Health and Hygiene Guide: ಮನೆಯ ಒಳಗೆ ಚಪ್ಪಲಿ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಯಾವುದು ಸರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 14, 2025 | 11:38 AM

ಕೆಲವರು ಮನೆಯ ಹೊರಗೆ ಬೇರೆ, ಮನೆಯೊಳಗೆ ಬೇರೆ ಎಂದು ಎಲ್ಲಾ ಕಡೆ ಚಪ್ಪಲಿಗಳನ್ನು ಹಾಕಿಕೊಂಡು ಸುತ್ತಾಡುತ್ತಾರೆ. ಅವರಿಗೆ ಮನೆಯಲ್ಲಿಯೂ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಇರುವುದಿಲ್ಲ. ಈ ರೀತಿ ದಿನವಿಡೀ ಚಪ್ಪಲಿ ಮತ್ತು ಬೂಟುಗಳನ್ನು ಧರಿಸುವುದು ಸರಿಯೇ? ಇದರಿಂದ ಏನಾದರೂ ಪ್ರಯೋಜನವಿದೆಯೇ? ಯಾವ ರೀತಿ ಸಮಸ್ಯೆಗಳಾಗಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Health and Hygiene Guide: ಮನೆಯ ಒಳಗೆ ಚಪ್ಪಲಿ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಯಾವುದು ಸರಿ
ಸಾಂದರ್ಭಿಕ ಚಿತ್ರ
Follow us on

ಚಪ್ಪಲಿಗಳಿಲ್ಲದೆ (Slippers) ಒಂದು ದಿನ ಕಳೆಯುವುದಕ್ಕೂ ಆಗುವುದಿಲ್ಲ. ಹೊರಗಡೆ ಕಾಲಿಡುವಾಗ ಚಪ್ಪಲಿಗಳ ಬಳಕೆ ಮಾಡುವುದು ಸರಿ. ಆದರೆ ಮನೆಯ ಹೊರಗೆ ಧರಿಸುವ ಚಪ್ಪಲಿಗಳನ್ನು ಮನೆಯೊಳಗೂ ಹಾಕಿಕೊಂಡು ತಿರುಗಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇವು ಧೂಳು ಮತ್ತು ಕೊಳೆಯನ್ನು ಮಾತ್ರವಲ್ಲದೆ ಅನೇಕ ರೋಗಕಾರಕ ಜೀವಿಗಳನ್ನು ಸಹ ಒಳಗೆ ತರಬಹುದು ಎಂಬುದನ್ನು ಮರೆಯಬಾರದು. ಅದರಲ್ಲಿಯೂ ಕೆಲವರು ಮನೆಯ ಹೊರಗೆ ಬೇರೆ, ಮನೆಯೊಳಗೆ ಬೇರೆ ಎಂದು ಎಲ್ಲಾ ಕಡೆ ಚಪ್ಪಲಿಗಳನ್ನು ಹಾಕಿಕೊಂಡು ಸುತ್ತಾಡುತ್ತಾರೆ. ಅವರಿಗೆ ಮನೆಯಲ್ಲಿಯೂ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಇರುವುದಿಲ್ಲ. ಈ ರೀತಿ ದಿನವಿಡೀ ಚಪ್ಪಲಿ ಮತ್ತು ಬೂಟುಗಳನ್ನು ಧರಿಸುವುದು ಸರಿಯೇ? ಇದರಿಂದ ಏನಾದರೂ ಪ್ರಯೋಜನವಿದೆಯೇ? ಯಾವ ರೀತಿ ಸಮಸ್ಯೆಗಳಾಗಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊರಗಡೆ ಹಾಕಿಕೊಳ್ಳುವ ಬೂಟು ಮತ್ತು ಚಪ್ಪಲಿಗಳನ್ನು ಒಳಗಡೆ ತರುವ ಅಭ್ಯಾಸವಿದ್ದರೆ ಅದನ್ನು ಮೊದಲು ತಪ್ಪಿಸಬೇಕು ಆ ಮೂಲಕ ಅನೇಕ ರೀತಿಯ ಸೋಂಕುಗಳು ಮನೆಯೊಳಗೆ ಬರುವುದನ್ನು ತಪ್ಪಿಸಬಹುದು. ಏಕೆಂದರೆ ಮನೆಯೊಳಗಿನ ಮೂರನೇ ಒಂದು ಭಾಗದಷ್ಟು ಕೊಳಕು ಹೊರಗಿನಿಂದ ಬರುತ್ತದೆ. ಅದರಲ್ಲಿ ಹೆಚ್ಚಿನವು ನಮ್ಮ ಚಪ್ಪಲಿಗಳ ಮೂಲಕವೇ ಬರುತ್ತವೆ. ಈ ರೀತಿಯ ಅಭ್ಯಾಸ ಮನೆಯಲ್ಲಿರುವ ಚಿಕ್ಕ ಮಕ್ಕಳು ಮತ್ತು ವಯಸ್ಕರನ್ನು ಅನಾರೋಗ್ಯಕ್ಕೆ ದೂಡುತ್ತದೆ. ಹಾಗಾಗಿಯೇ ಮನೆಯ ಹೊರಗೆ ನಿಮ್ಮ ಚಪ್ಪಲಿಗಳನ್ನು ಇಟ್ಟುಕೊಳ್ಳಲು ವ್ಯವಸ್ಥೆ ಮಾಡಿ. ಚಪ್ಪಲಿ ಸ್ಟಾಂಡ್ ಯಾವಾಗಲೂ ಮನೆಯಿಂದ ಹೊರಗಿರಲಿ.

ಮನೆಯ ಒಳಗಡೆ ಚಪ್ಪಲಿ ಧರಿಸುವುದು ಸರಿಯೇ?

ಒಳಾಂಗಣ ಭಾಗದಲ್ಲಿ, ಅದರಲ್ಲಿಯೂ ಮನೆಯ ಒಳಗೆ ಮಾತ್ರ ಹಾಕಿಕೊಳ್ಳಲು ಬೇರೆ ಚಪ್ಪಲಿಗಳು ಇರುತ್ತದೆ. ಆದರೆ ಮನೆಯ ಒಳಗಡೆ ಚಪ್ಪಲಿ ಧರಿಸುವುದು ಸರಿಯೇ ಎಂದು ಯೋಚಿಸಿದ್ದೀರಾ? ಸಾಮಾನ್ಯವಾಗಿ ಮನೆಯಲ್ಲಿ ಚಪ್ಪಲಿಗಳನ್ನು ಧರಿಸುವುದರಿಂದ ಕಾಲಿನ ಸ್ನಾಯುಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ಬರಿಗಾಲಿನಲ್ಲಿ ನಡೆಯುವುದು ಒಳ್ಳೆಯದು ಇದರಿಂದ ಕಾಲುಗಳಲ್ಲಿನ ಆಂತರಿಕ ಸ್ನಾಯುಗಳ ಬಲವನ್ನು ಹೆಚ್ಚಿಸಬಹುದು. ಮನೆಯೊಳಗೆ ಬರಿಗಾಲಿನಲ್ಲಿಯೇ ಓಡಾಡುವುದರಿಂದ ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಬರಿಗಾಲಿನಲ್ಲಿ ನಡೆಯುವುದು ನಿಮ್ಮ ರಕ್ತದ ಹರಿವನ್ನು ಹೆಚ್ಚಿಸಲು, ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಉರಿಯೂತ, ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ
ಸಿಹಿತಿಂಡಿ ತಿಂದ ಮೇಲೆ ನೀರು ಕುಡಿಯುತ್ತೀರಾ? ಇದನ್ನು ತಪ್ಪದೆ ಓದಿ
ಪ್ರಯಾಣ ಮಾಡುವಾಗ ಕಾರಿನಲ್ಲಿ ಇಟ್ಟಿರುವ ನೀರನ್ನು ಕುಡಿಯುವಾಗ ಎಚ್ಚರ!
ಜನ ತಂಬಾಕು ಬಿಡಲು ಕಷ್ಟವಾಗುತ್ತೆ ಎನ್ನಲು ಕಾರಣವೇನು?
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಸುದ್ದಿ

ಇದನ್ನೂ ಓದಿ: ಈ ಕೈ ಹೆಚ್ಚಾಗಿ ಬಳಸುವವರಿಗೆ ರೋಗಗಳ ಅಪಾಯ ಹೆಚ್ಚು; ಸಂಶೋಧನೆಯಿಂದ ಬಹಿರಂಗ

ಬರಿಗಾಲಿನಲ್ಲಿ ನಡೆಯುವಾಗ ಈ ವಿಷಯಗಳು ನೆನಪಿನಲ್ಲಿರಲಿ

*ನಿಮ್ಮ ಕಾಲುಗಳಲ್ಲಿ ನೋವು ಕಂಡು ಬಂದರೆ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.

*ಮನೆಯ ನೆಲವು ಗಟ್ಟಿಯಾಗಿದ್ದರೆ, ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.

*ನಿಮಗೆ ಯಾವುದೇ ರೋಗ ಅಥವಾ ಸೋಂಕು ಇದ್ದರೆ ಬರಿಗಾಲಿನಲ್ಲಿ ನಡೆಯಬೇಡಿ.

ಸಾಧ್ಯವಾದಷ್ಟು ಎರಡು ದಿನಗಳಿಗೊಮ್ಮೆಯಾದರೂ ಫಿನಾಯಿಲ್ ಬಳಸಿ ನೆಲವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಇದರಿಂದ ಕೀಟಾಣು ಮುಕ್ತವಾಗುವುದಲ್ಲದೆ ಆರೋಗ್ಯ ಚೆನ್ನಾಗಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ