Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ

Nipah Virus: ಕೇರಳದಲ್ಲಿ ಮತ್ತೆ ನಿಫಾ ವೈರಸ್ ಆತಂಕ, ಕೊರೊನಾದಷ್ಟೇ ಅಪಾಯಕಾರಿಯೇ?
ನಿಫಾ ವೈರಸ್
Follow us
TV9 Web
| Updated By: ನಯನಾ ರಾಜೀವ್

Updated on: May 12, 2022 | 1:13 PM

ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಆತಂಕ ಶುರುವಾಗಿದೆ. ಕೊರೊನಾಗಿಂತಲೂ ನಿಫಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ (Death) ಪ್ರಮಾಣವು 40 ರಿಂದ 75% ರಷ್ಟಿದೆ. ಕಳೆದ ವರ್ಷ ಎರ್ನಾಕುಲಂನಲ್ಲಿ ವೈರಸ್ ಪತ್ತೆಯಾಗಿದೆ, ಆದರೆ ಯಾರೂ ಸಾವನ್ನಪ್ಪಲಿಲ್ಲ. ಕೊನೆಯದಾಗಿ ವರದಿಯಾದ ಪ್ರಕರಣವು 2021 ರಲ್ಲಿ, ಕೋಳಿಕ್ಕೋಡ್​ನ 12 ವರ್ಷದ ಬಾಲಕ ಮೃತಪಟ್ಟಿದ್ದ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಸಂತ್ರಸ್ತರ ಮನೆಗಳ ಸುತ್ತಮುತ್ತಲಿನ ಬಾವಲಿಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನಿಫಾ ವಿರುದ್ಧ ಪ್ರತಿಕಾಯಗಳನ್ನು ಪತ್ತೆಹಚ್ಚಿದೆ.

ನಿಫಾ ವೈರಸ್ ಕುರಿತು ಮಾಹಿತಿ ನಿಫಾ ವೈರಸ್ ಬಗ್ಗೆ ಕೇರಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಸಾಂಕ್ರಾಮಿಕವು ಪ್ರಾಣಿಗಳು ಮತ್ತು ಜನರ ನಡುವೆ ಹರಡಬಹುದು, ಅಂದರೆ, ಇದು ಜನೆಟಿಕ್ ಆಗಿದೆ. ಬಾವಲಿಗಳು ವೈರಸ್ ಹರಡುವಿಕೆಯನ್ನು ಹೆಚ್ಚು ಮಾಡುತ್ತದೆ. ಇದು ಎನ್ಐವಿ ಪ್ರಾಣಿಗಳಿಂದ (ಬಾವಲಿ ಅಥವಾ ಹಂದಿಗಳು) ಮಾನವರಿಗೆ ಅಥವಾ ಸೋಂಕಿತ ವ್ಯಕ್ತಿಯಿಂದ ಇನ್ನೊಂದಕ್ಕೆ ಹರಡುತ್ತದೆ. ವೈರಸ್ ಹಂದಿಗಳು ಮತ್ತು ಇತರ ಪ್ರಾಣಿಗಳಲ್ಲಿ ಗಂಭೀರ ರೋಗವನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಹೇಳುವಂತೆ ಪ್ಯಾಟ್ರೋಪಸ್ ಬಾವಲಿಗಳು ವೈರಸ್ ಹರಡುವ ಜೀವಿಗಳು.

ನಿಫಾ ವೈರಸ್ ಹರಡುವುದು ಹೇಗೆ? ಬಾವಲಿಗಳಮೂತ್ರ ಅಥವಾ ಲಾಲಾರಸದಿಂದ ಕಲುಷಿತಗೊಂಡಿರುವ, ಖರ್ಜೂರ, ಪೇರಳೆ, ಮಾವಿನ ಹಣ್ಣು ಮತ್ತು ಲಿಚಿಯಂತಹ ಹಣ್ಣುಗಳನ್ನು ಸೇವಿಸಿದರೆ ಮಾನವರಿಗೆ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ. ಆದುದರಿಂದ ಈ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ನಿಫಾ ವೈರಸ್ ಲಕ್ಷಣಗಳು -ಕೆಮ್ಮು -ಜ್ವರ -ತಲೆನೋವು -ಕೋಮಾ -ಗಂಟಲು ನೋವು -ಉಸಿರಾಟದಲ್ಲಿ ತೊಂದರೆ

ಭಾರತದಲ್ಲಿ ಮೊದಲ ಬಾರಿಗೆ ನಿಫಾ ಪತ್ತೆಯಾಗಿದ್ದು ಯಾವಾಗ? ಭಾರತದಲ್ಲಿ ಮೊದಲ ನಿಫಾ ಹರಡುವಿಕೆಯನ್ನು ಮೇ 19, 2018ರಂದು ಕೋಳಿಕ್ಕೋಡ್ ಜಿಲ್ಲೆಯಲ್ಲಿ ದಾಖಲಾಗಿತ್ತು. ಅಂದಿನಿಂದ, ಜೂನ್ 1, 2018 ರವರೆಗೆ 17 ಸಾವುಗಳು ಮತ್ತು 18 ದೃಢೀಕೃತ ಪ್ರಕರಣಗಳು ದಾಖಲಾಗಿವೆ. ನಂತರ ಇದನ್ನು ನಿಯಂತ್ರಿಸಲಾಯಿತು. ಜೂನ್ 2019ರಲ್ಲಿ, 23ವರ್ಷದ ವಿದ್ಯಾರ್ಥಿಗೆ ಕೊಚ್ಚಿಯಲ್ಲಿ ಸೋಂಕು ಉಂಟಾಗಿತ್ತು.

ಇತ್ತೀಚಿನ ಪ್ರಕರಣವು ಭಾರತದಲ್ಲಿ ಐದನೇ ಬಾರಿಗೆ ಮತ್ತು ಕೇರಳದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ.ಕೆಲವು ಸಂದರ್ಭಗಳಲ್ಲಿ, ತೀವ್ರ ಉಸಿರಾಟದ ಸಿಂಡ್ರೋಮ್ ಅಥವಾ ಎಪಿಪಿಲ್ಲೆ ನ್ಯುಮೋನಿಯಾ ಸಹ ಸಂಭಾವ್ಯ ರೋಗಲಕ್ಷಣಗಳಾಗಿವೆ. ಅಷ್ಟೇ ಅಲ್ಲ, ಎನ್ ಐವಿ ಮೆದುಳಿನ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಮಧ್ಯಮ ಮತ್ತು ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಸಾವು ಸಹ ಸಂಭವಿಸಬಹುದು.

ಸೋಂಕಿಗೆ ಪರಿಹಾರವಿದೆಯೇ? ಈ ಸೋಂಕಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ, ಜನರು ಚೇತರಿಸಿಕೊಳ್ಳಲು ಕಾಳಜಿಯೊಂದೇ ಮಾರ್ಗ. ವಿಶ್ರಾಂತಿ, ಹೈಡ್ರೇಟಿಂಗ್ ಮತ್ತು ರೋಗಲಕ್ಷಣಗಳು ಉದ್ಭವಿಸಿದಾಗ ತಕ್ಷಣದ ಚಿಕಿತ್ಸೆ ಸೇರಿದಂತೆ ಸ್ವಯಂ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ