ಪಪ್ಪಾಯಿ ಚಟ್ನಿ ಮಾಡುವುದು ಹೇಗೆ? ಇದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು?
ಬಂಗಾಳಿ ಜನರ ಜನಪ್ರಿಯ ರೆಸಿಪಿಯಾದ ಪಪ್ಪಾಯಿ ಚಟ್ನಿ ರುಚಿಗೂ, ಆರೋಗ್ಯಕ್ಕೂ ಒಳ್ಳೆಯದು. ಪಪ್ಪಾಯಿ ಚಟ್ನಿ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಹಾಗಾದರೆ ಇದನ್ನು ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ.
ಕಚ್ಚಾ ಪಪ್ಪಾಯಿ ಅಥವಾ ಕಾಯಿ ಇರುವ ಪಪ್ಪಾಯಿ ಚಟ್ನಿ ಮಾಡುವ ವಿಧಾನದ ಬಗ್ಗೆ ನಿಮಗೆ ತಿಳಿದಿದೆಯಾ? ಸಾಮಾನ್ಯವಾಗಿ ಇದು ರುಚಿಯೂ ಹೌದು. ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು. ಈ ಚಟ್ನಿ ಮೂಲತಃ ಬಂಗಾಳಿ ಜನರ ಜನಪ್ರಿಯ ರೆಸಿಪಿಯಾಗಿದೆ. ಇದನ್ನು ಕಚ್ಚಾ ಪಪ್ಪಾಯಿ, ಸಕ್ಕರೆ, ಉಪ್ಪು ಮತ್ತು ಕೆಲವು ವಿಶೇಷ ಮಸಾಲೆಗಳಿಂದ ತಯಾರಿಸಲಾಗುತ್ತದೆ. ಈ ವಿಶೇಷ ಚಟ್ನಿಯನ್ನು ದೊಡ್ಡ ಕಾರ್ಯಕ್ರಮ ಮತ್ತು ಹಬ್ಬಗಳಲ್ಲಿ ತಯಾರಿಸಲಾಗುತ್ತದೆ. ಹಾಗಾದರೆ ಇದನ್ನು ಮಾಡುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು:
1/2 ಕಪ್ ಹೆಚ್ಚಿಕೊಂಡ ಕಾಯಿ ಪಪ್ಪಾಯಿ,
1/2 ಕಪ್ ಸಕ್ಕರೆ,
ರುಚಿಗೆ ತಕ್ಕಷ್ಟು ಉಪ್ಪು,
1/2 ಚಮಚ ನಿಂಬೆ ರಸ,
1/2 ಕಪ್ ನೀರು,
1/2 ಚಮಚ ತುಪ್ಪ,
ಏಲಕ್ಕಿ 1ರಿಂದ 2
1/2 ಕಾಲಾ ಜೀರಾ ಬೀಜ,
ಕೇಸರಿ ಎಳೆ
ಬೇಕಾದಷ್ಟು ಗೋಡಂಬಿ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಹಾರಕ್ರಮದಲ್ಲಿ ಪಪ್ಪಾಯಿ ಬೀಜಗಳನ್ನು ಅಳವಡಿಸಿ
ಪಪ್ಪಾಯಿ ಚಟ್ನಿ ತಯಾರಿಸುವುದು ಹೇಗೆ?
1. ಮೊದಲು ಹಸಿ ಪಪ್ಪಾಯಿಯನ್ನು ತೆಗೆದುಕೊಂಡು ಅದರಲ್ಲಿರುವ ಬೀಜಗಳನ್ನು ತೊಳೆದು, ತೆಳುವಾಗಿ ಸಿಪ್ಪೆ ತೆಗೆಯಿರಿ.
2. ಇದನ್ನು ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಸುಮಾರು 10- 15 ನಿಮಿಷಗಳ ಕಾಲ ನೆನೆಸಿಡಿ. ಈ ಪ್ರಕ್ರಿಯೆಯನ್ನು 2- 3 ಬಾರಿ ಪುನರಾವರ್ತಿಸಿ, ನಂತರ ನೀರಿನಿಂದ ಹೊರತೆಗೆಯಿರಿ.
3. ಬಳಿಕ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ. ನೆನೆಸಿಟ್ಟು ತೆಗೆದ ಪಪ್ಪಾಯಿ ತುಂಡುಗಳನ್ನು ಹಾಕಿ. ಬಳಿಕ ಅದನ್ನು ಎರಡು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ನಂತರ ನೀರು ಸೇರಿಸಿ ಕುದಿಯಲು ಬಿಡಿ. ಬಳಿಕ ಅದಕ್ಕೆ ಸಕ್ಕರೆ ಮತ್ತು ಕೇಸರಿ ಎಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
4. ಈ ಹಂತದಲ್ಲಿ ನೀವು ಸ್ವಲ್ಪ ನಿಂಬೆ ರಸ ಸೇರಿಸಬಹುದು. ನಂತರ, ಏಲಕ್ಕಿ ಮತ್ತು ಕಲೋಂಜಿ ಬೀಜಗಳು ( ಕಾಲಾ ಜೀರಾ ಬೀಜ) ಮತ್ತು ಬೇಕಾದಷ್ಟು ಉಪ್ಪನ್ನು ಸೇರಿಸಿ.
5.ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಚೆನ್ನಾಗಿ ಬೇಯಿಸಿಕೊಳ್ಳಿ. ಹುರಿದ ಗೋಡಂಬಿ ಬೀಜಗಳನ್ನು ಮೇಲಿನಿಂದ ಉದುರಿಸಿದರೆ ಪ್ಲಾಸ್ಟಿಕ್ ಚಟ್ನಿ ಸವಿಯಲು ಸಿದ್ಧ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ