AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Silent Heart Attacks: ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗದಂತೆ ಎಚ್ಚರಿಕೆ ವಹಿಸುವುದು ಹೇಗೆ? ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದೇನು?

ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವರಲ್ಲಿ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಹೃದಯಾಘಾತವಾಗುತ್ತಿದೆ. ಇದು ಒಂದು ರೀತಿಯ ಗಂಭೀರ ಸಮಸ್ಯೆಯಾಗಿದ್ದು ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಮುಖ್ಯವಾಗಿದೆ. ಏಕೆಂದರೆ ಹೃದಯಾಘಾತಕ್ಕಿಂತಲೂ ಸೈಲೆಂಟ್ ಹಾರ್ಟ್ ಅಟ್ಯಾಕ್ ಹೆಚ್ಚು ಹಾನಿ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Silent Heart Attacks: ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗದಂತೆ ಎಚ್ಚರಿಕೆ ವಹಿಸುವುದು ಹೇಗೆ? ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದೇನು?
Dr. Devi Prasad Shetty
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Jun 23, 2024 | 11:52 AM

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವರಲ್ಲಿ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಹೃದಯಾಘಾತವಾಗುತ್ತಿದೆ. ಇದು ಒಂದು ರೀತಿಯ ಗಂಭೀರ ಸಮಸ್ಯೆಯಾಗಿದ್ದು ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಮುಖ್ಯವಾಗಿದೆ. ಏಕೆಂದರೆ ಹೃದಯಾಘಾತಕ್ಕಿಂತಲೂ ಸೈಲೆಂಟ್ ಹಾರ್ಟ್ ಅಟ್ಯಾಕ್ ಹೆಚ್ಚು ಹಾನಿ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ಬಗ್ಗೆ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಎಎನ್ಐ ಗೆ ನೀಡಿದ ಸಂದರ್ಶನದಲ್ಲಿ, ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಆರೋಗ್ಯವಾಗಿರುವಂತೆ ಕಾಣುವಂತವರು ಹೃದಯಾಘಾತಕ್ಕೆ ಬಲಿಯಾಗಬಹುದು. ನಾವು ಆರೋಗ್ಯವಾಗಿದ್ದೇವೆ ಎಂದು ನಂಬಿರುತ್ತೇವೆ ಆದರೆ 50% ಗಿಂತಲೂ ಹೆಚ್ಚು ರೋಗಿಗಳಲ್ಲಿ ಹೃದ್ರೋಗಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ ಎಂದಿದ್ದಾರೆ.

ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು?

ಯಾವುದೇ ಕಾಯಿಲೆ ಇರಲಿ ಅಥವಾ ಇಲ್ಲದಿರಲಿ ವರ್ಷಕ್ಕೆ ಒಂದು ಬಾರಿಯಾದರೂ ದೇಹವನ್ನು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿ ನೋವು ಬರುವ ವರೆಗೂ ಜನ ಆಸ್ಪತ್ರೆಗೆ ಹೋಗುವುದಿಲ್ಲ ಇದರಿಂದ ಕೊನೆ ಹಂತದ ಚಿಕಿತ್ಸೆ ಫಲ ಕೊಡಬಹುದು ಅಥವಾ ಕೊಡದಿರಬಹುದು ಹಾಗಾಗಿ ಮೊದಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅದರಲ್ಲಿಯೂ ನಮ್ಮಲ್ಲಿ 70% ಗಿಂತಲೂ ಹೆಚ್ಚಿನವರಿಗೆ ತಮ್ಮ ರಕ್ತದೊತ್ತಡ ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ನಮ್ಮ ಕರುಳಿನ ಆರೋಗ್ಯ ಹೇಗಿದೆ ಎಂಬುದರ ಅರಿವಿರುವುದಿಲ್ಲ. ಹಾಗಾಗಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ಹಚ್ಚೆ ರಕ್ತದ ಕ್ಯಾನ್ಸರ್​​ಗೆ ಕಾರಣವಾಗುತ್ತದೆಯೇ? ಅಧ್ಯಯನ ಹೇಳುವುದೇನು?

ವರದಿಗಳು ಹೇಳುವ ಪ್ರಕಾರ 2022ರಲ್ಲಿ ಭಾರತದಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಅಥವಾ ಹಠಾತ್ ಹೃದಯಾಘಾತಗಳು 12.5% ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ಆದಂತಹ ಬದಲಾವಣೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳದಿರುವುದು, ಧೂಮಪಾನ, ಅಧಿಕ ತೂಕ ಅಥವಾ ಸ್ಥೂಲಕಾಯತೆ, ವ್ಯಾಯಾಮದ ಕೊರತೆ, ಅಧಿಕ ರಕ್ತದೊತ್ತಡ, ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಮಧುಮೇಹ, ಚಯಾಪಚಯ ಅಸ್ವಸ್ಥತೆಗಳು ಎಲ್ಲವೂ ಇದಕ್ಕೆ ಕಾರಣವಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:46 am, Sun, 23 June 24

ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು