೆಗೆ ತೊಂದರೆ : ಕಾಲಿನಿಂದ ತಲೆಯವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹದ ಉಷ್ಣತೆಯೂ ಹೆಚ್ಚಾಗಿ ಇದರಿಂದ ದೇಹವು ಬೆವರಲು ಪ್ರಾರಂಭವಾಗುತ್ತದೆ. ಇದರಿಂದ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ.
  • ಹೃದಯಾಘಾತದ ಸಾಧ್ಯತೆ ಹೆಚ್ಚು : ತಲೆಯಿಂದ ಕಾಲಿನವರೆಗೆ ಹೊದಿಕೆ ಹೊದ್ದು ಮಲಗುವ ಅಭ್ಯಾಸದಿಂದ ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕವು ಸಿಗುವುದಿಲ್ಲ. ಈ ರೀತಿ ಅಭ್ಯಾಸದಿಂದ ಹೃದಯಾಘಾತ ಹಾಗೂ ಉಸಿರಾಟ ತೊಂದರೆಯ ಅಪಾಯವೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ