Monkeypox: ಮಂಕಿಪಾಕ್ಸ್ ವೈರಸ್ ನಿಂದ ಅಪಾಯವಿದೆಯೇ? ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ತಿಳಿದುಕೊಳ್ಳಿ
2022 ರಲ್ಲಿ ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಕೊನೆಯ ಬಾರಿಗೆ ವರದಿಯಾಗಿತ್ತು. ಆ ಸಮಯದಲ್ಲಿ, ವಿಶ್ವದ ಅನೇಕ ದೇಶಗಳಲ್ಲಿ ಸುಮಾರು ಒಂದು ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಈ ವೈರಸ್ ಭಾರತದಲ್ಲಿಯೂ ವರದಿಯಾಗಿತ್ತು. ಜೊತೆಗೆ ಕೇರಳದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿರಲಿಲ್ಲ. ಈಗ ಕೆಲವು ತಿಂಗಳ ಹಿಂದೆ ಮತ್ತೆ ಮಂಕಿಪಾಕ್ಸ್ ವೈರಸ್ ಬೇರೆ ದೇಶಗಳಲ್ಲಿ ಹೆಚ್ಚಾಗಿದ್ದು ಭಾರತದಲ್ಲಿಯೂ ಸೋಮವಾರ ಒಂದು ಪ್ರಕರಣ ದೃಢಪಟ್ಟಿದೆ. ಹಾಗಾದರೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವೇಗವಾಗಿ ಹೆಚ್ಚಾಗಬಹುದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.
ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ವಿದೇಶದಿಂದ ದೆಹಲಿಗೆ ಮರಳಿದ ವ್ಯಕ್ತಿಯಲ್ಲಿ ಈ ವೈರಸ್ ಲಕ್ಷಣಗಳು ಕಂಡು ಬಂದಿವೆ. ಹಾಗಾಗಿ ರೋಗಿಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಈ ಪ್ರಕರಣದ ಬೆನ್ನಲ್ಲೇ ಮತ್ತಷ್ಟು ಜನರಲ್ಲಿ ಈ ವೈರಸ್ ಕಂಡುಬರುವ ನಿರೀಕ್ಷೆಯಿದೆ. 2022 ರಲ್ಲಿ ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಕೊನೆಯ ಬಾರಿಗೆ ವರದಿಯಾಗಿತ್ತು. ಆ ಸಮಯದಲ್ಲಿ, ವಿಶ್ವದ ಅನೇಕ ದೇಶಗಳಲ್ಲಿ ಸುಮಾರು ಒಂದು ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಈ ವೈರಸ್ ಭಾರತದಲ್ಲಿಯೂ ವರದಿಯಾಗಿತ್ತು. ಜೊತೆಗೆ ಕೇರಳದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿರಲಿಲ್ಲ. ಈಗ ಕೆಲವು ತಿಂಗಳ ಹಿಂದೆ ಮತ್ತೆ ಮಂಕಿಪಾಕ್ಸ್ ವೈರಸ್ ಬೇರೆ ದೇಶಗಳಲ್ಲಿ ಹೆಚ್ಚಾಗಿದ್ದು ಭಾರತದಲ್ಲಿಯೂ ಸೋಮವಾರ ಒಂದು ಪ್ರಕರಣ ದೃಢಪಟ್ಟಿದೆ. ಹಾಗಾದರೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವೇಗವಾಗಿ ಹೆಚ್ಚಾಗಬಹುದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.
ಭಾರತದಲ್ಲಿ ಮಂಕಿಪಾಕ್ಸ್ ವೈರಸ್ ನಿಂದ ಯಾವ ರೀತಿಯ ಅಪಾಯವಿದೆ?
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಜುಗಲ್ ಕಿಶೋರ್ ಅವರು ಹೇಳುವ ಪ್ರಕಾರ, ಮಂಕಿಪಾಕ್ಸ್ ಭಾರತದಲ್ಲಿಯೂ ಪತ್ತೆಯಾಗಿದ್ದು, ರೋಗಿಯಲ್ಲಿ ಮಂಕಿಪಾಕ್ಸ್ ಸ್ಟ್ರೈನ್ ಕ್ಲೇಡ್ 2 ದೃಢಪಟ್ಟಿದೆ. ಆದರೆ ಇದು ವಿಶ್ವಾದ್ಯಂತ ಪ್ರಕರಣಗಳು ಹೆಚ್ಚುತ್ತಿರುವ ಸ್ಟ್ರೈನ್ ಅಲ್ಲ. ಮಂಕಿಪಾಕ್ಸ್ನ ಕ್ಲೇಡ್ 2, 2022 ರಲ್ಲಿ ಭಾರತದಲ್ಲಿ ಕಂಡು ಬಂದಿದ್ದು, ಆಗ ಭಾರತದಲ್ಲಿ ಈ ವೈರಸ್ನ ಸುಮಾರು 30 ಪ್ರಕರಣಗಳು ಇದ್ದವು. ಹಾಗಾಗಿ ಈ ಬಾರಿಯೂ ಯಾವುದೇ ದೊಡ್ಡ ಅಪಾಯವಾಗುವುದಿಲ್ಲ ಎಂದು ಎನಿಸುತ್ತದೆ. ಆದರೆ ಈ ಸಮಯದಲ್ಲಿ ಜನರು ಈ ವೈರಸ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕು ಮತ್ತು ಶಂಕಿತ ರೋಗಿಗಳನ್ನು ಪ್ರತ್ಯೇಕಿಸಿ ತಕ್ಷಣ ಪರೀಕ್ಷಿಸಬೇಕು. ಬೇರೆ ಯಾವುದೇ ವ್ಯಕ್ತಿಗೆ ಸೋಂಕು ತಗುಲಿರುವುದು ಕಂಡು ಬಂದರೆ, ಅವರೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆ ಹಚ್ಚಬೇಕು ಮತ್ತು ಪರೀಕ್ಷೆಗೆ ಒಳಪಡಿಸಬೇಕು” ಎಂದಿದ್ದಾರೆ.
ಮಂಕಿಪಾಕ್ಸ್ ನ ಹೆಚ್ಚಿನ ಪ್ರಕರಣಗಳು ಪುರುಷರಲ್ಲಿ ಕಂಡು ಬಂದಿದೆ!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ ಹೆಚ್ಚಿನ ಪ್ರಕರಣಗಳು ಪುರುಷರಲ್ಲಿ ವರದಿಯಾಗಿವೆ. ಲೈಂಗಿಕ ಸಂಭೋಗದ ಸಮಯದಲ್ಲಿ ಎಂಪೋಕ್ಸ್ ನ ಪ್ರಕರಣಗಳು ಹೆಚ್ಚಾಗಿ ಹರಡುತ್ತದೆ. ಅದರ ನಂತರ, ಯಾರೊಂದಿಗಾದರೂ ನಿಕಟ ಸಂಪರ್ಕ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತವೆ. ಹಾಗಾಗಿ ಯಾವುದೇ ರೋಗಿ ಸೋಂಕಿಗೆ ಒಳಗಾಗಿದ್ದರೆ, ಲಾಲಾರಸ, ಆತ ಬಳಸಿದ ಟವೆಲ್, ಬಟ್ಟೆ, ಹಾಸಿಗೆ, ಪಾತ್ರೆಗಳ ಸಂಪರ್ಕಕ್ಕೆ ಬರುವ ಮೂಲಕ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಆದರೆ ಕೋವಿಡ್ ನಂತೆ ಮಂಕಿಪಾಕ್ಸ್ ವೇಗವಾಗಿ ಹರಡುವುದಿಲ್ಲ. ಈ ವೈರಸ್ ಸಿಡುಬು ಕುಟುಂಬಕ್ಕೆ ಸೇರಿರುವುದರಿಂದ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವವರಲ್ಲಿ ಇದು ಕಂಡು ಬರುವುದಿಲ್ಲ. ಸಿಡುಬಿಗೆ ಲಸಿಕೆ ಪಡೆದ ಜನರಲ್ಲಿ ಮಂಕಿಪಾಕ್ಸ್ ಅಪಾಯವೂ ಕಡಿಮೆ ಎಂದು ಹೇಳಲಾಗುತ್ತದೆ. ಆದರೆ ಇದರರ್ಥ ಅಂತವರಿಗೆ ಮಂಕಿಪಾಕ್ಸ್ ಬರುವುದಿಲ್ಲ ಎಂದಲ್ಲ, ಆದರೆ ಅಪಾಯ ಕಡಿಮೆ ಇರುತ್ತದೆ.
ರೋಗಲಕ್ಷಣಗಳು ಯಾವುವು?
ತೀವ್ರ ತಲೆನೋವು
ಜ್ವರ
ದೌರ್ಬಲ್ಯ
ದೇಹದ ಮೇಲೆ ಗುಳ್ಳೆಗಳು
ಆಹಾರವನ್ನು ನುಂಗಲು ಕಷ್ಟ
ಇದನ್ನೂ ಓದಿ: ಸಂಧಿವಾತವಿದ್ದರೆ ಈ ತಪ್ಪುಗಳನ್ನು ಮಾಡಬೇಡಿ, ಸಮಸ್ಯೆ ಹೆಚ್ಚಾಗುತ್ತದೆ
ಹೇಗೆ ರಕ್ಷಿಸಿಕೊಳ್ಳಬೇಕು?
ಜ್ವರದ ಲಕ್ಷಣಗಳನ್ನು ಹೊಂದಿರುವ ಯಾರೊಂದಿಗೂ ಸಂಪರ್ಕಕ್ಕೆ ಬರಬೇಡಿ.
ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ.
ಮಂಕಿಪಾಕ್ಸ್ ಪೀಡಿತ ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ