Tobacco: ತಂಬಾಕು ಸೇವನೆಯಿಂದ ಕೋವಿಡ್ ಇನ್ನಷ್ಟು ಜಟಿಲ? ಅಧ್ಯಯನ ಹೇಳಿದ್ದೇನು?
ತಂಬಾಕು ಸೇವನೆ ಮಾಡುವವರಲ್ಲಿ ಕೊರೊನಾ ಹರಡುವ ಪ್ರಮಾಣ ಜಾಸ್ತಿ ಎನ್ನುತ್ತಿದ್ದ ಅಧ್ಯಯನ ಈಗ ಅದರ ಸೇವನೆಯು ಕೋವಿಡ್ ಇನ್ನಷ್ಟು ಜಟಿಲಗೊಳ್ಳುವಂತೆ ಮಾಡುತ್ತದೆ. ಬಳಿಕ ನೀವು ಬಿಟ್ಟರು ಕೊರೊನಾ ನಿಮ್ಮನ್ನು ಬಿಡುವುದಿಲ್ಲ ಎಂಬ ಹಾಗಾಗುತ್ತದೆ.
ತಂಬಾಕು (Tobacco) ಸೇವನೆ ಕ್ಯಾನ್ಸರ್ ಕಾರಣವಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಅದಲ್ಲದೆ ಕೊರೊನಾ ಪ್ರಾರಂಭವಾದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಈಗ ಇದಕ್ಕೆ ಪೂರಕವೆಂಬ ಹಾಗೇ ತಂಬಾಕು ಬಳಕೆಯು ಕೋವಿಡ್ -19 ಸೋಂಕಿನ ತೀವ್ರತೆ ಮತ್ತು ಕೋವಿಡ್ ನಂತರದ ತೊಡಕುಗಳೊಂದಿಗೆ ಸಂಬಂಧ ಹೊಂದಿದೆ ಎಂದು ಏಮ್ಸ್ ಮತ್ತು ನಿಮ್ಹಾನ್ಸ್ ನಡೆಸಿದ ಅಧ್ಯಯನ ಕಂಡುಹಿಡಿದಿದೆ. ಹೆಚ್ಚಿನ ಧೂಮಪಾನ ಮಾಡುವ ವಯಸ್ಕರಲ್ಲಿ, ಕೋವಿಡ್ ಫಲಿತಾಂಶ ಕೆಟ್ಟದಾಗಿದೆ ಎಂದು ಅಧ್ಯಯನ ಹೇಳಿದೆ. ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಹೊಸ ಆರೋಗ್ಯ ತೊಡಕುಗಳು ಅಂದರೆ ಹೃದಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ, ಅನೇಕರು ಸೋಂಕಿನ ನಂತರ ಒಂದಕ್ಕಿಂತ ಹೆಚ್ಚು ಹೊಸ ಆರೋಗ್ಯ ಸಮಸ್ಯೆಗಳನ್ನು ಹೊಂದುತ್ತಾರೆ ಎಂದು ಈ ಸಂಶೋಧನೆ ವರದಿ ಮಾಡಿದೆ.
ಕೋವಿಡ್ -19 ರೋಗಿಗಳಲ್ಲಿ ತಂಬಾಕು ಬಳಕೆಯಿಂದ ರೋಗ ಹರಡುವಿಕೆಯು 19% (ಎರಡನೇ ಹಂತದಲ್ಲಿ) ಮತ್ತು 25% (ಮೊದಲ ಹಂತದಲ್ಲಿ) ಎಂದು ಕಂಡುಬಂದಿದೆ. 1938 ಜನರಲ್ಲಿ, 1498 ಪುರುಷರು (78.3%), 439 (22.6%) ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ವ್ಯಕ್ತಿಯನ್ನು ಮೊದಲ ಹಂತದಲ್ಲಿ ಇವುಗಳನ್ನು ಪತ್ತೆ ಮಾಡಲಾಗಿದೆ. ಹೆಚ್ಚಿನ ಜನರು 31-40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಎರಡನೇ ಹಂತದಲ್ಲಿ, 902 ಜನರಲ್ಲಿ, 675 ಪುರುಷರು, 226 ಮಹಿಳೆಯರು ಮತ್ತು ತೃತೀಯ ಲಿಂಗಿ ಎಂದು ಗುರುತಿಸಲಾದ ಒಬ್ಬ ರೋಗಿಯಲ್ಲಿ ಪತ್ತೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದೆ.
2016-17ರ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆಯ ಪ್ರಕಾರ, ಭಾರತೀಯ ಜನಸಂಖ್ಯೆಯ 28.6 ಪ್ರತಿಶತದಷ್ಟು ಜನರು ತಂಬಾಕನ್ನು ಬಳಸುತ್ತಾರೆ. ಕೋವಿಡ್ -19 ರೋಗಿಗಳಲ್ಲಿ ಹೆಚ್ಚಿದ ಸಾವಿನ ಅಪಾಯವು ಧೂಮಪಾನ ಮಾಡುವ ವಯಸ್ಕರಲ್ಲಿ ಕಂಡುಬಂದಿದೆ.
ತಂಬಾಕಿನ ಬಳಕೆಯು ಮೊದಲೇ ಅಸ್ತಿತ್ವದಲ್ಲಿರುವ ವ್ಯಕ್ತಿಗಳಲ್ಲಿ ಹೃದಯರಕ್ತನಾಳದ ಕಾಯಿಲೆಯನ್ನು ಹೆಚ್ಚಿಸುವುದರಿಂದ, ತಂಬಾಕು ಬಳಕೆದಾರರಲ್ಲಿ ಕೋವಿಡ್-19 ನಂತರವು ಹೆಚ್ಚಿನ ಅಪಾಯವಿದೆ ಎಂದು ವರದಿ ಹೇಳಿದೆ. ತಂಬಾಕು ಬಳಕೆಯನ್ನು ತಡೆಗಟ್ಟಲು ಮತ್ತು ಭವಿಷ್ಯದ ಕೋವಿಡ್ -19 ಅಲೆಗಳು ಅಥವಾ ಇದೇ ರೀತಿಯ ಸಾಂಕ್ರಾಮಿಕ ರೋಗಗಳಿಗೆ ಆರೋಗ್ಯ ತಜ್ಞರ ಸಲಹೆ ಅಗತ್ಯ ಇದೆ ಎಂದು ವರದಿ ಹೇಳಿದೆ.
ಮಾರ್ಚ್ 2020ರಿಂದ ಡಿಸೆಂಬರ್ 2021ರವರೆಗೆ ಕೋವಿಡ್ -19 ಪರೀಕ್ಷೆ ನಡೆಸಿದ ರೋಗಿಗಳಲ್ಲಿ ತಂಬಾಕು ಬಳಕೆದಾರರು ಮತ್ತು ಬಳಕೆದಾರರಲ್ಲದವರ ನಡುವೆ ಕೋವಿಡ್ -19 ಕಾಯಿಲೆ ಮತ್ತು ಕೋವಿಡ್ -19 ನಂತರದ ತೊಡಕುಗಳ ತೀವ್ರತೆಯನ್ನು ನಿರ್ಣಯಿಸಲು ಮತ್ತು ಹೋಲಿಸುವಂತಹ ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನವನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಮೊದಲನೆಯದನ್ನು 1938 ರೋಗಿಗಳಲ್ಲಿ ಪಠ್ಯ ಸಂದೇಶಗಳ ಮೂಲಕ ಮಾಡಲಾಯಿತು. ಎರಡನೇ ಹಂತದಲ್ಲಿ, 902 ಜನರಲ್ಲಿ ದೂರವಾಣಿ ಆಧಾರಿತ ಸಮೀಕ್ಷೆಗಳನ್ನು ನಡೆಸಲಾಯಿತು.
ಭಾರತವು ಒಂದೇ ದಿನದಲ್ಲಿ 5,874 ಹೊಸ ಕೊರೊನಾ ಪ್ರಕರಣಗಳ ಏರಿಕೆಯನ್ನು ಕಂಡಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 49,015 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ. ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 5,31,533 ಕ್ಕೆ ಏರಿದೆ, 25 ಸಾವುಗಳು ಸಂಭವಿಸಿವೆ, ಇದರಲ್ಲಿ ಕೇರಳದ ಒಂಬತ್ತು ಸಾವುಗಳು ಸೇರಿವೆ ಎಂದು ಇಂದು (ಮೇ 1) ಆರೋಗ್ಯ ಸಚಿವಾಲಯ ತಿಳಿಸಿದೆ.
ದೈನಂದಿನ ಪಾಸಿಟಿವಿಟಿ ದರವು ಶೇಕಡಾ 3.31 ರಷ್ಟಿದ್ದರೆ, ವಾರದ ಕೋವಿಡ್ ವರದಿ ಶೇಕಡಾ 4.25 ರಷ್ಟಿದೆ. ಆರೋಗ್ಯ ಸಚಿವಾಲಯದ ವೆಬ್ಸೈಟ್ ಪ್ರಕಾರ, ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕಿನ ಶೇಕಡಾ 0.11 ರಷ್ಟಿದ್ದರೆ, ರಾಷ್ಟ್ರೀಯ ಕೋವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 98.71 ರಷ್ಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,43,64,841 ಕ್ಕೆ ಏರಿದರೆ, ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Mon, 1 May 23