Health Tips: ರಾಗಿ ಮುದ್ದೆ ಮಾಡಲು ಸಾಕಷ್ಟು ಸಮಯ ತಗಲುತ್ತಿದೆಯೇ ಆದ್ದರಿಂದ ಅಷ್ಟೇ ಆರೋಗ್ಯವಾದ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ

ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

Health Tips: ರಾಗಿ ಮುದ್ದೆ ಮಾಡಲು ಸಾಕಷ್ಟು ಸಮಯ ತಗಲುತ್ತಿದೆಯೇ ಆದ್ದರಿಂದ ಅಷ್ಟೇ ಆರೋಗ್ಯವಾದ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ
Raagi Upma Recipe
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 26, 2022 | 1:11 PM

 ರಾಗಿ ಮುದ್ದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದಿರುವ ವಿಷಯ. ಆದರೆ ಇಂದಿನ ಒತ್ತಡದ ಜೀವನದ ಮಧ್ಯೆ ಸುಲಭವಾಗಿ 5ರಿಂದ 10 ನಿಮಿಷದ ಒಳಗಾಗಿ ಮಾಡುವ ತಿಂಡಿಗಳತ್ತ ಜನರು ಒಲವು ಹೆಚ್ಚು.  ರಾಗಿ ಮುದ್ದೆ ಎಂದಾಕ್ಷಣ ಒಮ್ಮೆ ಬಾಯಿಯಲ್ಲಿ ನೀರೂವುದಂತು ಖಂಡಿತ. ಅದರೆ ಅದನ್ನು ತಯಾರಿಸುವುದೇ ತುಂಬ ಕಷ್ಟ ಹಾಗೂ ಸಾಕಷ್ಟು ಸಮಯ ತಗಲುವುದು ಖಂಡಿತ. ಅದಕ್ಕಾಗಿ ರಾಗಿ ಮುದ್ದೆಯಷ್ಟೇ ಆರೋಗ್ಯಕರವಾದ ಹಾಗೂ ಸುಲಭವಾಗಿ 5ರಿಂದ 10 ನಿಮಿಷದ ಒಳಗಾಗಿ ಮಾಡುವ ರಾಗಿಯ ಮತ್ತೊಂದು ರೆಸಿಪಿ ಇಲ್ಲಿದೆ.

ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೆ ರಾಗಿಯಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಮತ್ತು ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಪ್ರಮುಖವಾಗಿ ಕರ್ನಾಟಕದಲ್ಲಿ ಜೋಳ, ರಾಗಿ, ಗೋಧಿ ಮತ್ತು ಅಕ್ಕಿಯನ್ನು ಬಳಸಲಾಗುತ್ತದೆ. ಎಲ್ಲವೂ ತುಂಬಾ ಪೌಷ್ಠಿಕವಾಗಿರುತ್ತದೆ. ಅದರಲ್ಲೂ ರಾಗಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ. ಅದರಲ್ಲೂ ರಾಗಿಯು ಮಕ್ಕಳಿಗೆ ತುಂಬಾ ಒಳ್ಳೆಯದು. ಇದು ತುಂಬಾ ಸುಲಭವಾಗಿ ಕರಗುವ ಕಾರಣದಿಂದ ಇದು ಸಣ್ಣ ಮಕ್ಕಳಿಗೆ ಸರಿಯಾದ ಆಹಾರವೆಂದು ಪರಿಗಣಿಸಲಾಗಿದೆ.

ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೇ ರಾಗಿಯಲ್ಲಿರುವ ಕರಗದ ನಾರು ಜೀರ್ಣಕ್ರಿಯೆ ಮತ್ತು  ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಇದನ್ನು ಓದಿ:

ರಾಗಿ ಉಪ್ಪಿಟ್ಟು ತಯಾರಿಸುವ ವಿಧಾನ:

ಸಾಮಾನ್ಯವಾಗಿ ಮಾಡುವ ಉಪ್ಪಿಟ್ಟಿನ ರೀತಿಯಲ್ಲಿಯೇ ಇದನ್ನು ತಯಾರಿಸಬಹುದಾಗಿದ್ದು, ಆರಂಭದಲ್ಲಿ ರಾಗಿ ಹಿಟ್ಟು ಹುರಿದುಕೊಳ್ಳುವಾಗ ಎಚ್ಚರದಿಂದಿರಬೇಕು. ರಾಗಿ ಉಪ್ಪಿಟ್ಟು ಮಾಡುವ ವಿಧಾನಕ್ಕಾಗಿ ಒಂದು ಕಪ್ ಹಿಟ್ಟು,  ಒಂದು ಕಪ್ ಚಿರೋಟಿ ರವೆ, ಒಂದು ಕಪ್  ಕತ್ತರಿಸಿದ ಈರುಳ್ಳಿ, ಒಂದು ಕಪ್ ಹಸಿಮೆಣಸಿನಕಾಯಿ 4 ರಿಂದ 5, ಕರಿಬೇವು 4 ರಿಂದ 5, ಜೀರಿಗೆ, ಸಾಸಿವೆ, ಅರಿಶಿಣ, ಚಿಟಿಕೆ ಇಂಗು, ಚಿಟಿಕೆ ಉದ್ದಿನಬೇಳೆ, ಒಂದು ಟೀ ಸ್ಪೂನ್ ಕಡಲೆಬೇಳೆ, ಅರ್ಧ ಕಪ್ ಟೊಮಾಟೋ , ಕೊತ್ತಂಬರಿ ಸೊಪ್ಪು, ಗೋಡಂಬಿ: 4 ರಿಂದ 5, ಎಣ್ಣೆ ಕೊನೆಗೆ ಉಪ್ಪು ರುಚಿಗೆ ತಕ್ಕಷ್ಟು ಮೇಲೆ ತಿಳಿಸಿದ ಸಾಮಗ್ರಿ ಬಳಸಿ ಸರಳ ರುಚಿಕರ ಉಪ್ಪಿಟ್ಟು ತಯಾರಿಸಬಹುದು,

  • ಮೊದಲಿಗೆ ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಆದರೆ, ಹುರಿಯುವಾಗ ರಾಗಿ ಹಿಟ್ಟು ಕಪ್ಪು ಆಗದಂತೆ ಎಚ್ಚರ ವಹಿಸಬೇಕು. ನಂತರ ಅದೇ ಪ್ಯಾನ್‌ನಲ್ಲಿ ರವೆಯನ್ನು ಹುರಿದುಕೊಳ್ಳಬೇಕು.
  • ರವೆ ಮತ್ತು ರಾಗಿ ಹಿಟ್ಟು ಹುರಿದುಕೊಂಡ ನಂತರ ತರಕಾರಿಯನ್ನು ಕತ್ತರಿಸಿಕೊಳ್ಳಬೇಕು. ನಂತರ ದೊಡ್ಡದಾದ ಪಾತ್ರೆ ಇರಿಸಿಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಂಡು ಮತ್ತೊಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿಕೊಳ್ಳಬೇಕು.
  • ಒಗ್ಗರಣೆಗೆ ಮೊದಲಿಗೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ ಹಾಕಿದ ಬಳಿಕ ಕಡ್ಲೆಬೇಳೆ, ಗೋಡಂಬಿ, ಉದ್ದಿನಬೇಳೆ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು. ನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಹುರಿದುಕೊಳ್ಳಬೇಕು.
  • ಬಳಿಕ ಹಸಿ ಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ಕೊನೆಗೆ ಟೊಮಾಟೋ ಸೇರಿಸಿ ಅದು ಸಾಫ್ಟ್ ಆಗೋವರೆಗೂ ಬೇಯಿಸಿಕೊಳ್ಳಬೇಕು. ನಂತರ ಚಿಟಿಕೆ ಅರಿಶಿನ, ಉಪ್ಪು ಮತ್ತು ಇಂಗು ಸೇರಿಸಿ ಪ್ರೈ ಮಾಡಬೇಕು.
  • ಒಗ್ಗರಣೆ ಮಸಾಲೆ ಸಿದ್ಧವಾಗುತ್ತಿದ್ದಂತೆ ಮೊದಲಿಗೆ ಹುರಿದಿಟ್ಟುಕೊಂಡಿರುವ ರವೆ ಮತ್ತು ರಾಗಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ರವೆ ಮತ್ತು ರಾಗಿ ಮಿಕ್ಸ್ ಮಾಡುವಾಗ ಉರಿಯನ್ನು ಕಡಿಮೆ ಮಾಡಿಕೊಳ್ಳಬೇಕು, ಇಲ್ಲಾದಿದ್ದರೆ ಗಂಟು ಗಂಟು ಆಗುವ ಸಾಧ್ಯತೆಗಳಿರುತ್ತವೆ.
  • ಒಗ್ಗರಣೆ ಜೊತೆ ರವೆ ಮತ್ತು ರಾಗಿಹಿಟ್ಟು ಮಿಶ್ರಣ ಆಗುತ್ತಿದ್ದಂತೆ ನೀರು ಸೇರಿಸಿ ನಾಲ್ಕರಿಂದ ಐದು ನಿಮಿಷ ಬೇಯಿಸಬೇಕು. ಕೊನೆಗೆ ಸಿದ್ಧವಾದಲಾಗಿ ಉಪ್ಪಿಟ್ಟು ಮೇಲೆ ಕೋತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದ್ರೆ ಉಪ್ಪಿಟ್ಟು ರೆಡಿಯಾಗುತ್ತದೆ.
  • ಸಿದ್ಧವಾದ ಉಸ್ಮಾವನ್ನು ಹಸಿ ತೆಂಗಿನಕಾಯಿ ಚಟ್ಟಿ ಅಥವಾ ಟೊಮಾಟೋ ಚಟ್ಟಿ ಜೊತೆ ಸವಿಯಬಹುದು.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:22 am, Wed, 26 October 22

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್