
ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಸರಿಯಾಗಿ ಕ್ಲೀನ್ ಆಗದಿರುವುದು, ಮಲವಿಸರ್ಜನೆಗೆ ಕಷ್ಟವಾಗುವುದು, ಮಲ ಗಟ್ಟಿಯಾಗುವುದು, ಹೊಟ್ಟೆ ಉಬ್ಬರ ಮತ್ತು ಭಾರವಾದ ಅನುಭವ ಮಲಬದ್ಧತೆಯ ಸಾಮಾನ್ಯ ಲಕ್ಷಣಗಳಾಗಿವೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಲು ಅನೇಕರು ಪ್ರಯತ್ನಿಸುತ್ತಾರೆ. ಇಂತಹ ಆರೋಗ್ಯ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಓಂ ಕಾಳು ಅಥವಾ ಅಜ್ವೈನ್, ಸ್ವಲ್ಪ ಕಪ್ಪು ಉಪ್ಪು ಬೆರೆಸಿ ಸೇವಿಸುವುದು ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ಒಂದು. ಆದರೆ ಇದರಿಂದ ನಿಜವಾಗಿಯೂ ಮಲಬದ್ಧತೆ ನಿವಾರಣೆಯಾಗುತ್ತದೆ ಎಂಬುದು ಸತ್ಯವೇ, ಈ ಸಮಸ್ಯೆ ತಡೆಗಟ್ಟಲು ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಓಂ ಕಾಳು ಅಡುಗೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಅಸ್ವಸ್ಥತೆಗಳು, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗಳಿಗೆ ಓಂ ಕಾಳನ್ನು ಸಾಂಪ್ರದಾಯಿಕವಾಗಿ ಬಳಸುವ ಪದ್ಧತಿಯಿದೆ. ಅದರೊಂದಿಗೆ ಸ್ವಲ್ಪ ಕಪ್ಪು ಉಪ್ಪನ್ನು ಸೇವಿಸುವುದೂ ಕೂಡ ಒಳ್ಳೆಯದು ಎಂದು ಹೇಳಲಾಗುತ್ತದೆ.
ಆದರೆ ಈ ಮಿಶ್ರಣವು ಮಲಬದ್ಧತೆಯನ್ನು ಗುಣಪಡಿಸುತ್ತದೆ ಅಥವಾ ಎಲ್ಲರಿಗೂ ಒಂದೇ ರೀತಿಯ ಪರಿಣಾಮ ನೀಡುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರ ಜೊತೆಗೆ ಕಪ್ಪು ಉಪ್ಪಿನಲ್ಲಿಯೂ ಸೋಡಿಯಂ ಇರುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು.
ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸಲು ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಸಹಾಯಕವಾಗಬಹುದು.
ನಾರಿನಾಂಶ ಹೆಚ್ಚಿಸಿ: ಪಪ್ಪಾಯಿ, ಪೇರಳೆ, ತರಕಾರಿಗಳು, ಬೇಳೆಕಾಳುಗಳು, ಓಟ್ಸ್ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ನಾರಿನಾಂಶವನ್ನು ಕ್ರಮೇಣ ಹೆಚ್ಚಿಸಿ.
ಇದನ್ನೂ ಓದಿ: ಫುಡ್ ಪಾಯ್ಸನಿಂಗ್ನಿಂದ ಹೊಟ್ಟೆ ನೋವು ಕಂಡುಬಂದರೆ ಈ ಸರಳ ಕ್ರಮ ಅನುಸರಿಸಿ
ಸಾಕಷ್ಟು ನೀರು ಕುಡಿಯಿರಿ: ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ವೈದ್ಯರು ನೀರಿನ ಪ್ರಮಾಣವನ್ನು ಮಿತಿಗೊಳಿಸಿದ್ದರೆ ಅವರ ಸಲಹೆ ಪಾಲಿಸಿ.
ನಿಯಮಿತವಾಗಿ ನಡೆಯಿರಿ: ಪ್ರತಿದಿನ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡಿ.
ಮಲವಿಸರ್ಜನೆಯ ಅಭ್ಯಾಸ ಬೆಳೆಸಿಕೊಳ್ಳಿ: ವಿಶೇಷವಾಗಿ ಉಪಾಹಾರದ ನಂತರ ಶಾಂತವಾಗಿ ಶೌಚಕ್ಕೆ ಪ್ರಯತ್ನಿಸಿ. ಮಲವಿಸರ್ಜನೆಯ ಒತ್ತಡವನ್ನು ತಡೆಹಿಡಿಯಬೇಡಿ. ಪ್ರತಿದಿನ ಬೆಳಗ್ಗೆಯೇ ಮಲವಿಸರ್ಜನೆ ಆಗಬೇಕು ಎಂಬ ನಿಯಮವಿಲ್ಲ. ಮಲವಿಸರ್ಜನೆ ಸುಲಭವಾಗಿ, ನೋವಿಲ್ಲದೆ ಆಗುತ್ತಿದೆಯೇ ಎಂಬುದು ಮುಖ್ಯ.
ಆಹಾರದಲ್ಲಿ ಬದಲಾವಣೆ ಮಾಡಿದರೂ ಮಲಬದ್ಧತೆ ಕಡಿಮೆಯಾಗದಿದ್ದರೆ ಅಥವಾ ಪದೇಪದೇ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ. ಮಲದಲ್ಲಿ ರಕ್ತ ಕಾಣಿಸುವುದು, ತೀವ್ರ ಹೊಟ್ಟೆನೋವು, ವಾಂತಿ, ಹೊಟ್ಟೆ ಅತಿಯಾಗಿ ಉಬ್ಬುವುದು ಅಥವಾ ಗ್ಯಾಸ್ ಕೂಡ ಹೊರಹೋಗದಿರುವುದು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಗಮನಿಸಿ: ವಾಮು ಮತ್ತು ಕಪ್ಪು ಉಪ್ಪು ಮಲಬದ್ಧತೆಗೆ ಸಾಬೀತಾದ ಚಿಕಿತ್ಸೆಯಲ್ಲ. ಮನೆಮದ್ದುಗಳನ್ನೇ ಅವಲಂಬಿಸುವ ಬದಲು, ಸಮಸ್ಯೆಯ ಕಾರಣವನ್ನು ತಿಳಿದು ಸೂಕ್ತ ಪರಿಹಾರ ಪಡೆಯುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ