AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಲ್ಲಿ ಪದೇ ಪದೇ ಹುಣ್ಣಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಗಟ್ಟಲು ಈ ಸಿಂಪಲ್ ಟ್ರಿಕ್ಸ್ ಪಾಲಿಸಿ

ಬಾಯಿ ಹುಣ್ಣುಗಳಿಗೆ ಹಲವು ಕಾರಣಗಳಿವೆ. ಸೋಂಕುಗಳಿಂದ ಹಿಡಿದು ಜೀರ್ಣಕಾರಿ ಸಮಸ್ಯೆಗಳವರೆಗೆ. ಆದರೆ ಅವು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅದು ಎಚ್ಚರಿಕೆಯ ಸಂಕೇತವಾಗಿರಬಹುದು. ಹೌದು, ನಿರಂತರವಾಗಿ ಬಾಯಿಯಲ್ಲಿ ಹುಣ್ಣುಗಳು ಕಂಡುಬರುವುದು ಒಳ್ಳೆಯದಲ್ಲ. ಏಕೆಂದರೆ ಅದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. ಹಾಗಾಗಿ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಮಾಡುವ ಬದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವ ಕ್ರಮಗಳತ್ತ ಗಮಕೊಡಿ.

ಬಾಯಲ್ಲಿ ಪದೇ ಪದೇ ಹುಣ್ಣಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಗಟ್ಟಲು ಈ ಸಿಂಪಲ್ ಟ್ರಿಕ್ಸ್ ಪಾಲಿಸಿ
Mouth Ulcer SymptomsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 20, 2026 | 7:52 PM

Share

ಬಾಯಿ ಹುಣ್ಣಿನ (Mouth Ulcer) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ… ಕೆಲವರು ನೋಡಿರುತ್ತಾರೆ ಇನ್ನು ಕೆಲವರು ಅನುಭವಿಸಿರುತ್ತಾರೆ. ತುಂಬಾ ಖಾರವಾದ ಆಹಾರ ಸೇವನೆ ಮಾಡಿದಾಗ, ಹೊಟ್ಟೆ ದುರ್ಬಲವಾದಾಗ ನಿಮಗೆ ಬಾಯಿಯಲ್ಲಿ ಹುಣ್ಣುಗಳು ಬರಬಹುದು. ಸಾಮಾನ್ಯವಾಗಿ ಈ ರೀತಿ ಕಂಡುಬರುವ ಹುಣ್ಣುಗಳು ಒಮ್ಮೆ ಕಾಣಿಸಿಕೊಳ್ಳುತ್ತವೆ ಬಳಿಕ ಕೆಲವು ದಿನಗಳಲ್ಲಿಯೇ ಮಾಯವಾಗುತ್ತವೆ, ಈ ರೀತಿಯಾಗುವುದು ಬಹಳ ಸಹಜ. ಆದರೆ ಆಗಾಗ ಈ ರೀತಿಯಾಗುತ್ತಿದ್ದರೆ ಅದನ್ನು ಕಡೆಗಣಿಸಬೇಡಿ. ಏಕೆಂದರೆ ಇದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. ಹೌದು, ಪದೇ ಪದೇ ಈ ರೀತಿಯಾಗುವುದಕ್ಕೆ ಕಾರಣವಿದೆ. ಹಾಗಾಗಿ ನಿಮಗೂ ಈ ರೀತಿ ಅನುಭವ ಆಗಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಮಾಡುವ ಬದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವ ಕ್ರಮಗಳತ್ತ ಗಮಕೊಡಿ.

ಬಾಯಿಯಲ್ಲಿ ಹುಣ್ಣುಗಳು ಕಂಡುಬರುವುದಕ್ಕೆ ಹಲವಾರು ಕಾರಣಗಳಿರಬಹುದು. ಅವುಗಳಲ್ಲಿ ಸಾಮಾನ್ಯ ಕಾರಣವೆಂದರೆ ದೇಹದಲ್ಲಿ ಫೋಲಿಕ್ ಆಮ್ಲ ಅಥವಾ ಕಬ್ಬಿಣದ ಕೊರತೆಯಾಗಿರುವುದು. ಹೌದು, ಇದರ ಜೊತೆಗೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದರಿಂದಲೂ ಈ ರೀತಿ ಆಗಿರಬಹುದು. ಕೆಲವರಲ್ಲಿ, ಹುಣ್ಣುಗಳು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕಾಣಿಸಿಕೊಂಡು ಬಳಿಕ ತಾನಾಗಿಯೇ ಮಾಯವಾಗಿ ಹೋಗುತ್ತದೆ, ಆದರೆ ನಿಮಗೆ ಪ್ರತಿ ಕೆಲವು ದಿನಗಳಿಗೊಮ್ಮೆ ಹುಣ್ಣುಗಳು ಬಂದು ಅವು ಗುಣವಾದ ನಂತರ ಮತ್ತೆ ಬಂದರೆ, ಆದಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನೂ ಓದಿ: ಒಂದೇ ದಿನದಲ್ಲಿ ಬಾಯಿ ಹುಣ್ಣಿನಿಂದ ಮುಕ್ತಿ, ಈ ಮನೆಮದ್ದು ಟ್ರೈ ಮಾಡಿ

ಹುಣ್ಣುಗಳು ಯಾವಾಗ ಅಪಾಯಕಾರಿಯಾಗಬಹುದು?

ಒಬ್ಬ ವ್ಯಕ್ತಿಗೆ ಪ್ರತಿ ತಿಂಗಳು ಪದೇ ಪದೇ ಬಾಯಿಯಲ್ಲಿ ಹುಣ್ಣುಗಳು ಕಂಡುಬರುತ್ತಿದ್ದರೆ, ಬಾಯಿಯಿಂದ ಸ್ವಲ್ಪ ರಕ್ತಸ್ರಾವ ಅಥವಾ ತೂಕದಲ್ಲಿ ಏರಿಳಿತವಾಗುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬಾರದು. ಈ ರೋಗಲಕ್ಷಣಗಳ ಹೊರತಾಗಿ, ತಿಂಗಳಾದರೂ ಬಾಯಿಯಲ್ಲಿ ಒಂದೇ ಒಂದು ಹುಣ್ಣು ಗುಣವಾಗದಿದ್ದರೆ ಕೂಡ ಅದು ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ, ಬಾಯಿಯ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ, ಇದು ಕರುಳಿನ ಕಾಯಿಲೆ, ಥೈರಾಯ್ಡ್ ಸಮಸ್ಯೆ ಅಥವಾ ಮಧುಮೇಹದಿಂದಲೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ, ಎಚ್‌ಐವಿ ವೈರಸ್ ಸಹ ಅಂತಹ ಲಕ್ಷಣಗಳನ್ನು ಕೂಡ ಉಂಟುಮಾಡಬಹುದು.

ಹೆಚ್ಚಿನ ಅಪಾಯವಿರುವುದು ಯಾರಿಗೆ?

  • ಧೂಮಪಾನ ಮಾಡುವ ಅಥವಾ ತಂಬಾಕು ಬಳಸುವವರಲ್ಲಿ.
  • ಮಧುಮೇಹ ರೋಗಿಗಳಲ್ಲಿ.
  • ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿರುವವರಲ್ಲಿ.
  • ಜೀರ್ಣಕಾರಿ ಸಮಸ್ಯೆಗಳಿರುವವರಲ್ಲಿ.
  • ತುಂಬಾ ಖಾರವಾದ ಆಹಾರವನ್ನು ಸೇವನೆ ಮಾಡುವವರಲ್ಲಿ.

ಬಾಯಿ ಹುಣ್ಣುಗಳನ್ನು ತಡೆಗಟ್ಟುವುದು ಹೇಗೆ?

  • ವಿಟಮಿನ್ ಬಿ 12 ಮಟ್ಟವನ್ನು ಪರೀಕ್ಷಿಸಿಕೊಳ್ಳಿ, ಮತ್ತು ಕಡಿಮೆಯಿದ್ದರೆ, ಅದಕ್ಕೆ ಔಷಧಿ ತೆಗೆದುಕೊಳ್ಳಿ.
  • ತಂಬಾಕು ಸೇವಿಸಬೇಡಿ.
  • ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ.
  • ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ