Retinopathy of Prematurity : ಈ ರೋಗ ಲಕ್ಷಣವನ್ನು ಪತ್ತೆಹಚ್ಚದಿದ್ದರೆ ದೇಶದಲ್ಲಿ 5000 ಶಿಶುಗಳು ಕುರುಡಾಗುವ ಸಾಧ್ಯತೆ
ಅವಧಿಗೂ ಮುನ್ನ ಜನಿಸಿದ ಮಕ್ಕಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಹುತೇಕ ಅವಧಿಗೂ ಮೊದಲು ಜನಿಸಿದ ಶಿಶುಗಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆಯಾಗಿರುವುದಿಲ್ಲ. ಆದರೆ ಈ ಮಕ್ಕಳಲ್ಲಿ ರೆಟಿನೋಪತಿ ಎನ್ನುವ ಕಣ್ಣಿನ ಸಮಸ್ಯೆ ಕಂಡು ಬರುವ ಸಾಧ್ಯತೆಯೇ ಅಧಿಕವಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸರಿಸುಮಾರು 275 ಶಿಶುಗಳಿಗೆ ಪ್ರಿಮೆಚೂರಿಟಿ ರೆಟಿನೋಪತಿ ರೋಗನಿರ್ಣಯ ಮಾಡಲಾಗಿದೆ. ಇದರ ಪ್ರಕಾರವಾಗಿ ಅವಧಿ ಪೂರ್ವವಾಗಿ ಜನಿಸಿದ ಶಿಶುಗಳಲ್ಲಿ ಕುರುಡುತನದ ಸಮಸ್ಯೆಯು ಎದುರಾಗುವ ಸಾಧ್ಯತೆಯೂ ಅಧಿಕವಾಗಿದೆ. ಗರ್ಭಾವಸ್ಥೆಯ 34 ರಿಂದ 36 ವಾರಗಳ ಒಳಗೆ ಜನಿಸಿದ ಶಿಶುಗಳು ರೆಟಿನೋಪತಿ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಎಂದು ಕಣ್ಣಿನ ಆಸ್ಪತ್ರೆಯ ವೈದ್ಯರು ಡಾ ಅಗರ್ವಾಲ್ ತಿಳಿಸಿದ್ದಾರೆ.
ಸಂಶೋಧಕರ ಪ್ರಕಾರ, ಜಾಗತಿಕವಾಗಿ 32000 ದೃಷ್ಟಿಹೀನತೆ ಮತ್ತು ಕುರುಡುತನದ ಪ್ರಕರಣಗಳು ಪತ್ತೆಯಾಗಿದೆ. ಅವಧಿ ಪೂರ್ವ ಜನಿಸಿರುವುದೇ ಈ ಆರೋಗ್ಯ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈಗಾಗಲೇ ಶೇಕಡಾ 10 ರಷ್ಟು ಇಂತಹ ಪ್ರಕರಣಗಳು ಭಾರತದಲ್ಲಿ ವರದಿಯಾಗಿದ್ದು, ವಾರ್ಷಿಕವಾಗಿ 5000 ಅವಧಿಗೂ ಮೊದಲು ಜನಿಸಿದ ಮಕ್ಕಳು ರೆಟಿನೋಪತಿ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಊಟ ಮಾಡಿದ ತಕ್ಷಣ ಮಲಗುವುದು ಎಷ್ಟು ಅಪಾಯಕಾರಿ ಎಂದು ತಿಳಿದಿದೆಯೇ?
ಈಗಾಗಲೇ ದೇಶದಲ್ಲಿ 2900 ದೃಷ್ಟಿ ದೋಷದ ಪ್ರಕರಣಗಳು ವರದಿಯಾಗಿವೆ. ತಡವಾದ ರೋಗನಿರ್ಣಯ ಹಾಗೂ ಅಪಾಯದ ಮಟ್ಟವನ್ನು ಪರಿಶೀಲಿಸದೇ ಇರುವುದು ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಸೂಕ್ತ ಚಿಕಿತ್ಸಾ ವಿಧಾನ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ.
ಪ್ರಿಮೆಚೂರಿಟಿ ರೆಟಿನೋಪತಿ ಎಂದರೇನು?
ಅವಧಿ ಪೂರ್ವವಾಗಿ ಹುಟ್ಟಿದ ಮಕ್ಕಳಲ್ಲಿ, ರೆಟಿನಾದಲ್ಲಿನ ರಕ್ತನಾಳಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಇದು ರಕ್ತಸ್ರಾವ ಮತ್ತು ಗಾಯದ ಅಂಗಾಂಶವನ್ನು ಉಂಟುಮಾಡುತ್ತದೆ. ಅದಲ್ಲದೇ ದೃಷ್ಟಿಹೀನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ಈ ಸ್ಥಿತಿಯನ್ನು ಪ್ರಿಮೆಚೂರಿಟಿ ರೆಟಿನೋಪತಿ ಎಂದು ಕರೆಯಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




