AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ12 ಕೊರತೆಗೂ, ಉಗುರುಗಳು ಪದೇ ಪದೇ ಮುರಿಯುವುದಕ್ಕೂ ಸಂಬಂಧವಿದೆಯೇ? ಇಲ್ಲಿದೆ ನೋಡಿ ತಜ್ಞರು ನೀಡಿದ ಕಾರಣ

ಕೈಗಳ ಅಂದವನ್ನು ಹೆಚ್ಚಿಸಲು ಉಗುರುಗಳು ಸಹಾಯ ಮಾಡುತ್ತದೆ. ಆದರೆ ಅದೇ ಉಗುರು ಪದೇ ಪದೇ ಮುರಿದು ಹೋಗುತ್ತಿದ್ದರೆ ಅದಕ್ಕೆ ಜೀವಸತ್ವಗಳ ಕೊರತೆಯೇ ಕಾರಣವಾಗಿರುತ್ತದೆ. ನಿಮ್ಮ ಉಗುರುಗಳು ಕೂಡ ಪದೇ ಪದೇ ಮುರಿದು ಹೋಗುತ್ತಿದ್ದರೆ ಅಥವಾ ದುರ್ಬಲವಾಗಿದ್ದರೆ ಅದಕ್ಕೆ ವಿಟಮಿನ್ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾಗಿರುವುದೇ ಕಾರಣವಾಗಿರಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತದೆ, ದೇಹದಲ್ಲಿ ಈ ವಿಟಮಿನ್ ಕೊರತೆಯಾಗದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಿ12 ಕೊರತೆಗೂ, ಉಗುರುಗಳು ಪದೇ ಪದೇ ಮುರಿಯುವುದಕ್ಕೂ ಸಂಬಂಧವಿದೆಯೇ? ಇಲ್ಲಿದೆ ನೋಡಿ ತಜ್ಞರು ನೀಡಿದ ಕಾರಣ
ಬಿ12 ಕೊರತೆ
ಪ್ರೀತಿ ಭಟ್​, ಗುಣವಂತೆ
|

Updated on: Oct 20, 2025 | 5:42 PM

Share

ಕೆಲವರಿಗೆ ಉಗುರು ಬಿಡುವುದು ಎಂದರೆ ಬಲು ಪ್ರೀತಿ. ಅದಕ್ಕೆ ನಾನಾ ರೀತಿಯಲ್ಲಿ ಸಿಂಗಾರ ಮಾಡಿ ಬಣ್ಣ ಬಣ್ಣದ ನೈಲ್ ಪೊಲಿಶ್ (Nail polish) ಹಚ್ಚಿಕೊಳ್ಳುತ್ತಾರೆ. ಇದು ಹುಡುಗಿಯರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ಹುಡುಗರು ಕೂಡ ಉಗುರನ್ನು ಬೆಳೆಸುತ್ತಾರೆ. ಇದು ಕೈಗಳ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ ಎಂಬುದು ಹಲವರ ನಂಬಿಕೆ ಆದರೆ ಕೆಲವರಿಗೆ ಸ್ವಲ್ಪ ಉಗುರು ಬರುವುದರೊಳಗೆ ಅದು ತನ್ನಿಂದ ತಾನಾಗಿಯೇ ಮುರಿದು ಹೋಗುತ್ತದೆ. ಈ ರೀತಿ ನಿಮ್ಮ ಉಗುರುಗಳು ಕೂಡ ದುರ್ಬಲವಾಗಿದ್ದರೆ ಅಥವಾ ಆಗಾಗ ಮುರಿದು ಹೋಗುತ್ತಿದ್ದರೆ ಅದಕ್ಕೆ ಕಾರಣ ಜೀವಸತ್ವಗಳ ಕೊರತೆ. ಹೌದು, ಇದು ದೇಹದ ಮೇಲೆ ಪರಿಣಾಮ ಬೀರತ್ತದೆ ಹಾಗಾಗಿ ಉಗುರು ದುರ್ಬಲವಾಗುವುದು ಕೂಡ ದೇಹದ ಆಂತರಿಕ ಆರೋಗ್ಯದ ಸೂಚನೆಯಾಗಿದೆ. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಬಿ12 (Vitamin B12) ಕೊರತೆಯಾಗದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ವಿಟಮಿನ್ ಕೊರತೆಯಿಂದ ಈ ಸಮಸ್ಯೆ ಬರುತ್ತೆ?

ಉಗುರುಗಳು ದುರ್ಬಲವಾಗುವುದು ಮುಖ್ಯವಾಗಿ ವಿಟಮಿನ್ ಬಿ 12 ಕೊರತೆಯಿಂದ ಉಂಟಾಗುತ್ತದೆ. ಈ ಅಗತ್ಯ ವಿಟಮಿನ್, ಉಗುರುಗಳ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದೆ ರೀತಿ ನಿಮ್ಮ ಉಗುರುಗಳು ಕೂಡ ಆಗಾಗ ಮುರಿಯುತ್ತಿದ್ದರೆ, ನೀವು ಕೂಡ ವಿಟಮಿನ್ ಬಿ 12 ಮಟ್ಟವನ್ನು ಪರೀಕ್ಷಿಸುವುದು ಬಹಳ ಒಳಿತು.

ಉಗುರಿನಲ್ಲಿ ಕಂಡುಬರುವ ಬಿ12 ಕೊರತೆಯ ಲಕ್ಷಣಗಳು: ವಿಟಮಿನ್ ಬಿ12 ಕೊರತೆಯು ಉಗುರುಗಳ ಮೇಲೆ ಮಾತ್ರವಲ್ಲದೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಉಗುರುಗಳು ಹಳದಿ ಬಣ್ಣಕ್ಕೆ ತಿರುಗಬಹುದು, ಮಾತ್ರವಲ್ಲ ಸುಲಭವಾಗಿ ಮುರಿದು ಹೋಗುವುದು ಬಿ12 ಕೊರತೆಯ ಸಾಮಾನ್ಯ ಲಕ್ಷಣವಾಗಿದೆ.

ಇದನ್ನೂ ಓದಿ
Image
ವಿಟಮಿನ್ ಡಿ ಕೊರತೆ ಆದ್ರೆ ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡು ಬರುತ್ತೆ
Image
ದೇಹಕ್ಕೆ ವಿಟಮಿನ್ ಬಿ12 ಯಾಕೆ ಬೇಕು? ಇದರ ಕೊರತೆಯಾದಾಗ ಏನಾಗುತ್ತೆ?
Image
ದಿನವಿಡೀ ನಿದ್ರೆ ಮಾಡುತ್ತಿದ್ದೀರಾ ಈ ಸಮಸ್ಯೆಗೆ ಇಲ್ಲಿದೆ ಕಾರಣ
Image
ಈ ತರಕಾರಿಗಳನ್ನು ಸೇವನೆ ಮಾಡಿದರೆ ದೇಹದಲ್ಲಿ ವಿಟಮಿನ್ ಬಿ 12 ಹೆಚ್ಚಾಗುತ್ತೆ

ಬಿ12 ಕೊರತೆಯಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳು: ನಿರಂತರ ಆಯಾಸ ಮತ್ತು ದೌರ್ಬಲ್ಯ, ದೇಹದಲ್ಲಿ ಆಲಸ್ಯ, ಉಸಿರಾಟದ ತೊಂದರೆ, ಅಥವಾ ಆಗಾಗ ತಲೆತಿರುಗುವಿಕೆ ಬಿ12 ಕೊರತೆಯ ಮುಖ್ಯ ಲಕ್ಷಣವಾಗಿದೆ.

ಇದನ್ನೂ ಓದಿ: ವಿಟಮಿನ್ ಬಿ12 ಪ್ರಯೋಜನಗಳೇನು? ಭಾರತದ 70% ಜನರಲ್ಲಿ ಇದರ ಕೊರತೆಯಾಗುವುದಕ್ಕೆ ಕಾರಣವೇನು?

ಬಿ12 ಕೊರತೆಯಾಗದಂತೆ ತಡೆಯುವುದು ಹೇಗೆ?

ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಇದ್ದರೆ, ನೀವು ಸೇವನೆ ಮಾಡುವ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಅದನ್ನು ನೀಗಿಸಬಹುದಾಗಿದೆ. ಅವು ಯಾವುದೆಂದರೆ ಕೋಳಿ, ಮೀನು ಮತ್ತು ಮೊಟ್ಟೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು, ಅಲ್ಲದೆ, ಹಾಲನ್ನು ಕೂಡ ಯಥೇಚ್ಛವಾಗಿ ಸೇವನೆ ಮಾಡಬೇಕು. ಏಕೆಂದರೆ ಇದರಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಬಿ 12 ಇರುತ್ತದೆ. ಸಾಧ್ಯವಾದಲ್ಲಿ ಹೆಸರು ಬೇಳೆಯನ್ನು ಕೂಡ ಸೇವನೆ ಮಾಡಬಹುದು. ಇದೆಲ್ಲದರ ಜೊತೆಗೆ, ವೈದ್ಯರನ್ನು ಸಂಪರ್ಕ ಮಾಡಿ ಆ ಬಳಿಕ ವಿಟಮಿನ್ ಬಿ 12 ಪೂರಕಗಳನ್ನು (ಮಾತ್ರೆಗಳು) ಸಹ ತೆಗೆದುಕೊಳ್ಳಬಹುದು. ಯಾವುದೇ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಅಥವಾ ಪೂರಕಗಳನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ