
ಗರ್ಭಧಾರಣೆಯ ಕೊನೆಯ ಹಂತ ತಾಯಿ ಮತ್ತು ಮಗುವಿಗೆ ಅತ್ಯಂತ ಮುಖ್ಯವಾದ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ದೇಹದಲ್ಲಿ ವೇಗವಾಗಿ ಹಾರ್ಮೋನಲ್ ಬದಲಾವಣೆಗಳು ನಡೆಯುತ್ತವೆ. ಇದರಿಂದ ದಣಿವು, ದುರ್ಬಲತೆ ಮತ್ತು ಭಾವನಾತ್ಮಕ ಏರಿಳಿತಗಳು ಕಾಣಿಸಬಹುದು. ಆದ್ದರಿಂದ ಡಿಲಿವರಿ ಮೊದಲು ಗರ್ಭಿಣಿಯರು (Pregnant Women) ತಮ್ಮ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಅತ್ಯಗತ್ಯ. ತಜ್ಞರ ಪ್ರಕಾರ, ಈ ಸಮಯದಲ್ಲಿ ತಾಯಿಯ ಆರೋಗ್ಯ ಮಗುವಿನ ಬೆಳವಣಿಗೆ ಮತ್ತು ಜನನದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಸರಿಯಾದ ಆರೈಕೆ, ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನಶೈಲಿ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಡಿಲಿವರಿ ಮೊದಲು ಯಾವ ರೀತಿಯ ವಿಷಯಗಳು ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪೌಷ್ಟಿಕ ಆಹಾರ ಸೇವನೆ: ಪ್ರೋಟೀನ್, ಐರನ್ ಮತ್ತು ಕ್ಯಾಲ್ಸಿಯಂಯುಕ್ತ ಆಹಾರವನ್ನು ಸೇವಿಸಬೇಕು
ಸಾಕಷ್ಟು ನೀರು ಕುಡಿಯುವುದು: ದೇಹವನ್ನು ಹೈಡ್ರೇಟ್ ಆಗಿರಿಸಬೇಕು
ನಿಯಮಿತ ವೈದ್ಯಕೀಯ ತಪಾಸಣೆ: ವೈದ್ಯರು ನೀಡಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು
ಲಘು ವ್ಯಾಯಾಮ: ವಾಕಿಂಗ್ ಮಾಡುವುದು ಅಥವಾ ಸಣ್ಣ ವ್ಯಾಯಾಮಗಳನ್ನು ವೈದ್ಯರ ಸಲಹೆಯಂತೆ ಪಾಲಿಸಬೇಕು
ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ: ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಬೇಕು
ಅಗತ್ಯ ಸಾಮಗ್ರಿ ಸಿದ್ಧತೆ: ಡಿಲಿವರಿ ಸಮಯಕ್ಕೆ ಬೇಕಾದ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಬೇಕು
ಇದನ್ನೂ ಓದಿ: ಗರ್ಭಿಣಿಯರು ಎಲ್ಲಾದ್ರೂ ಪ್ರಯಾಣಿಸುವಾಗ ಈ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಲೇಬೇಕು
ಡಿಲಿವರಿ ಮೊದಲು ಮಾನಸಿಕವಾಗಿ ಸಿದ್ಧರಾಗಿರುವುದು ಬಹಳ ಮುಖ್ಯ. ಕುಟುಂಬದ ಬೆಂಬಲ ಮತ್ತು ಪಾಸಿಟಿವ್ ವಾತಾವರಣ ಗರ್ಭಿಣಿಗೆ ಆತ್ಮವಿಶ್ವಾಸ ನೀಡುತ್ತದೆ. ಆಸ್ಪತ್ರೆ ಮತ್ತು ವೈದ್ಯರನ್ನು ಮುಂಚಿತವಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅದೇ ರೀತಿ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಬೇಕು. ಡಿಲಿವರಿ ಲಕ್ಷಣಗಳ ಬಗ್ಗೆ ತಿಳಿದಿರುವುದು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗುವುದಕ್ಕೆ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ, ಸರಿಯಾದ ಮಾಹಿತಿ, ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಡಿಲಿವರಿ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಸುಲಭವಾಗಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ