
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಯುವಜನರಲ್ಲಿ ಕೂಡ ವೇಗವಾಗಿ ಹೆಚ್ಚುತ್ತಿದೆ. ಹಲವರು ಇದಕ್ಕೆ ಒತ್ತಡ, ಮಾಲಿನ್ಯ ಅಥವಾ ಕೆಟ್ಟ ಹೇರ್ ಕೇರ್ ಅಭ್ಯಾಸಗಳೇ ಕಾರಣ ಎಂದು ಭಾವಿಸುತ್ತಾರೆ. ಆದರೆ ದೇಹದಲ್ಲಿ ಪ್ರೋಟೀನ್ ಕೊರತೆಯೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಪ್ರತಿಬಾರಿಯೂ ಕೂದಲು ಉದುರುವಿಕೆಯೂ ಪ್ರೋಟೀನ್ ಕೊರತೆಯಿಂದಲೇ ಆಗುವುದಿಲ್ಲ. ಹಾಗಾದರೆ ಪ್ರೋಟೀನ್ ಮತ್ತು ಕೂದಲಿಗಿರುವ ಸಂಬಂಧವೇನು, ಯಾವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೂದಲು ಮುಖ್ಯವಾಗಿ ಕೆರಾಟಿನ್ (Keratin) ಎಂಬ ಪ್ರೋಟೀನ್‌ನಿಂದ ನಿರ್ಮಿತವಾಗಿದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರೋಟೀನ್ ಸಿಗದಿದ್ದರೆ ದೇಹ ಮೊದಲು ಹೃದಯ, ಮೆದುಳು, ಯಕೃತ್ತು ಮೊದಲಾದ ಪ್ರಮುಖ ಅಂಗಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ನಿಧಾನವಾಗಬಹುದು ಮತ್ತು ಕೂದಲು ಹೆಚ್ಚಾಗಿ ಉದುರಲು ಆರಂಭಿಸಬಹುದು.
Harvard Health Publishing ಪ್ರಕಾರ, ದೀರ್ಘಕಾಲ ಪ್ರೋಟೀನ್ ಕೊರತೆಯಿದ್ದರೆ ಕೂದಲಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಆದರೆ ಪ್ರತಿಯೊಬ್ಬರಲ್ಲೂ ಕೂದಲು ಉದುರುವುದಕ್ಕೆ ಇದೇ ಕಾರಣವಾಗುವುದಿಲ್ಲ.
ಆದ್ದರಿಂದ ಕೂದಲು ನಿರಂತರವಾಗಿ ಉದುರುತ್ತಿದ್ದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಬಹುದು.
ಇದನ್ನೂ ಓದಿ: ಕೂದಲು ಬೇಗ ಬಿಳಿಯಾಗುವುದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು!
ಪ್ರೋಟೀನ್ ಸಮೃದ್ಧ ಆಹಾರವನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುವುದು ಮುಖ್ಯ.
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವೈದ್ಯರು ಅಗತ್ಯವಿದ್ದರೆ ರಕ್ತ ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷೆಗಳನ್ನು ಮಾಡಿ ನಿಖರ ಕಾರಣವನ್ನು ಪತ್ತೆಹಚ್ಚುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Thu, 6 August 26