Loneliness and disease: ಒಂಟಿತನವು ಆಲ್ಕೋಹಾಲ್, ಸಿಗರೇಟುಗಳಿಗಿಂತ ಹೆಚ್ಚು ಅಪಾಯಕಾರಿ

Loneliness and disease: ಒಂಟಿತನ ಮದ್ಯಪಾನ ಅಥವಾ ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಚಂಡೀಗಢದ ಪಿಜಿಐ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಕೆಲವು ರೋಗಿಗಳ ಮೇಲೆ ಈ ಸಂಶೋಧನೆ ನಡೆಸಲಾಗಿದ್ದು. ಇದು ಇಂಡಿಯನ್ ಜರ್ನಲ್ ಆಫ್ ಸೈಕಲಾಜಿಕಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. ಪಿಜಿಐನ ಮನೋವೈದ್ಯಕೀಯ ವಿಭಾಗದ ವೈದ್ಯರು ಒಂಟಿತನವು ಆರೋಗ್ಯ ಬಿಕ್ಕಟ್ಟಾಗಿ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳುತ್ತಾರೆ. ಅಲ್ಲದೆ ಇದು ಮಂದಿನ ದಿನಗಳಲ್ಲಿ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆಯೇ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

Loneliness and disease: ಒಂಟಿತನವು ಆಲ್ಕೋಹಾಲ್, ಸಿಗರೇಟುಗಳಿಗಿಂತ ಹೆಚ್ಚು ಅಪಾಯಕಾರಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 04, 2024 | 6:20 PM

ಸಾಮಾಜಿಕ ಮಾಧ್ಯಮ ಬಳಸುವವರ ಯುಗದಲ್ಲಿ ಎಲ್ಲರೂ ಫೇಸ್ಬುಕ್, ಇನ್ಸ್ಟಾಗ್ರಾಮ್ ಅನುಸರಿಸುತ್ತಿದ್ದರೂ, ನಿಜ ಜೀವನದಲ್ಲಿ ಜನರು ಒಂಟಿತನ ಅನುಭವಿಸುತ್ತಿದ್ದಾರೆ. ಇದರಿಂದ ಮದ್ಯಪಾನ, ಧೂಮಪಾನ ಮತ್ತು ಬೊಜ್ಜಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಕಂಡುಬರುತ್ತಿವೆ. ಅನೇಕ ಸಂದರ್ಭಗಳಲ್ಲಿ, ಒಂಟಿತನ ಮದ್ಯಪಾನ ಅಥವಾ ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಚಂಡೀಗಢದ ಪಿಜಿಐ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಕೆಲವು ರೋಗಿಗಳ ಮೇಲೆ ಈ ಸಂಶೋಧನೆ ನಡೆಸಲಾಗಿದ್ದು. ಇದು ಇಂಡಿಯನ್ ಜರ್ನಲ್ ಆಫ್ ಸೈಕಲಾಜಿಕಲ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. ಪಿಜಿಐನ ಮನೋವೈದ್ಯಕೀಯ ವಿಭಾಗದ ವೈದ್ಯರು ಒಂಟಿತನವು ಆರೋಗ್ಯ ಬಿಕ್ಕಟ್ಟಾಗಿ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳುತ್ತಾರೆ. ಅಲ್ಲದೆ ಇದು ಮಂದಿನ ದಿನಗಳಲ್ಲಿ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆಯೇ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಮೇಲೂ ಪರಿಣಾಮ ಬೀರಲಿದೆ. ಒಂಟಿತನದ ಸಮಸ್ಯೆ ವಯಸ್ಸಾದವರಲ್ಲಿ, ಅದರಲ್ಲಿಯೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಧ್ಯಮ ವರ್ಗದ ಜನರಲ್ಲಿ ಒಂಟಿತನದ ಮಟ್ಟವು ತುಂಬಾ ಹೆಚ್ಚಾಗಿದೆ ಎಂಬ ಕಳವಳಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಒಂಟಿತನ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ;

ಪಿಜಿಐನ ಮನೋವೈದ್ಯಶಾಸ್ತ್ರ ವಿಭಾಗದ ಡಾ. ಅಸಿಮ್ ಮೆಹ್ರಾ ಅವರು ಹೇಳುವ ಪ್ರಕಾರ ಒಂಟಿತನವು ದೇಹದಲ್ಲಿ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ, ಹೃದ್ರೋಗ, ಖಿನ್ನತೆ, ಮಾನಸಿಕ ಒತ್ತಡದಂತಹ ಸಮಸ್ಯೆಗಳ ಹೆಚ್ಚಾಗುತ್ತಿದೆ. ಮದ್ಯಪಾನ, ಧೂಮಪಾನ ಅಥವಾ ಬೊಜ್ಜಿನಿಂದ ಉಂಟಾಗುವ ರೋಗಗಳಂತೆಯೇ, ಒಂಟಿತನದಿಂದಾಗಿ ಇದೇ ರೀತಿಯ ರೋಗಗಳು ಕಂಡು ಬರುತ್ತಿದೆ. ಜನರು ತಮ್ಮ ಒಂಟಿತನವನ್ನು ಭಾವನೆಗಳಿಂದ ವ್ಯಕ್ತಪಡಿಸುತ್ತಾರೆ. ಇದು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಡಾ. ಮೆಹ್ರಾ ಹೇಳುತ್ತಾರೆ. ಏಕೆಂದರೆ ಒಂಟಿತನವು ದೇಹದಲ್ಲಿ ಒತ್ತಡವನ್ನು ಪ್ರಚೋದಿಸುತ್ತದೆ, ಇದು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಹಾರ್ಮೋನ್ ಆಗಿದ್ದು, ಇದರ ಹೆಚ್ಚಳವು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಒಂಟಿತನದಿಂದಾಗಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುವುದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇವು ಮದ್ಯಪಾನ ಅಥವಾ ಧೂಮಪಾನಕ್ಕಿಂತ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಮಾನಸಿಕ ಆರೋಗ್ಯ ಹದಗೆಡುತ್ತದೆ;

ಮನೋವೈದ್ಯ ಡಾ. ಎ. ಕೆ. ಕುಮಾರ್ ಅವರು ಹೇಳುವ ಪ್ರಕಾರ, ಇತ್ತೀಚಿಗೆ ಒಂಟಿತನ ದೊಡ್ಡ ಸಮಸ್ಯೆಯಾಗುತ್ತಿದೆ. ಇದು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಒತ್ತಡ ಹೆಚ್ಚಿ, ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಹಿಂದೆ, ದಿ ಲ್ಯಾನ್ಸೆಟ್ ನಡೆಸಿದ ಸಂಶೋಧನೆಯು ಒಂಟಿತನವು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಬಹಿರಂಗಪಡಿಸಿದೆ. ಕಳೆದ ಕೆಲವು ವರ್ಷಗಳಿಂದ ಒಂಟಿತನದ ಸಮಸ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಕರಲ್ಲಿಯೂ ಕಂಡುಬರುತ್ತಿದೆ.

ಇದನ್ನೂ ಓದಿ: ಇನ್ಮೇಲೆ ಓದುವಾಗ ಕನ್ನಡಕ ಹಾಕಿಕೊಳ್ಳೋ ಅಗತ್ಯವಿಲ್ಲ, ಈ ಡ್ರಾಪ್ಸ್​ ಸಾಕು

ರೋಗ ನಿರೋಧಕ ಶಕ್ತಿ ಹಾಳಾಗುತ್ತದೆ;

ಒಂಟಿತನವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದರಿಂದ ದೇಹವು ಸೋಂಕು ಮತ್ತು ರೋಗಗಳಿಗೆ ಒಳಗಾಗುವ ಭೀತಿ ಇರುತ್ತದೆ. ಅಲ್ಲದೆ ಇದು ರೋಗಿಯ ಚೇತರಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು, ಅಲ್ಲದೆ ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯಾದಾಗ ಅದು ವಾಸಿಯಾಗಲೂ ಕೂಡ ಸಮಯ ತೆಗೆದುಕೊಳ್ಳಬಹುದು.

ನಿದ್ರೆಯನ್ನು ಹಾಳು ಮಾಡುತ್ತದೆ;

ನಿದ್ರೆಯ ಕೊರತೆಯೂ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಹೃದ್ರೋಗ, ಬಿಪಿ ಮತ್ತು ಅಧಿಕ ಸಕ್ಕರೆಯ ಅಪಾಯವನ್ನು ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ದೀರ್ಘಕಾಲದ ಒಂಟಿತನವು ವ್ಯಕ್ತಿಯನ್ನು ಆತಂಕ ಮತ್ತು ಖಿನ್ನತೆಗೆ ನೂಕುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯ ನಿಧಾನವಾಗಿ ಹದಗೆಡುತ್ತದೆ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:10 pm, Wed, 4 September 24