ಒಂದು ಮುಷ್ಟಿ ಗಾತ್ರದಷ್ಟು ಇರುವ ಹೃದಯದ ಆರೋಗ್ಯವು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡಲು ಅವಶ್ಯಕವಾಗಿದೆ. ಕಳಪೆ ಆಹಾರ, ಸೀಮಿತ ವ್ಯಾಯಾಮ ಮತ್ತು ಧೂಮಪಾನವು ಹೃದಯಕ್ಕೆ ಅತ್ಯಂತ ಹಾನಿಕಾರಕವಾಗಿದೆ ಎಂಬುದು ನೆನಪಿನಲ್ಲಿ ಇಡಬೇಕಾದ ಅಂಶ. ಅದಾಗ್ಯೂ ಅನೇಕರಿಗೆ ತಿಳಿಯದ ಸಂಗತಿಯೆಂದರೆ, ನಿದ್ರೆಯನ್ನು ಕಳೆದುಕೊಳ್ಳುವುದು ಹೃದಯದ ಸಮಸ್ಯೆಗೆ ಕಾರಣವಾಗಬಹುದು. ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ಹೆಚ್ಚಿನ ಒತ್ತಡದ ಮಟ್ಟಗಳು ಮತ್ತು ಹೃದಯದ ಇತರೆ ಕಾಯಿಲೆಗಳಿಗೆ ಗುರಿಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ದೀರ್ಘಕಾಲದ ನಿದ್ರಾಹೀನತೆ (insomnia)ಯು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ (Cholesterol), ಹೃದಯಾಘಾತ(Heart Attack), ಬೊಜ್ಜು(Obesity), ಮಧುಮೇಹ (Diabetes) ಮತ್ತು ಪಾರ್ಶ್ವವಾಯು(stroke) ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆ (Health problem)ಗಳಿಗೆ ಕಾಣವಾಗಬಹುದು.
ಇದನ್ನೂ ಓದಿ: ಕಳೆದೊಂದು ದಶಕದಲ್ಲಿ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆ ದ್ವಿಗುಣಗೊಂಡಿದೆ!
ಇತ್ತೀಚೆಗೆ, ಬಿಎಲ್ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಮತ್ತು ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ಚಂದ್ರ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಮಾಹಿತಿ ಪ್ರಕಾರ, “ಬೆಳಿಗ್ಗೆ ಅತಿಯಾದ ಕ್ಯಾಟೆಕೊಲಮೈನ್‌ಗಳನ್ನು ಸ್ರವಿಸುವ ಜನರು 4-8 ಗಂಟೆಯ ನಡುವೆ ಪಾರ್ಶ್ವವಾಯು ಅಥವಾ ಹೃದಯಾಘಾತದಿಂದ ಬಳಲುತ್ತಾರೆ. ವ್ಯಕ್ತಿಯೊಬ್ಬರು ದಿನನಿತ್ಯ ಕನಿಷ್ಟ ಮಾಡಬೇಕಾದ ನಿದ್ರೆಯನ್ನು ಕಳೆದುಕೊಂಡರೆ ದೀರ್ಘಾವಧಿಯಲ್ಲಿ ಇದು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆವಹಿಸಬೇಕಿದೆ.
ಹದಿಹರೆಯದಿಂದ ಪ್ರೌಢಾವಸ್ಥೆಯವರೆಗೆ ನಿದ್ರೆಯ ಅವಧಿಯು ಸಮಯದೊಂದಿಗೆ ಕಡಿಮೆಯಾಗುತ್ತದೆ ಎಂದು ಡಾ.ಸುಭಾಷ್ ಚಂದ್ರ ಅವರು ಹೇಳಿದರು. ವಯಸ್ಕರು 7-9 ಗಂಟೆಗಳ ಕಾಲ ನಿದ್ರಿಸುವುದು ಅತ್ಯಗತ್ಯ, ಆದರೆ 5-6 ವರ್ಷ ವಯಸ್ಸಿನ ಮಗುವಿಗೆ 12-14 ಗಂಟೆಗಳ ನಿದ್ರೆ ಬೇಕಾಗುತ್ತದೆ.
ಇದನ್ನೂ ಓದಿ: Mood Swings: ಭಾವನೆಗಳ ಸುನಾಮಿ ಮೂಡ್ಸ್ವಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?
ಹಾಗಾದರೆ ನಿದ್ರಾಹೀನತೆ ತಪ್ಪಿಸಲು ಮಾಡಬೇಕಾದ ಉಪಾಯಗಳೇನು? ಇಲ್ಲಿವೆ ನೋಡಿ:
ಇದನ್ನೂ ಓದಿ: Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ