Plant Power Day 2024: ಪ್ರೋಟೀನ್ ಅಧಿಕವಾಗಿರುವ 11 ಸಸ್ಯ ಆಧಾರಿತ ಆಹಾರಗಳಿವು
ಪ್ರೋಟೀನ್ ಹೆಚ್ಚಾಗಿರುವ ಕೆಲವು ಅತ್ಯುತ್ತಮ ಸಸ್ಯ ಆಧಾರಿತ ಆಹಾರಗಳ ಮಾಹಿತಿ ಇಲ್ಲಿದೆ. ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಸಸ್ಯ ಆಧಾರಿತ ಪ್ರೋಟೀನ್ಗಳಿವು. ಸಸ್ಯ ಆಧಾರಿತ ಆಹಾರಗಳು ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿವೆ. ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಇವುಗಳನ್ನು ಸೇವಿಸುವ ಮೂಲಕ ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪಡೆಯಬಹುದು.

ಸಸ್ಯಾಹಾರ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿರುವ ಆಹಾರಪದ್ಧತಿಯಾಗಿದೆ. ಪ್ರಾಣಿ ಉತ್ಪನ್ನಗಳಿಂದ ಮುಕ್ತವಾದ ಆಹಾರ ಕೂಡ ವ್ಯಕ್ತಿಯ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಬಲ್ಲದು. ಅಕಾಡಮಿ ಆಫ್ ನ್ಯೂಟ್ರಿಷನ್ ಆ್ಯಂಡ್ ಡಯೆಟಿಕ್ ಟ್ರಸ್ಟೆಡ್ ಸೋರ್ಸ್ ಪ್ರಕಾರ, ಸಸ್ಯಾಹಾರಿ ಆಹಾರವು ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಕೆಲವು ರೀತಿಯ ಹೃದ್ರೋಗ ಮತ್ತು ಕ್ಯಾನ್ಸರ್, ಮತ್ತು ತೂಕ ಇಳಿಕೆಯನ್ನು ಉತ್ತೇಜಿಸಬಹುದು.
ಪ್ರಾಣಿ ಆಧಾರಿತ ಆಹಾರಗಳ ಉತ್ಪಾದನೆ ಅದರಲ್ಲೂ ಮಾಂಸ ಮತ್ತು ಡೈರಿ, ಅರಣ್ಯನಾಶ, ನೀರಿನ ಮಾಲಿನ್ಯ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗಳ ಮೂಲಕ ಪರಿಸರ ಅವನತಿಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಸಸ್ಯ ಆಧಾರಿತ ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು ಆಹಾರ ಉತ್ಪಾದನೆಗೆ ಸಂಬಂಧಿಸಿದ ಪರಿಸರದ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಮಸೂರ:
ಕೆಂಪು ಅಥವಾ ಹಸಿರು ಮಸೂರವು ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಬೇಯಿಸಿದ ಮಸೂರವು ಪ್ರತಿ ಕಪ್‌ಗೆ 8.84 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಊಟಕ್ಕೆ ಸೇವಿಸಲು ಮಸೂರವು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
ಇದನ್ನೂ ಓದಿ: Plant Power Day 2024: ಸಸ್ಯ ಶಕ್ತಿ ದಿನದ ಮಹತ್ವವೇನು? ಇದನ್ನು ಏಕೆ ಆಚರಿಸಲಾಗುತ್ತದೆ?
ಶೇಂಗಾ:
ಬೇಯಿಸಿದ ಶೇಂಗಾ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ ಕಪ್‌ಗೆ ಸುಮಾರು 7.25 ಗ್ರಾಂ ಪ್ರೋಟೀನ್ ಇರುತ್ತದೆ. ಶೇಂಗಾವನ್ನು ಬಿಸಿಯಾಗಿ ಅಥವಾ ತಣ್ಣಗೆ ಕೂಡ ತಿನ್ನಬಹುದು.
ಕಡಲೆಕಾಯಿ:
ಕಡಲೆಕಾಯಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇವು ಪ್ರತಿ ಕಪ್‌ಗೆ ಸುಮಾರು 20.5 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ. ಕಡಲೆಕಾಯಿ ಬೆಣ್ಣೆಯು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ.
ಬಾದಾಮಿ:
ಬಾದಾಮಿಯು ಪ್ರತಿ ಕಪ್‌ಗೆ 16.5 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಇ ಅನ್ನು ಸಹ ಒದಗಿಸುತ್ತದೆ. ಇದು ಚರ್ಮ ಮತ್ತು ಕಣ್ಣುಗಳಿಗೆ ಉತ್ತಮವಾಗಿದೆ.
ಸ್ಪಿರುಲಿನಾ:
ಸ್ಪಿರುಲಿನಾ ನೀಲಿ ಅಥವಾ ಹಸಿರು ಪಾಚಿಯಾಗಿದ್ದು, ಪ್ರತಿ 2 ಟೇಬಲ್ ಸ್ಪೂನ್ ಸ್ಪಿರುಲಿನಾದಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಕಬ್ಬಿಣ, ವಿಟಮಿನ್ ಬಿ, ವಿಟಮಿನ್ ಬಿ -12 ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಸ್ಪಿರುಲಿನಾವನ್ನು ನೀರು, ಸ್ಮೂಥಿಗಳು ಅಥವಾ ಹಣ್ಣಿನ ರಸಕ್ಕೆ ಸೇರಿಸಬಹುದು.
ಕ್ವಿನೋವಾ:
ಕ್ವಿನೋವಾ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಧಾನ್ಯವಾಗಿದೆ. ಇದು ಸಂಪೂರ್ಣ ಪ್ರೋಟೀನ್ ಆಗಿದೆ. ಬೇಯಿಸಿದ ಕ್ವಿನೋವಾ ಪ್ರತಿ ಕಪ್‌ಗೆ 8 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಧಾನ್ಯದಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಫೈಬರ್ ಮತ್ತು ಮ್ಯಾಂಗನೀಸ್ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ಕ್ವಿನೋವಾವನ್ನು ಸೂಪ್ ಮತ್ತು ಸಲಾಡ್ ಮೇಲೆ ಕೂಡ ಚಿಮುಕಿಸಬಹುದು.
ಇದನ್ನೂ ಓದಿ: Winter Health: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಈ 6 ನಟ್ಸ್ ಸೇವಿಸಿ
ಮೈಕೋಪ್ರೋಟೀನ್:
ಮೈಕೋಪ್ರೋಟೀನ್ ಶಿಲೀಂಧ್ರ ಆಧಾರಿತ ಪ್ರೋಟೀನ್ ಆಗಿದೆ. ಮೈಕೋಪ್ರೋಟೀನ್ ಉತ್ಪನ್ನಗಳು ಪ್ರತಿ ಕಪ್ ಸೇವೆಗೆ ಸುಮಾರು 13 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತವೆ. ಮೈಕೋಪ್ರೋಟೀನ್ ಹೊಂದಿರುವ ಉತ್ಪನ್ನಗಳನ್ನು ಸಾಮಾನ್ಯವಾಗಿ ಮಾಂಸದ ಬದಲಿಯಾಗಿ ಬಳಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನವು ಮೊಟ್ಟೆಯ ಬಿಳಿಭಾಗವನ್ನು ಹೊಂದಿರುತ್ತವೆ.
ಚಿಯಾ ಬೀಜಗಳು:
ಚಿಯಾ ಸೀಡ್ಸ್ ಕಡಿಮೆ ಕ್ಯಾಲೋರಿಯ ಆಹಾರವಾಗಿದ್ದು, ಫೈಬರ್ ಮತ್ತು ಹೃದಯಕ್ಕೆ ಆರೋಗ್ಯಕರವಾದ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಚಿಯಾ ಬೀಜಗಳು ಪ್ರೋಟೀನ್‌ನ ಸಂಪೂರ್ಣ ಮೂಲವಾಗಿದ್ದು, ಪ್ರತಿ ಚಮಚಕ್ಕೆ 2 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.
ಅನ್ನದೊಂದಿಗೆ ಬೀನ್ಸ್:
ಅಕ್ಕಿ ಮತ್ತು ಬೀನ್ಸ್ ಅಪೂರ್ಣ ಪ್ರೋಟೀನ್ ಮೂಲಗಳಾಗಿವೆ. ಇವುಗಳನ್ನು ಒಟ್ಟಿಗೆ ತಿನ್ನುವುದರಿಂದ ಪ್ರಯೋಜನ ಹೆಚ್ಚಾಗುತ್ತದೆ. ಈ ಆಹಾರವು ಪ್ರತಿ ಕಪ್‌ಗೆ 7 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ.
ಆಲೂಗಡ್ಡೆ:
ಒಂದು ದೊಡ್ಡ ಬೇಯಿಸಿದ ಆಲೂಗಡ್ಡೆ 8 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿಯಂತಹ ಇತರ ಪೋಷಕಾಂಶಗಳು ಅಧಿಕವಾಗಿವೆ.
ಪ್ರೋಟೀನ್ ಭರಿತ ತರಕಾರಿಗಳು:
ಅನೇಕ ಗಾಢ ಬಣ್ಣದ, ಹಸಿರು ಸೊಪ್ಪು ಮತ್ತು ತರಕಾರಿಗಳು ಪ್ರೋಟೀನ್ ಅನ್ನು ಹೊಂದಿರುತ್ತವೆ. ಬ್ರೊಕೋಲಿ ಸುಮಾರು 4 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಕೇಲ್ ಪ್ರತಿ ಕಪ್‌ಗೆ 2 ಗ್ರಾಂ ಪ್ರೋಟೀನ್ ನೀಡುತ್ತದೆ. 5 ಮಧ್ಯಮ ಅಣಬೆಗಳು 3 ಗ್ರಾಂ ಪ್ರೋಟೀನ್ ಅನ್ನು ನೀಡುತ್ತವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
