ಪುರುಷರಿಗೆ ಈ ಬೇಸಿಗೆಯಲ್ಲಿ ಯಾವ ಅಂಡರ್‌ವೇರ್‌ ಉತ್ತಮ? ಒಳ ಉಡುಪಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ

ಪುರುಷರಾಗಿರಲಿ ಅಥವಾ ಮಹಿಳೆಯರಾಗಿರಲಿ ತಾವು ಧರಿಸುವ ಒಳ ಉಡುಪಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅದರಲ್ಲೂ ಪುರುಷರು ಆಯ್ಕೆ ಮಾಡುವ ಒಳ ಉಡುಪುಗಳ ಪ್ರಕಾರವು ಅವರ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ಧರಿಸುವಾಗ ಸರಿಯಾದ ಆಯ್ಕೆ ಮತ್ತು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೀಗಿರುವಾಗ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಪುರುಷರು ಯಾವ ಬಗೆಯ ಒಳ ಉಡುಪು ಧರಿಸಿದರೆ ಉತ್ತಮ ಎಂಬುದನ್ನು ತಿಳಿಯಿರಿ.

ಪುರುಷರಿಗೆ ಈ ಬೇಸಿಗೆಯಲ್ಲಿ ಯಾವ ಅಂಡರ್‌ವೇರ್‌ ಉತ್ತಮ? ಒಳ ಉಡುಪಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ
ಸಾಂದರ್ಭಿಕ ಚಿತ್ರ
Edited By:

Updated on: Apr 03, 2025 | 12:52 PM

ಹೆಚ್ಚಿನವರು ಬಟ್ಟೆಗಳನ್ನು (dress) ಆಯ್ಕೆ ಮಾಡಲು ಸಮಯ ಮತ್ತು ಹಣವನ್ನು ವ್ಯಯಿಸುವಷ್ಟು, ಯಾವ ಬಟ್ಟೆ ಸೂಕ್ತ ಎಂದು ತಲೆ ಕೆಡಿಸಿಕೊಳ್ಳುವಷ್ಟು ಒಳ ಉಡುಪುಗಳನ್ನು (underwear) ಆಯ್ಕೆಯ ವಿಷಯದಲ್ಲಿ ಗಮನ ಹರಿಸುವುದಿಲ್ಲ. ಅದರಲ್ಲೂ ಕೆಲವರು ಒಳ ಉಡುಪು ತಾನೇ ಯಾವುದಾದ್ರೂ ಏನು ಕಮ್ಮಿ ರೇಟ್‌ ಇರುವಂತಹದ್ದನ್ನು ಆಯ್ಕೆ ಮಾಡಿದ್ರೆ ಆಯ್ತಪ್ಪಾ ಎಂದು ಅಂದುಕೊಳ್ಳುತ್ತಾರೆ. ಆದ್ರೆ ಏನ್‌ ಗೊತ್ತಾ ಪುರುಷರಾಗಿರಲಿ (Men) ಅಥವಾ ಮಹಿಳೆಯರೇ (Women) ಆಗಿರಲಿ ತಾವು ಧರಿಸುವ ಒಳ ಉಡುಪಿನ ಆಯ್ಕೆಯ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಅದರಲ್ಲೂ ಪುರುಷರು ಧರಿಸುವ ಒಳ ಉಡುಪುಗಳು ಅವರ ಆರೋಗ್ಯದ (Health) ಮೇಲೆ ಗಮನಾರ್ಹ ಪರಿಣಾಮವನ್ನು ಬೀರುವ ಕಾರಣ, ಅಂಡರ್‌ವೇರ್‌ ಆಯ್ಕೆಯ ವಿಚಾರದಲ್ಲಿ ಕೇರ್‌ಫುಲ್‌ ಆಗಿರಬೇಕು. ಹಾಗಿದ್ರೆ ಪುರುಷರು ಯಾವ ತರಹದ ಒಳ ಉಡುಪುಗಳನ್ನು ಆಯ್ಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಪುರುಷರು ಧರಿಸುವ ಒಳ ಉಡುಪುಗಳು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವರು ಖಾಸಗಿ ಭಾಗದಲ್ಲಿ ತುರಿಕೆ, ಸೋಂಕು, ಚರ್ಮದ ಕಿರಿಕಿರಿ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವೆಲ್ಲವೂ ಹೆಚ್ಚಾಗಿ ತಪ್ಪಾದ ಒಳ ಉಡುಪುಗಳ ಆಯ್ಕೆಯ ಕಾರಣದಿಂದಾಗಿ ಉದ್ಭವಿಸುವ ಸಮಸ್ಯೆಯಾಗಿದೆ. ಅಷ್ಟೆ ಅಲ್ಲದೆ ಅತಿ ಬಿಗಿಯಾದ, ಗಾಳಿಯಾಡದ ಒಳ ಉಡುಪುಗಳನ್ನು ಧರಿಸುವುದರಿಂದ ಅದು ಫಲವತ್ತತೆ ಹಾಗೂ ವೀರ್ಯ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಒಳ ಉಡುಪುಗಳ ಆಯ್ಕೆ ಮಾಡುವ ವಿಚಾರದಲ್ಲಿ ಬಹಳ ಜಾಗರೂಕರಾಗಿರಬೇಕು.

ಒಳ ಉಡುಪುಗಳ ಆಯ್ಕೆ ಹೀಗಿರಲಿ:

ಬಾಕ್ಸರ್:

ಈ ಪ್ರಕಾರದ ಒಳ ಉಡುಪು ಗಾಳಿಯ ಹರಿವನ್ನು ನೀಡುತ್ತದೆ. ಮತ್ತು ಇದು ಸಡಿಲವಾಗಿರುವದರಿಂದ ದೈನಂದಿನ ಉಡುಗೆಗೆ ಸೂಕ್ತವಾಗಿದೆ. ಜೊತೆಗೆ ವಿಶ್ರಾಂತ್ರಿ ಸಮಯದಲ್ಲೂ ಈ ಒಳ ಉಡುಪು ಸೂಕ್ತವಾಗಿದೆ, ಆದರೆ ವ್ಯಾಯಾಮ ಅಥವಾ ಜಿಮ್‌ ವರ್ಕೌಟ್‌ ಸಮಯದಲ್ಲಿ ಈ ಬಗೆಯ ಒಳ ಉಡುಪನ್ನು ಧರಿಸುವುದನ್ನು ತಪ್ಪಿಸಿ, ಏಕೆಂದರೆ ಕೆಲವು ಬಾರಿ ಇದು ಕಿರಿಕಿರಿಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

ಬ್ರೀಫ್:

ಕ್ರೀಡೆ ಅಥವಾ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಬ್ರೀಫ್‌ಗಳನ್ನು ಧರಿಸುವುದು ಉತ್ತಮ. ಇದು ಆ ಸಮಯದಲ್ಲಿ ದೇಹಕ್ಕೆ ಉತ್ತಮ ಬೆಂಬಲವನ್ನು ನೀಡುತ್ತದೆ. ಆದರೆ ದಿನದ ಹೆಚ್ಚಿನ ಸಮಯ ಈ ಬಗೆಯ ಒಳ ಉಡುಪನ್ನು ಧರಿಸುವುದು ಸೂಕ್ತವಲ್ಲ. ಏಕೆಂದರೆ ಇದು ದೇಹದಲ್ಲಿ ಗಾಳಿಯ ಹರಿವನ್ನು ನಿರ್ಬಂಧಿಸುವ ಕಾರಣ, ಅತಿಯಾಗಿ ಬೆವರುವ ಮತ್ತು ಬಿಸಿಯಾಗುವ ಸಾಧ್ಯತೆ ಇರುತ್ತದೆ. ಇದು ಪುರುಷರ ಫಲವತ್ತತೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ಜೊತೆಗೆ ದೀರ್ಘಕಾಲದವರೆಗೆ ಈ ಬಗೆಯ ಒಳ ಉಡುಪನ್ನು ಧರಿಸುವುದರಿಂದ ಇದು ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ.

ಪುರುಷರ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಬಾಕ್ಸರ್‌ ಅಂಡರ್‌ವೇರ್‌ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಗಾಳಿಯ ಹರಿಯುವಿಕೆಗೆ ಸಹಾಯ ಮಾಡುವುದರ ಜೊತೆಗೆ ಆರಾಮದಾಯಕವಾದ ಒಳ ಉಡುಪಾಗಿದೆ. ಅಷ್ಟೇ ಅಲ್ಲದೆ ಒಳ ಉಡುಪುಗಳನ್ನು ಆಯ್ಕೆ ಮಾಡುವಾಗ ಬಟ್ಟೆಯ ಪ್ರಕಾರ (ತೇವಾಂಶ ಹೀರಿಕೊಳ್ಳುವಂತಹ ಹತ್ತಿ, ಮೈಕ್ರೋಫೈಬರ್‌), ಗುಣಮಟ್ಟವನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: ಮೊಸಳೆ ಹಾಗೂ ದೋಣಿ ? ಈ ಚಿತ್ರದಲ್ಲಿ ನೀವು ಮೊದಲು ಕಂಡದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ

ಖಾಸಗಿ ಭಾಗದ ನೈರ್ಮಲ್ಯದ ದೃಷ್ಟಿಯಿಂದ ನೋಡುವುದಾದರೆ, ಪ್ರತಿದಿನ ಒಳ ಉಡುಪುಗಳನ್ನು ಬದಲಾಯಿಸಬೇಕು, ಒಮ್ಮೆ ಹಾಕಿದ ಒಳ ಉಡುಪವನ್ನು ತೊಳೆಯದೆ ಮತ್ತೊಮ್ಮೆ ಹಾಕುವಂತಿಲ್ಲ, ಜೊತೆಗೆ ವಿಶೇಷವಾಗಿ ಈ ಬೇಸಿಗೆಯಲ್ಲಿ ಬಿಗಿಯಾದ ಅಂಡರ್‌ವೇರ್‌ ಧರಿಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ