ರಾಜ್ಯದಲ್ಲಿ ಡೆಂಗ್ಯೂವಿನ ಆರ್ಭಟ ಜೋರಾಗಿದೆ. ಡೆಂಗ್ಯೂ ಹೆಸರೇ ಹೇಳುವಂತೆ ಭಯಾನಕ ಕಾಯಿಲೆಯಾಗಿದ್ದು, ಒಮ್ಮೆ ದೇಹದೊಳಗೆ ಒಕ್ಕರಿಸಿಕೊಂಡು ಬಿಟ್ಟರೆ ದೇಹದ ಶಕ್ತಿಯನ್ನು ಕುಗ್ಗಿಸಿ ಬಿಡುತ್ತವೆ. ಈ ಡೆಂಗ್ಯೂ ಜ್ವರವೂ ಈಡಿಸ್ ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆಯು ಬರುತ್ತದೆ. ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.
ರಾಷ್ಟ್ರೀಯ ಡೆಂಗ್ಯೂ ದಿನವು ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಾಗಿದ್ದು, ಡೆಂಗ್ಯೂ ವಿರೋಧಿ ದಿನ ಅಥವಾ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರತಿ ವರ್ಷ ಮೇ 16 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವೇ ರೋಗ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಡೆಂಗ್ಯೂ ತಡೆಗಟ್ಟುವ ಬಗೆಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಭಾರತದಲ್ಲಿ ಪ್ರತಿ ವರ್ಷ ಡೆಂಗ್ಯೂ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಡೆಂಗ್ಯೂ ವೈರಸ್‌ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದೆ. ಸಾಂಕ್ರಾಮಿಕ ರೋಗವಾಗಿರುವ ಡೆಂಗ್ಯೂ ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆ ಕಚ್ಚಿದ 3-14 ದಿನಗಳ ನಂತರ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗ ಕಕಾಣಿಸಿಕೊಂಡ ತಕ್ಷಣವೇ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ರೋಗದಿಂದ ಗುಣಮುಖರಾಗಬಹುದು.
ಸೋಂಕಿತ ವ್ಯಕ್ತಿಯಲ್ಲಿ ವಿಪರೀತ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಬೇಕು. ಅದಲ್ಲದೇ ಈ ಡೆಂಗ್ಯೂ ಕಾಯಿಲೆ ಬಂದ ವ್ಯಕ್ತಿಯು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯಕ. ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಹಣ್ಣಿನ ಜ್ಯೂಸ್ ಕುಡಿಯುತ್ತಿರಬೇಕು. ಜ್ವರ ಕಡಿಮೆಯಾಗಲು ಪ್ಯಾರಸಿಟಮಾಲ್ ಮಾತ್ರೆಯೇ ಮುಖ್ಯವಾದ ಔಷಧ. ಅದರೊಂದಿಗೆ ಪಪ್ಪಾಯಿ ಹಾಗೂ ಕೀವಿ ಹಣ್ಣುಗಳ ಸೇವನೆಯಿಂದ ರೋಗವನ್ನು ಗುಣಪಡಿಸಿಕೊಳ್ಳಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ