Explainer: ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಏಕೆ ಗೋಚರಿಸುತ್ತಿವೆ?

ಕೊವಿಡ್​ ವೈರಸ್​ನ ಮೊದಲ ಅಲೆಯಲ್ಲಿ ವಯಸ್ಸಾದವರು ಮತ್ತು ಇತರ ಕಾಯಿಲೆಗಳಿಂದ ನರಳುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೊಳಗಾದರೆ ತಜ್ಞರು ಹೇಳುವ ಪ್ರಕಾರ ಎರಡನೇ ಅಲೆ ಹೆಚ್ಚು ಸೋಂಕುಭರಿತ, ಹೆಚ್ಚು ಅಪಾಯಕಾರಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುವಂತಾಗಿದೆ.

Explainer: ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಏಕೆ ಗೋಚರಿಸುತ್ತಿವೆ?
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 01, 2021 | 7:23 PM

ಭಾರತ, ಕೊರೊನಾ ಸೋಂಕಿನಿಂದ ನಿಸ್ಸಂದೇಹವಾಗಿ ವಿಶ್ವದಲ್ಲೇ ಅತಿಹೆಚ್ಚು ಸಂಕಷ್ಟಕ್ಕೆ ಸಿಕ್ಕಿರುವ ರಾಷ್ಟ್ರವಾಗಿದೆ. ಸೋಂಕಿನ ಪ್ರಕರಣಗಳು ಎಲ್ಲೇ ಮೀರಿ ಹಬ್ಬುತ್ತಿವೆ ಮತ್ತು ಸೋಂಕಿತರು ದೇಹದಲ್ಲಿ ಬಲಹೀನತೆಯನ್ನು ಅನುಭವಿಸುತ್ತಿರುವುದರ ಜೊತೆಗೆ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ದೊರೆಯದಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವುದೇ ಸದ್ಯಕ್ಕೆ ನಮ್ಮ ಎದುರಿರುವ ಸರಳ ಮತ್ತು ಸುರಕ್ಷಿತ ಮಾರ್ಗವಾಗಿ ಗೋಚರಿಸುತ್ತಿದೆ. ಕೆಲವರು ಲಸಿಕೆ ನೀಡುವ ಸುರಕ್ಷತೆ ಬಗ್ಗೆ ಅನುಮಾನಗಳನ್ನು ತಳೆದಿದ್ದರೂ ಅದನ್ನು ಬಿಟ್ಟರೆ ಬೇರೆ ಉಪಾಯವಿಲ್ಲ ಎನ್ನುವುದನ್ನು ಮನಗಾಣಬೇಕಿದೆ. ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್​ನಿಂದ ತೀವ್ರ ಸ್ವರೂಪದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವಿದರಿಂದ ಲಸಿಕೆ ಹಾಕಿಸಿಕೊಳ್ಳುವುದು ಮತ್ತಷ್ಟು ಪ್ರಾಮುಖ್ಯತೆ ಪಡೆಯುತ್ತದೆ.

ಕೊವಿಡ್​ ವೈರಸ್​ನ ಮೊದಲ ಅಲೆಯಲ್ಲಿ ವಯಸ್ಸಾದವರು ಮತ್ತು ಇತರ ಕಾಯಿಲೆಗಳಿಂದ ನರಳುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೊಳಗಾದರೆ ತಜ್ಞರು ಹೇಳುವ ಪ್ರಕಾರ ಎರಡನೇ ಅಲೆ ಹೆಚ್ಚು ಸೋಂಕುಭರಿತ, ಹೆಚ್ಚು ಅಪಾಯಕಾರಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುವಂತಾಗಿದೆ. ಹಾಗಾಗಿ, ಲಸಿಕೆ ಪಡೆಯಲು ಅರ್ಹರಿರುವರೆಲ್ಲರೂ ಆದಷ್ಟು ಬೇಗ ಅದನ್ನು ಹಾಕಿಸಿಕೊಳ್ಳುವುದು ಅತಿ ಮುಖ್ಯವಾಗಿದೆ.

ಒಂದು ವಿಷಯವನ್ನು ನಾವಿಲ್ಲಿ ಗಮನಿಸಬೇಕಿದೆ. ಎಲ್ಲ ಲಸಿಕೆಗಳಂತೆ ಕೊರೊನಾ ಲಸಿಕೆಗೂ ಕೆಲ ಅಡ್ಡ ಪರಿಣಾಮಗಳಿವೆ. ಲಸಿಕೆ ಹಾಕಿಸಿಕೊಂಡವರಲ್ಲಿ ಬೇರೆ ಬೇರೆ ರೀತಿಯ ಸೈಟ್​ ಎಫೆಕ್ಟ್​ಗಳು ಗೋಚರಿಸುತ್ತವೆ. ಕೆಲವರಲ್ಲಂತೂ ಸೋಂಕು ತಗುಲಿದ ನಂತರ ಕಾಣಿಸುವ ರೋಗಲಕ್ಷಣಗಳಂಥ ಅಡ್ಡ ಪರಿಣಾಮಗಳು ಕಾಣುತ್ತಿವೆ. ಅಂಥವರು ಲಸಿಕೆ ತೆಗೆದುಕೊಂಡ ನಂತರವೇ ಸೋಂಕು ತಾಕಿತು ಅಂತ ಯೋಚಿಸಲಾರಂಭಿಸುತ್ತಾರೆ. ಆದರೆ ವೈದ್ಯರ ಪ್ರಕಾರ ಅದು ಸತ್ಯವಲ್ಲ.

ಲಸಿಕೆಯ ಶಾಟ್​ ತೆಗೆದುಕೊಂಡ ನಂತರ ಅದು ದೇಹ ಸೋಂಕಿಗೊಳಗಾಗಿಯೇನೋ ಎಂಬಂಥ ಯೋಚನೆಯನ್ನು ಹುಟ್ಟಿಸುತ್ತದೆ. ಹಾಗಾಗೇ, ದೇಹದಲ್ಲಿ ಅಡ್ಡ ಪರಿಣಾಮಗಳು ಗೋಚರಿಸಲಾರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಸೋಂಕಿನ ಲಕ್ಷಣಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕವಾಗಿದೆ.

ಲಸಿಕೆ ತೆಗೆದುಕೊಂಡ ನಂತರ ಜ್ವರದಿಂದ ಕೂಡಿದ ಮೈನಡುಕ ಮತ್ತು ಛಳಿ ಅತಿ ಸಾಮಾನ್ಯವಾಗಿ ಕಂಡುಬರುವ ಅಡ್ಡ ಪರಿಣಾಮವಾಗಿದೆ. ಇವು ಕೊವಿಡ್​-19 ಸೋಂಕಿನ ಲಕ್ಷಣಗಳೂ ಆಗಿವೆ ಎನ್ನುವುದನ್ನು ನೆನೆಪಿಡಬೇಕು. ಆದರೆ, ವ್ಯಾಕ್ಸಿನ್ ತೆಗೆದುಕೊಂಡ ನಂತರ ವಿಪರೀತವೆನಿಸಿವಷ್ಟು ಜ್ವರ ಕಾಣಿಸಿಕೊಂಡರೆ ಲಸಿಕೆಗೆ ದೇಹ ಪ್ರತಿಕ್ರಿಯೆ ತೋರುತ್ತದೆ ಎನ್ನುದಷ್ಟೇ ಅರ್ಥ. ಕೆಲವರಲ್ಲಿ ಒಂದೆರಡು ದಿನಗಳ ಮಟ್ಟಿಗೆ ವಿಪರೀತ ಸುಸ್ತು ಆಯಾಸ ಕಾಣಿಸಿಕೊಂಡ ನಿದರ್ಶನಗಳಿವೆ. ಹಾಗಾಗಿ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಜಾಸ್ತಿ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇವಿಸುವುದು ಅವಶ್ಯಕವಾಗಿದೆ.

ನಮ್ಮ ದೇಹದಲ್ಲಿರುವ ಪ್ರತಿಕಾಯಗಳನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಲಸಿಕೆಯು ದೇಹವನ್ನು ಪ್ರವೇಶಿಸಿದ ನಂತರ ಸೋಂಕಿನ ಥರ ವರ್ತಿಸುತ್ತದೆ. ಆಗ ದೇಹದಲ್ಲಿ ಹಲವು ನೋವುಗಳು ಉಂಟಾಗುತ್ತವೆ. ತಲೆನೋವು ಅತಿ ಸಾಮಾನ್ಯವಾದ ಅಡ್ಡ ಪರಿಣಾಮವಾಗಿದ್ದು, ಅದು ಕೊವಿಡ್-19 ಸೋಂಕಿನ ರೀತಿ ಭಾಸವಾಗುತ್ತದೆ. ಜ್ವರ, ಮೈಚಳಿ, ಸುಸ್ತು, ಬಳಲಿಕೆ ದೇಹದಲ್ಲಿ ಉಂಟಾದಾಗ ವಾಂತಿಯಾಗುವಂಥ ಭಾವನೆ ಮೂಡಿದರೂ ಸ್ವಲ್ಪ ಸಮಯದಲ್ಲೇ ಅದು ಮಾಯವಾಗುತ್ತದೆ.

ಮೇಲಿನ ಅಡ್ಡಪರಿಣಾಮಗಳಲ್ಲದೆ, ಸೋಂಕು ಹಾಕಿಸಿಕೊಂಡ ಕೆಲವರಲ್ಲಿ ಮೈಕೈನೋವು, ಸಂದಿ ನೋವು ಕಾಣಿಸಿಕೊಂಡಿದ್ದು ವರದಿಯಾಗಿದೆ. ಇವೆಲ್ಲ ಸಾಮಾನ್ಯವಾಗಿರುವ ಅಡ್ಡಪರಿಣಾಮಗಳು. ನೀವು ಲಸಿಕೆ ಈಗಷ್ಟೇ ಲಸಿಕೆ ಹಾಕಿಸಿಕೊಂಡಿದ್ದರೆ, ಅತಂಕಪಡುವ ಅಗತ್ಯವೇ ಇಲ್ಲ.

ಲಸಿಕೆ ತೆಗೆದುಕೊಂಡ ನಂತರ ಸಾಕಷ್ಟು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಹೇಳುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ದ್ರವರೂಪದ ಪದಾರ್ಥಗಳನ್ನು ಸೇವಿಸಬೇಕು ಮತ್ತು ಕಠಿಣವಾದ ಕೆಲಸಗಳಿಂದಾಗಲೀ ಅಥವಾ ಚಿಂತೆಗಳಿಂದಾಗಲೀ ನಿಮ್ಮ ದೇಹದ ಮೇಲೆ ಹೆಚ್ಚುವರಿ ಒತ್ತಡ ಹಾಕಬೇಡಿ. ಉತ್ತಮ ಆಹಾರ ನಿಮ್ಮ ದೇಹಕ್ಕೆ ಮೊದಲಿನ ಶಕ್ತಿಯನ್ನು ಒದಗಿಸುತ್ತದೆ. ನೋವನ್ನು ನಿವಾರಿಸಲು ವೈದ್ಯರ ಸಲಹೆ ನೀಡುವ ನೋವು ನಿವಾರಕ ಮಾತ್ರಗಳನ್ನು ತೆಗೆದುಕೊಳ್ಳಬಹುದು. ಯಾವುದೇ ಒಂದು ಅಡ್ಡ ಪರಿಣಾಮ ಬಹಳ ಸಮಯದವರೆಗೆ ಕಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಇದನ್ನೂ ಓದಿ: ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ; ಏಪ್ರಿಲ್ 12 ರಂದೇ ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್ 

ಇದನ್ನೂ ಓದಿ: ಕೇಂದ್ರ ಸರ್ಕಾರ ನೀಡಿರುವ ಲಸಿಕೆಯನ್ನು 45 ವರ್ಷ ಕಡಿಮೆ ವಯಸ್ಸಿನವರಿಗೆ ಕೊಡುವಂತಿಲ್ಲ: ರಾಜ್ಯಗಳಿಗೆ ಪತ್ರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್