Rainy Season Tips : ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೇಗಿರಬೇಕು?, ವೈದ್ಯರ ಸಲಹೆ ಇಲ್ಲಿದೆ

| Updated By: ನಯನಾ ರಾಜೀವ್

Updated on: Jul 08, 2022 | 11:38 AM

ಮಳೆಗಾಲ ಶುರುವಾಗಿದೆ, ಜತೆಗೆ ಹಲವು ರೋಗಗಳ ಭಯ ಕೂಡ ಇದೆ, ಹೀಗಿರುವಾಗ ರೋಗಗಳು ಬಾರದಂತೆ ಎಚ್ಚರಿಕೆವಹಿಸುವುದು ಹೇಗೆ? ಎಂತಹ ಆಹಾರವನ್ನು ಸೇವಿಸಬೇಕು ಎಂಬುದರ ಕುರಿತು ಶಿರಸಿಯ ಡಾ. ರವಿಕಿರಣ ಪಟವರ್ಧನ ಅವರು ನೀಡಿರುವ ಮಾಹಿತಿ ಇಲ್ಲಿದೆ

Rainy Season Tips : ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೇಗಿರಬೇಕು?, ವೈದ್ಯರ ಸಲಹೆ ಇಲ್ಲಿದೆ
Dr Ravikiran
Follow us on

ಮಳೆಗಾಲ ಶುರುವಾಗಿದೆ, ಜತೆಗೆ ಹಲವು ರೋಗಗಳ ಭಯ ಕೂಡ ಇದೆ, ಹೀಗಿರುವಾಗ ರೋಗಗಳು ಬಾರದಂತೆ ಎಚ್ಚರಿಕೆವಹಿಸುವುದು ಹೇಗೆ? ಎಂತಹ ಆಹಾರವನ್ನು ಸೇವಿಸಬೇಕು ಎಂಬುದರ ಕುರಿತು ಶಿರಸಿಯ ಡಾ. ರವಿಕಿರಣ ಪಟವರ್ಧನ ಅವರು ನೀಡಿರುವ ಮಾಹಿತಿ ಇಲ್ಲಿದೆ. ಮೋಡಕವಿದ ವಾತಾವರಣದ ಕಾರಣ ಸಹಜವಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ. ಕಾರಣ ಮುಖ್ಯವಾಗಿ ಅವಶ್ಯ ಇರುವಷ್ಟೇ ಆಹಾರ ಸ್ವೀಕರಿಸಿ. ಅವಶ್ಯಕತೆಗಿಂತ ಹೆಚ್ಚಿನ ಆಹಾರ ಸ್ವೀಕರಿಸುವುದೇ ಅನಾರೋಗ್ಯಕ್ಕೆ ಕಾರಣವಾಗಬಹುದು. ಜೀರ್ಣಕ್ಕೆ ಕಠಿಣ ಇರುವ, ಜಿಡ್ಡಿನ ಅಂಶ ಪ್ರಧಾನವಾಗಿರುವ ಆಹಾರವನ್ನು ಬೆಳಗಿನ ವೇಳೆಯಲ್ಲಿ ಸೇವಿಸಿದರೆ ಉತ್ತಮ.

ಎಂತಹ ಆಹಾರ ಆರೋಗ್ಯಕ್ಕೆ ಉತ್ತಮ
ಹಳೆಯ ಗೋಧಿ ,ಅಕ್ಕಿ ಸಂಗ್ರಹಿಸಿ ,ಧಾನ್ಯ 1 ಭಾಗ
18 ಭಾಗ ನೀರಿನಲ್ಲಿ ಬೇಯಿಸಿ ಅಕ್ಕಿಯ ಗಂಜಿಅನ್ನಿ, ಗೋಧಿಯ ದಲಿಯಾ ಸೂಪ್ ನಿಂತೆ ಮಾಡಿ ಬಿಸಿಬಿಸಿಯಾಗಿ ಸ್ವೀಕರಿಸಬಹುದು. ಬೇಕಾದರೆ ಶುದ್ಧ ಜೇನುತುಪ್ಪ ಸೇರಿಸಿ ಸ್ವೀಕರಿಸಬಹುದು.ನಿತ್ಯದ ಆಹಾರದಲ್ಲಿ ಜೀರ್ಣಕ್ಕೆ ಕಠಿಣವಾದ ಆಹಾರದ ಆಯೋಜನೆಯನ್ನು ಬೆಳಿಗ್ಗೆ , ಮಧ್ಯಾಹ್ನಕ್ಕೆ ಸೀಮಿತ ಗೊಳಿಸಿ.ಹಲಸಿನ ಹಣ್ಣು, ಮಾವಿನಹಣ್ಣು ಮಧ್ಯಾಹ್ನಕ್ಕೆ, ಮೃಷ್ಟಾನ್ನ ಭೋಜನದ ವಿಶೇಷ ಆಯೋಜನೆ ಈ ಕಾಲದಲ್ಲಿ ರಾತ್ರಿಗಿಂತ ಆರೋಗ್ಯ ದೃಷ್ಟಿಯಿಂದ ಮಧ್ಯಾಹ್ನ ಸೂಕ್ತ.

ಶಾಲೆಗೆ ಹೋಗುವ ಮಕ್ಕಳು ಹೇಗೆಲ್ಲಾ ಜಾಗ್ರತೆವಹಿಸಬೇಕು?
ಶಾಲೆಗೆ , ಪೂರ್ವ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಗೆ ನೆಲ್ಲಿಕಾಯಿ ಪುಡಿಯನ್ನು 1/4 ಚಮಚದಷ್ಟು ಬೆಳಿಗ್ಗೆ ರಾತ್ರಿ ಕೂಡುವುದು ರಿಂದ ಈ ಕಾಲದಲ್ಲಿ ಆಗುವ ನೆಗಡಿ, ಕೆಮ್ಮು ಕಫ ತಪ್ಪಿಸಬಹುದು.ನೆಲ್ಲಿಕಾಯಿ ರುಚಿಗೆ ರುಚಿಆಯ್ತು, ಔಷಧಿಗೆ ಔಷಧಿಯಾಯ್ತು. ದೊಡ್ಡವರು ಈ ಕಾಲದಲ್ಲಿ ಅರಿಶಿಣ ಬಿಸಿನೀರಿಗೆ ಹಾಕಿ ಕುಡಿಯಬಹುದು,ಹಾಲಿನ ಜೊತೆಗಿನ ಪರಿಣಾಮಕ್ಕಿಂತ ಬಿಸಿನೀರಿನ ಜೊತೆ ಹೆಚ್ಚು ಪರಿಣಾಮಕಾರಿ.

ನೀರನ್ನು ಕುದಿಸಿ ಆರಿಸಿ ಕುಡಿಯಬೇಕು
ಮಳೆನೀರು, ಭಾವಿಯ ನೀರು ಸಂಗ್ರಹಿಸಿ, ಕುದಿಸಿ ಮತ್ತು ತಣ್ಣಗಾಗಿಸಿ ಕುಡಿಯಬಹುದು. ರೂಡಿರಹಿತ ಹೊಸ ಆಹಾರದ ಪ್ರಯೋಗಗಳು ಈ ಕಾಲದಲ್ಲಿ ಬೇಡ.ಅನವಶ್ಯಕ ಗಾಳಿ ಮಳೆಯಲ್ಲಿ ತಿರುಗಾಟ ತಪ್ಪಿಸಿ. ಹೊರಗೆ ಗಾಳಿಹೋಗುವಾಗ, ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಹವಾನಿಯಂತ್ರಿತ ಕಾರಿನಲ್ಲಿ ಸಂಚರಿಸುವಾಗ ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸುಲಭದ ಉಪಾಯಗಳಲ್ಲಿ ಒಂದು.

ತಣ್ಣನೆಯ ಪದಾರ್ಥಗಳಿಂದ ದೂರವಿರಿ
ಈ ಸಮಯದಲ್ಲಿ ತಣ್ಣನೆಯ ರಸ ಕುಡಿಯುವುದು,ಐಸ್ಕ್ರೀಮ್ ತಿನ್ನುವುದು, ಹಗಲಿನಲ್ಲಿ ಮಲಗುವುದು, ನದಿ ನೀರನ್ನು ಕುಡಿಯುವುದು, ಮಳೆಯಲ್ಲಿ ಒದ್ದೇಯಾಗುವದು,ಒದ್ದೇಯಾದ ತಲೆಯನ್ನು ಒಣಗಿಸದೇ ಇರುವುದು ಕೂಡಲೇ ರೋಗಕ್ಕೆ ಕಾರಣವಿರಬಹುದು.

ಪಾದಗಳ ಬಗ್ಗೆ ವಿಶೇಷ ಗಮನವಿಡಿ
ಪಾದಗಳ ಬಗ್ಗೆ ವಿಶೇಷ ಗಮನವಿರಲಿ. ಮಳೆ ಹೆಚ್ಚಿಗೆ ಇರುವ ಸ್ಥಳದವರು ಹೊರಗೆ ಅಡ್ಡಾಡಿ ಬಂದ ನಂತರ ಪಾದಗಳನ್ನು ಸ್ವಚ್ಛವಾಗಿ ತೊಳೆದು ಒಣ ಮಾಡಿ ಇಡುವುದು ಅವಶ್ಯ. ಪಾದಗಳಿಗೆ ಮಳೆಗಾಲದಲ್ಲಿ ತೊಂದರೆ ಆಗುವವರು ಸೂಕ್ತ ಪಾದರಕ್ಷೆ ಬಳಸುವ ಕಡೆಗೆ ಗಮನವಿರಲಿ. (ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು)

Published On - 11:10 am, Fri, 8 July 22