ವಿಶ್ವಾದ್ಯಂತ ಪುರುಷರಲ್ಲಿ ವೀರ್ಯಾಣು ಕುಸಿತಕ್ಕೆ ಕೀಟನಾಶಕಗಳ ಬಳಕೆಯೂ ಕಾರಣ

50 ವರ್ಷಗಳ ಅವಧಿಯಲ್ಲಿ ಪುರುಷರ ವೀರ್ಯದ ಸಾಂದ್ರತೆಯು ಪ್ರಪಂಚದಾದ್ಯಂತ ಸುಮಾರು ಶೇ. 50ರಷ್ಟು ಕುಸಿದಿದೆ. ಇದಕ್ಕೆ ಪ್ರಪಂಚದಾದ್ಯಂತ ಬಳಸಲಾಗುವ 2 ಸಾಮಾನ್ಯ ಕೀಟನಾಶಕಗಳಾದ ಆರ್ಗನೊಫಾಸ್ಫೇಟ್​ ಮತ್ತು ಎನ್-ಮೀಥೈಲ್ ಕಾರ್ಬಮೇಟ್​ಗಳು ಕಾರಣ ಎಂದು ಅಧ್ಯಯನಕಾರರು ಹೇಳಿದ್ದಾರೆ.

ವಿಶ್ವಾದ್ಯಂತ ಪುರುಷರಲ್ಲಿ ವೀರ್ಯಾಣು ಕುಸಿತಕ್ಕೆ ಕೀಟನಾಶಕಗಳ ಬಳಕೆಯೂ ಕಾರಣ
ವೀರ್ಯಾಣುImage Credit source: iStock
Follow us
ಸುಷ್ಮಾ ಚಕ್ರೆ
|

Updated on:Nov 18, 2023 | 12:54 PM

ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಪುರುಷರಲ್ಲಿ ಬಂಜೆತನ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್ ಜರ್ನಲ್‌ನಲ್ಲಿ ಬುಧವಾರ ಪ್ರಕಟವಾದ ಈ ಅಧ್ಯಯನವು 2 ರಾಸಾಯನಿಕಗಳ ಕುರಿತು ವಿಶ್ವದಾದ್ಯಂತ 25 ಅಧ್ಯಯನಗಳನ್ನು ನಡೆಸಿರುವುದಾಗಿ ತಿಳಿಸಿದೆ.

ವರ್ಜೀನಿಯಾದ ಫೇರ್‌ಫ್ಯಾಕ್ಸ್‌ನಲ್ಲಿರುವ ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಹಾಗೂ ಹಿರಿಯ ಲೇಖಕಿ ಮೆಲಿಸ್ಸಾ ಪೆರ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, “50 ವರ್ಷಗಳ ಅವಧಿಯಲ್ಲಿ ಪುರುಷರ ವೀರ್ಯದ ಸಾಂದ್ರತೆಯು ಪ್ರಪಂಚದಾದ್ಯಂತ ಸುಮಾರು ಶೇ. 50ರಷ್ಟು ಕುಸಿದಿದೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರಪಂಚದಾದ್ಯಂತ ಬಳಸಲಾಗುವ 2 ಸಾಮಾನ್ಯ ಕೀಟನಾಶಕಗಳಾದ ಆರ್ಗನೊಫಾಸ್ಫೇಟ್​ ಮತ್ತು ಎನ್-ಮೀಥೈಲ್ ಕಾರ್ಬಮೇಟ್​ಗಳು ಕಾರಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆಯರಲ್ಲಿ ಬಂಜೆತನ ಶಾಶ್ವತವೇ? ಅದಕ್ಕೆ ಪರಿಹಾರವೇ ಇಲ್ಲವೇ?

ಆರ್ಗನೋಫಾಸ್ಫೇಟ್​ಗಳು ಯಾವುವು?:

ಆರ್ಗನೊಫಾಸ್ಫೇಟ್​ಗಳು ನರದ ಗ್ರಾಸ್, ಸಸ್ಯನಾಶಕಗಳು, ಕೀಟನಾಶಕಗಳು ಮತ್ತು ಕೀಟನಾಶಕಗಳ ಮುಖ್ಯ ಅಂಶಗಳಾಗಿವೆ. ಪ್ಲಾಸ್ಟಿಕ್​ಗಳು ಮತ್ತು ದ್ರಾವಕಗಳನ್ನು ರಚಿಸಲು ಸಹ ಇದನ್ನು ಬಳಸಲಾಗುತ್ತದೆ. ಪುರುಷರ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಅಂಶಗಳು ಯಾವುದು ಎಂದು ಅಧ್ಯಯನ ನಡೆಸಿದಾಗ ಈ ಕೀಟನಾಶಕಗಳ ಬಳಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮ ಬೆಳಕಿಗೆ ಬಂದಿತು. ಇದರಿಂದ ಪುರುಷರಲ್ಲಿ ಫರ್ಟಿಲಿಟಿ ಕಡಿಮೆಯಾಗುತ್ತಿದ್ದು, ಮಕ್ಕಳಾಗುವ ಸಾಧ್ಯತೆಯೂ ಕ್ಷೀಣಿಸುತ್ತಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ?:

ಅಧ್ಯಯನದ ಪ್ರಕಾರ, ಆರ್ಗನೋಫಾಸ್ಫೇಟ್‌ಗಳು ಮತ್ತು ಎನ್-ಮೀಥೈಲ್ ಕಾರ್ಬಮೇಟ್‌ಗಳ ಸಂಪರ್ಕಕ್ಕೆ ಬರುವ ಕೃಷಿಯಲ್ಲಿ ಕೆಲಸ ಮಾಡುವ ಮತ್ತು ಹೆಚ್ಚಿನ ಮಟ್ಟದ ಕೀಟನಾಶಕಗಳಿಗೆ ಒಡ್ಡಿಕೊಂಡ ಪುರುಷರಲ್ಲಿ ವೀರ್ಯದ ಸಾಂದ್ರತೆ ಗಮನಾರ್ಹವಾಗಿ ಕಡಿಮೆಯಾಗಿದೆ.

ಇದನ್ನೂ ಓದಿ: ಪುರುಷರ ಈ 5 ತಪ್ಪುಗಳು ಬಂಜೆತನಕ್ಕೆ ಕಾರಣವಾದೀತು ಎಚ್ಚರ!

ಈ ಬಗ್ಗೆ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು, ಕೀಟನಾಶಕಗಳು ಲೈಂಗಿಕ ಹಾರ್ಮೋನುಗಳ ಮೇಲೆ ನೇರವಾಗಿ ಪ್ರಭಾವ ಬೀರುವ ಮೂಲಕ, ವೃಷಣ ಕೋಶಗಳನ್ನು ಹಾನಿಗೊಳಿಸುವುದರ ಮೂಲಕ ಮತ್ತು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮೆದುಳಿನ ನರಪ್ರೇಕ್ಷಕಗಳನ್ನು ಬದಲಾಯಿಸುವ ಮೂಲಕ ವೀರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sat, 18 November 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್