Red Rock Candy: ಕಲ್ಲು ಸಕ್ಕರೆ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ

ಕಲ್ಲು ಸಕ್ಕರೆ ಎಲ್ಲರಿಗೂ ಗೊತ್ತು. ಕಲ್ಲು ಸಕ್ಕರೆ ಅಂದರೆ ಬರೀ ಸಿಹಿಯಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಶೀತ, ಕಂದ ಶರ್ಕರ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಖಡಿ ಶಕ್ಕರ್ ಎಂದೂ ಆಂಗ್ಲ ಭಾಷೆಯಲ್ಲಿ Rock sugar, Red Rock Candy ಎಂದು ಕರೆಯುವುದುಂಟು. ಈ ಕಲ್ಲು ಸಕ್ಕರೆಯನ್ನು ಕಬ್ಬಿನ ಹಾಲನ್ನು ಘನೀಕೃತಗೊಳಿಸಿ ಯಾವುದೇ ರಾಸಾಯನಿಕ ವಸ್ತು ಸೇರಿಸದೆ ಹರಳುಗಳ ರೂಪದಲ್ಲಿ ತಯಾರಿಸಲಾಗುತ್ತದೆ! ಇನ್ನು, ಕೆಂಪು ಕಲ್ಲು ಸಕ್ಕರೆ ತಾಳೆ ಮರದ […]

Red Rock Candy: ಕಲ್ಲು ಸಕ್ಕರೆ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ
ಕಲ್ಲು ಸಕ್ಕರೆಯ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು! ಆದರೂ ಇರಲಿ ಎಚ್ಚರಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 15, 2022 | 6:06 AM

ಕಲ್ಲು ಸಕ್ಕರೆ ಎಲ್ಲರಿಗೂ ಗೊತ್ತು. ಕಲ್ಲು ಸಕ್ಕರೆ ಅಂದರೆ ಬರೀ ಸಿಹಿಯಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಶೀತ, ಕಂದ ಶರ್ಕರ ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಖಡಿ ಶಕ್ಕರ್ ಎಂದೂ ಆಂಗ್ಲ ಭಾಷೆಯಲ್ಲಿ Rock sugar, Red Rock Candy ಎಂದು ಕರೆಯುವುದುಂಟು. ಈ ಕಲ್ಲು ಸಕ್ಕರೆಯನ್ನು ಕಬ್ಬಿನ ಹಾಲನ್ನು ಘನೀಕೃತಗೊಳಿಸಿ ಯಾವುದೇ ರಾಸಾಯನಿಕ ವಸ್ತು ಸೇರಿಸದೆ ಹರಳುಗಳ ರೂಪದಲ್ಲಿ ತಯಾರಿಸಲಾಗುತ್ತದೆ! ಇನ್ನು, ಕೆಂಪು ಕಲ್ಲು ಸಕ್ಕರೆ ತಾಳೆ ಮರದ ಹಾಲಿನಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಜಾಸ್ತಿ , ಸಿಗುವುದು ಅಪರೂಪ. ಕಲ್ಲುಸಕ್ಕರೆ ತಂಪು ಗುಣ ಹೊಂದಿದ್ದು ಶರೀರಕ್ಕೆ ಪುಷ್ಟಿದಾಯಕವಾಗಿದೆ. ಕಲ್ಲು ಸಕ್ಕರೆ, ಒಣ ಕೊಬ್ಬರಿ, ಒಣ ಖರ್ಜೂರ, ಬದಾಮಿ, ಗೋಡಂಬಿ ಚೂರು ಮಾಡಿ ಒಣ ದ್ರಾಕ್ಷಿ ಸೇರಿಸಿ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಕಲ್ಲು ಸಕ್ಕರೆಯ ಹತ್ತಾರು ಪ್ರಯೋಜನಗಳು ಹೀಗಿವೆ:

  1. ಅಕ್ರೋಟ (Walnut) ಹಾಗೂ ಕಲ್ಲು ಸಕ್ಕರೆಯನ್ನು ಒಟ್ಟಾಗಿ ಸೇವಿಸಿದರೆ ಮೆದುಳಿಗೆ ಶಕ್ತಿದಾಯಕ. * ಸೋಂಪು ಕಾಳು ಮತ್ತು ಕಲ್ಲು ಸಕ್ಕರೆಯ ಸೇವನೆಯು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ. * ಕಾಳುಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆಯ ಸೇವನೆಯು ಕೆಮ್ಮು ನಿವಾರಿಸುತ್ತದೆ. ಗಂಟಲಿಗೂ ಹಿತಕರ.
  2. ಮೂಗಿನಿಂದ ರಕ್ತ ಸೋರುತ್ತಿದ್ದರೆ ಕಲ್ಲು ಸಕ್ಕರೆ ಪುಡಿಯನ್ನು ಮೂಗಿನ ಹತ್ತಿರ ಹಿಡಿದು ವಾಸನೆಯನ್ನು ಆಘ್ರಾಣಿಸಬೇಕು. * ಬಾಯಿ ಹುಣ್ಣಿಗೆ ಕಲ್ಲು ಸಕ್ಕರೆ ಮತ್ತು ಜೀರಿಗೆ ರಾಮಬಾಣ. ಏಲಕ್ಕಿ ಪುಡಿಯನ್ನೂ ಸೇರಿಸಿಕೊಂಡು ತಿನ್ನಬಹುದು. * ಧ್ವನಿ ಒಡೆದಾಗ ಒಣ ಶುಂಠಿ, ಕಲ್ಲು ಸಕ್ಕರೆ ಪುಡಿ ಮಾಡಿ ಸೇವನೆ ಮಾಡಬಹುದು.
  3. ಬಿಳಿ ಈರುಳ್ಳಿ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ. * ಗಂಟಲು ನೋವಿಗೆ ಗಸಗಸೆ ಮತ್ತು ಕಲ್ಲು ಸಕ್ಕರೆ ಸೇವನೆ ಒಳ್ಳೆಯದು. * ಮೂಲವ್ಯಾಧಿಗೆ ನಾಗಕೇಸರ ಕಲ್ಲು ಸಕ್ಕರೆ ಸೇವನೆ ಮಾಡಬಹುದು.
  4. ಭೇದಿಗೆ ಧನಿಯ ಪೌಡರ್ ಬೆರೆಸಿ ಸೇವಿಸಬೇಕು. * ಹೊಟ್ಟೆ ನೋವಿಗೆ 10ರಿಂದ15 ಬೇವಿನ ಎಲೆಗಳ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಉತ್ತಮ. * ಕಲ್ಲು ಸಕ್ಕರೆ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಇದರಿಂದ ದೇಹಕ್ಕೆ ಬಲ ಬರುತ್ತದೆ. ಮೆದುಳಿಗೂ ಒಳ್ಳೆಯದು.
  5. ನಿಂಬು ಶರಬತ್ತು ತಯಾರಿಸುವಾಗ ಕಲ್ಲು ಸಕ್ಕರೆ ಬಳಸುವುದರಿಂದ ವಿಶೇಷ ರುಚಿ ನೀಡುತ್ತದೆ. ಹಾಗೂ ಗುಲಾಬ್ ಜಾಮೂನು ತಯಾರಿಸುವಾಗ ಸಕ್ಕರೆ ಬದಲು ಕಲ್ಲು ಸಕ್ಕರೆಯ ಪಾಕ ಉತ್ತಮ.
  6. 15 ಗ್ರಾಂ ಕಲ್ಲು ಸಕ್ಕರೆ 60 ಕ್ಯಾಲೊರಿ ಹೊಂದಿದೆ ಎಂದು ಹೇಳಲಾಗುತ್ತದೆ. ಆದ್ಯವಾಗಿ ಗಮನಿಸಿ ಮಧುಮೇಹಿಗಳಿಗೆ ಇದು ಸೂಕ್ತವಲ್ಲ. ದೇಹಕ್ಕೆ ತಂಪು ನೀಡುವುದಲ್ಲದೆ ಬಲವನ್ನೂ ನೀಡುವ ಈ ಕಲ್ಲು ಸಕ್ಕರೆ ಯನ್ನು ಹಿತಮಿತವಾಗಿ ಬಳಸುವುದು ಒಳ್ಳೆಯದು ಅಲ್ಲವಾ!? (ಸಂಗ್ರಹ: ಎಸ್​ಹೆಚ್​ ನದಾಫ್​)

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೋ ||

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ ||

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ | ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ ಉತ್ತಮ ಸರಕಿದು ಅತಿ ಲಾಭ ಬರುವಂಥ ||

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ | ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ ||

ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ ಸಂತೆಯೊಳಗೆ ಇಟ್ಟು ಮಾರುವುದಲ್ಲ | ಸಂತತ ಭಕ್ತರ ನಾಲಗೆ ಸವಿಗೊಂಬ ಕಾಂತ ಪುರಂದರವಿಠಲ ನಾಮವೆಂಬ || Kallu sakkare kolliro nivellaru kallu sakkare kolliro

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್