ಸಮಯಕ್ಕೆ ಸರಿಯಾಗಿ ಋತುಚಕ್ರ ಆಗದಿದ್ದರೆ ಖಂಡಿತ ಭಾದಿಸುತ್ತಿದೆ ಈ ರೋಗ ಲಕ್ಷಣ
ಮಹಿಳೆಯರಿಗೆ ತುಂಬಾ ತೊಂದರೆ ನೀಡುವ ಕ್ಷಣ ಎಂದರೆ ಅದು ಪ್ರತಿ ತಿಂಗಳು ಆಗುವ ಋತು ಚಕ್ರ, ಇದು ಮಹಿಳೆಯರಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದರಿಂದ ಅವರ ಗರ್ಭಕೋಶಕ್ಕೂ ತೊಂದರೆಯನ್ನು ಉಂಟು ಮಾಡಬಹುದು. ಸರಿಯಾದ ಸಮಯಕ್ಕೆ ಋತುಚಕ್ರ ಆಗದಿದ್ದರೆ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಈ ಕ್ರಮಗಳನ್ನುಅನುಸರಿಬೇಕು, ಅವರ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು.

ಈ ಬೇಸಿಗೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಅನುಭವಿಸುವ ಸಮಸ್ಯೆ ಎಂದರೆ ತಿಂಗಳ ಋತುಚಕ್ರ, ಈ ಋತುಚಕ್ರದಿಂದ (period) ಈಗಿನ ಮಹಿಳೆಯರು ತುಂಬಾ ತೊಂದರೆಗಳನ್ನು ಅನುಭವಿಸುತ್ತಾರೆ. ಮಹಿಳೆಯರಿಗೆ ಪ್ರತಿ ತಿಂಗಳು ಋತುಚಕ್ರ ಬರುತ್ತದೆ, ಆದರೆ ಮಹಿಳೆ ಗರ್ಭಿಣಿಯಾಗಿಲ್ಲದಿದ್ದರೆ ಮತ್ತು ಆಕೆಯ ಋತುಚಕ್ರ ಸಮಯಕ್ಕೆ ಸರಿಯಾಗಿ ಬರದಿದ್ದರೆ, ಆಗಾ ಅವರು ಕೆಲವೊಂದು ರೋಗದ ಲಕ್ಷಣಗಳು ಕಾಡುತ್ತದೆ.
ಈ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ, ಇದನ್ನು ತಕ್ಷಣ ಹಗುರವಾಗಿ ತೆಗೆದುಕೊಳ್ಳಬೇಡಿ, ಈ ವಿಷಯದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಿ ಸಂಪರ್ಕಿಸಿ ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಸ್ತ್ರೀರೋಗ ತಜ್ಞರು ಹೇಳುವಂತೆ ಅನಿಯಮಿತ ಋತುಚಕ್ರವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನ ಲಕ್ಷಣವಾಗಿದೆ.ಪಿಸಿಓಎಸ್ ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನುಗಳ ಅಸ್ವಸ್ಥತೆಯಾಗಿದೆ. ಇಂದಿನ ಕಾಲದಲ್ಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯಿಂದಾಗಿ, ಈ ರೋಗವು ತುಂಬಾ ಸಾಮಾನ್ಯವಾಗಿದೆ.
ಆದರೆ ಇದನ್ನು ಹಗುರವಾಗಿ ಪರಿಗಣಿಸಬಾರದು. ಅನಿಯಮಿತ ಋತುಚಕ್ರ, ತೂಕ ಹೆಚ್ಚಾಗುವುದು ಮತ್ತು ಚರ್ಮದ ಮೇಲೆ ಮೊಡವೆಗಳು ಇದರ ಲಕ್ಷಣಗಳಾಗಿವೆ.ಕೆಲವು ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆಗಳಿಂದಾಗಿ ಋತುಚಕ್ರ ಸಮಯಕ್ಕೆ ಸರಿಯಾಗಿ ಬರದಿರುವ ಸಮಸ್ಯೆಯೂ ಇರುತ್ತದೆ.ಮಹಿಳೆಯ ಮೆಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಈ ರೋಗ ಸಂಭವಿಸುತ್ತದೆ. ಮುಟ್ಟಿನ ಸಮಯ ತಪ್ಪುವುದು, ತೂಕ ಹೆಚ್ಚಾಗುವುದು ಮತ್ತು ಆಯಾಸ ಇದರ ಲಕ್ಷಣಗಳಾಗಿವೆ.
ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಪತ್ತೆ ಮಾಡಲು ಈ ರೀತಿ ಮಾಡಿ
ಥೈರಾಯ್ಡ್ ಕಾಯಿಲೆಯು ಆನುವಂಶಿಕ ಕಾರಣಗಳಿಂದಲೂ ಉಂಟಾಗುತ್ತದೆ. ಮಹಿಳೆಯರಲ್ಲಿ ಮಾನಸಿಕ ಒತ್ತಡವು ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವಾಗಬಹುದು. ಇದಲ್ಲದೆ, ಗರ್ಭಾಶಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯೂ ಇದಕ್ಕೆ ಕಾರಣವಾಗಬಹುದು.ನಿಮ್ಮ ಋತುಚಕ್ರವನ್ನು ಸರಿಯಾದ ಸಮಯಕ್ಕೆ ಆಗಬೇಕಾದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದನ್ನು ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳನ್ನು ಸೇರಿಸಿ. ಮೀನು ಮತ್ತು ವಾಲ್ನಟ್ಸ್ ನಂತಹ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರಗಳು ಮುಟ್ಟನ್ನು ನಿಯಮಿತಗೊಳಿಸಲು ಸಹಾಯ ಮಾಡುತ್ತದೆ. ಯಾವುದೇ ಲಕ್ಷಣಗಳು ಕಂಡುಬಂದರೆ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ದೇಹದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದು ರೋಗಕ್ಕೆ ಸಕಾಲಿಕ ಚಿಕಿತ್ಸೆ ನೀಡಲು ಸಾಧ್ಯವಾಗಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ