
ಮಗು (Toddler) ಹುಟ್ಟಿದ ನಂತರ ಒಂದೊಂದೇ ರೀತಿಯಲ್ಲಿ ದೈಹಿಕ ಬದಲಾವಣೆಗಳಾಗುವುದು ಬಹಳ ಸಹಜವಾದ ಪ್ರಕ್ರಿಯೆ. ಅದರಲ್ಲೂ ಮಗುವಿಗೆ ಐದು ತಿಂಗಳುಗಳ ನಂತರ ಕೆಲವರಲ್ಲಿ ಆರು ತಿಂಗಳ ಬಳಿಕ ಹಲ್ಲು (Tooth) ಮೂಡುವುದಕ್ಕೆ ಆರಂಭವಾಗುತ್ತದೆ. ಇದು ಮಕ್ಕಳಲ್ಲಿ ಮೂಡುವ ಮೊದಲ ಹಲ್ಲುಗಳು. ಅಂದರೆ ಇವುಗಳನ್ನು ನಾವು ಹಾಲು ಹಲ್ಲುಗಳು (baby teeth) ಎಂದು ಕರೆಯುತ್ತೇವೆ. ಈ ಸಮಯದಲ್ಲಿ ಪೋಷಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಏಕೆಂದರೆ ಇಂತಹ ಸಂದರ್ಭಗಳಲ್ಲಿ ಮಕ್ಕಳ ಒಸಡುಗಳಲ್ಲಿ ನೋವು (Pain in the gums), ಕಿರಿಕಿರಿ ಕಂಡು ಬರುವುದರಿಂದ ಮಕ್ಕಳು ಹಠ ಮಾಡುವುದಕ್ಕೆ ಪ್ರಾಂಭಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಹಲ್ಲು ಬರುವಾಗ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ? ಆಗ ನೀವು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ. ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.
ಹಲ್ಲು ಬರಬೇಕಾದರೆ ಮಗು ಏನೆಲ್ಲಾ ಮಾಡುತ್ತದೆ ಎಂಬುದರ ಬಗ್ಗೆ RK Gallary ಎಂಬ ಇನ್ಸ್ಟಾ ಖಾತೆಯಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದ್ದು ಅಲ್ಲಿ ತಿಳಿಸಿರುವ ಕೆಲವು ಮಾಹಿತಿ ಇಲ್ಲಿದೆ.
ಆದರೆ ಈ ಲಕ್ಷಣಗಳು ಪ್ರತಿ ಮಕ್ಕಳಿಗೂ ಭಿನ್ನವಾಗಿರಬಹುದು. ಒಬ್ಬರಿಗೆ ಕಂಡು ಬಂದ ಲಕ್ಷಣಗಳು ಮತ್ತೊಂದು ಮಗುವಿನಲ್ಲಿಯೂ ಕಂಡು ಬರುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗೆ ಯಾವ ರೀತಿ ಲಕ್ಷಣ ಕಂಡು ಬರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಿ.
ಇದನ್ನೂ ಓದಿ: Natural sleep remedies: ರಾತ್ರಿ ಬಾಳೆಹಣ್ಣು ತಿಂದರೆ ನಿದ್ದೆ ಚೆನ್ನಾಗಿ ಬರುತ್ತದೆ ಎಂಬುದು ನಿಜವೇ?
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ