ಮಹಿಳೆಯರಲ್ಲಿ ಬಂಜೆತನ ಶಾಶ್ವತವೇ? ಅದಕ್ಕೆ ಪರಿಹಾರವೇ ಇಲ್ಲವೇ?

ಕೆಲವು ಸಂದರ್ಭಗಳಲ್ಲಿ ಒತ್ತಡ, ಕಳಪೆ ಆಹಾರ ಅಥವಾ ಹಾರ್ಮೋನುಗಳ ಅಸಮತೋಲನದಂತಹ ಜೀವನಶೈಲಿಯ ಅಂಶಗಳು ತಾತ್ಕಾಲಿಕವಾಗಿ ಫರ್ಟಿಲಿಟಿಯ ಮೇಲೆ ಪರಿಣಾಮ ಬೀರಬಹುದು. ಇದು ತಾತ್ಕಾಲಿಕವಾಗಿರುತ್ತದೆ. ಇದಕ್ಕೆ ನಿಮ್ಮಲ್ಲೇ ಪರಿಹಾರವಿರುತ್ತದೆ.

ಮಹಿಳೆಯರಲ್ಲಿ ಬಂಜೆತನ ಶಾಶ್ವತವೇ? ಅದಕ್ಕೆ ಪರಿಹಾರವೇ ಇಲ್ಲವೇ?
ಫರ್ಟಿಲಿಟಿImage Credit source: iStock
Follow us
|

Updated on: Nov 15, 2023 | 2:41 PM

ಆಹಾರ ಪದ್ಧತಿ, ಜೀವನಶೈಲಿ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದಾಗಿ ಇತ್ತೀಚೆಗೆ ಮಹಿಳೆಯರಲ್ಲಿ ಫರ್ಟಿಲಿಟಿ ಪ್ರಮಾಣ ಕಡಿಮೆಯಾಗಿದೆ. ಮಕ್ಕಳಾಗಬೇಕೆಂದು ಬಯಸುವ ಎಷ್ಟೋ ಮಹಿಳೆಯರು ಬಂಜೆತನಕ್ಕೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಿ ತಮ್ಮ ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಂಜೆತನವೆಂಬುದು ಸಾಮಾನ್ಯವಾಗಿ ಶಾಶ್ವತ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ದಂಪತಿಗಳು ಬಹಳ ಹತಾಶರಾಗುತ್ತಾರೆ ಆದರೆ, ಬಂಜೆತನವು ಕೆಲವೊಮ್ಮೆ ತಾತ್ಕಾಲಿಕವಾಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಬಂಜೆತನಕ್ಕೆ ಕೆಲವೊಮ್ಮೆ ಚಿಕಿತ್ಸೆಯೂ ಬೇಕಾಗಿಲ್ಲ.

ಕೆಲವು ಸಂದರ್ಭಗಳಲ್ಲಿ, ಒತ್ತಡ, ಕಳಪೆ ಆಹಾರ ಅಥವಾ ಹಾರ್ಮೋನುಗಳ ಅಸಮತೋಲನದಂತಹ ಜೀವನಶೈಲಿಯ ಅಂಶಗಳು ತಾತ್ಕಾಲಿಕವಾಗಿ ಫರ್ಟಿಲಿಟಿಯ ಮೇಲೆ ಪರಿಣಾಮ ಬೀರಬಹುದು. ಇದು ತಾತ್ಕಾಲಿಕವಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಪಡೆಯಬೇಕೆಂದೇನೂ ಇಲ್ಲ. ಬದಲಾಗಿ ನಿಮ್ಮ ಜೀವನಶೈಲಿ, ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಬಂಜೆತನದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಹೀಗಾಗಿ, ನಿಮ್ಮ ಸಮಸ್ಯೆಗೆ ಮೂಲ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬೇಕಾದುದು ಅಗತ್ಯ.

ಆ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮತ್ತು ಗಂಡ-ಹೆಂಡತಿ ಇಬ್ಬರೂ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವ ಮೂಲಕ ಮಹಿಳೆ ಗರ್ಭ ಧರಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಹಾಗಂತ ಮಹಿಳೆಯೊಬ್ಬಳೇ ಈ ಬದಲಾವಣೆ ಮಾಡಿಕೊಂಡರೆ ಸಾಲದು. ಕೆಲವೊಮ್ಮೆ ಪುರುಷರ ಮಾನಸಿಕ ಒತ್ತಡ, ಆಹಾರಶೈಲಿ, ಕೊಲೆಸ್ಟ್ರಾಲ್ ಮುಂತಾದ ಅಂಶಗಳು ಕೂಡ ಅವರ ವೀರ್ಯಾಣುವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೂ ಮಹಿಳೆ ಗರ್ಭ ಧರಿಸಲು ಸಾಧ್ಯವಾಗದಿರಬಹುದು. ಹೀಗಾಗಿ, ಇಬ್ಬರೂ ಆರೊಗ್ಯಯುತ ಆಹಾರ ಪದ್ಧತಿ ಮತ್ತು ಜೀವನಶೈಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ.

ಇದನ್ನೂ ಓದಿ: ಪುರುಷರ ಈ 5 ತಪ್ಪುಗಳು ಬಂಜೆತನಕ್ಕೆ ಕಾರಣವಾದೀತು ಎಚ್ಚರ!

ಮಹಿಳೆ ಗರ್ಭಿಣಿಯಾಗಲು ತಾತ್ಕಾಲಿಕ ತೊಂದರೆಗಳನ್ನು ಅನುಭವಿಸುವುದಕ್ಕೆ ವಿವಿಧ ಕಾರಣಗಳಿವೆ. ಅದಕ್ಕೆ ಒಂದು ಸಾಮಾನ್ಯ ಅಂಶವೆಂದರೆ ವಯಸ್ಸು. ಮಹಿಳೆಯರಿಗೆ ವಯಸ್ಸಾದಂತೆ ಅವರ ಫಲವತ್ತತೆ ಕ್ಷೀಣಿಸುತ್ತದೆ. ಆಕೆ ನೈಸರ್ಗಿಕವಾಗಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಇದು ವಯಸ್ಸಾದ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ. ಇದರಿಂದಾಗಿ ಆಕೆಗೆ ಬಂಜೆತನದ ಸಮಸ್ಯೆ ಇದೆ ಎಂದು ಅರ್ಥವಲ್ಲ.

ಫಲವತ್ತತೆಯ ಸಮಸ್ಯೆಗಳಲ್ಲಿ ಒತ್ತಡವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಒತ್ತಡಕ್ಕೊಳಗಾದಾಗ ಅಂಡೋತ್ಪತ್ತಿ ಮತ್ತು ವೀರ್ಯ ಉತ್ಪಾದನೆಗೆ ಅಡ್ಡಿಪಡಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ನೀವು ನಿರಂತರವಾಗಿ ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದರೆ, ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಸ್ವಯಂ-ಆರೈಕೆಗೆ ಆದ್ಯತೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಕೆಲವು ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳು ತಾತ್ಕಾಲಿಕವಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಅಥವಾ ಥೈರಾಯ್ಡ್ ರೀತಿಯ ಸಮಸ್ಯೆಗಳು ಗರ್ಭಧಾರಣೆಗೆ ಅಗತ್ಯವಾದ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸಬಹುದು. ಈ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸುವುದು ಅಗತ್ಯ.

ಇದನ್ನೂ ಓದಿ: Tulsi Side Effects: ತುಳಸಿ ಸೇವನೆ ಬಂಜೆತನಕ್ಕೆ ಕಾರಣವಾಗಬಹುದೇ? ಪ್ರಯೋಜನಗಳು ಹಾಗೂ ಅಪಾಯವೇನು?

ಫರ್ಟಿಲಿಟಿಯನ್ನು ಹೆಚ್ಚಿಸಲು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾದಾಮಿ, ಆವಕಾಡೊಗಳು, ಹಸಿರು ಸೊಪ್ಪು ಮತ್ತು ಮೊಟ್ಟೆಗಳು ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚಿಸುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ.

ಹಾಗೇ, ಸಕ್ಕರೆ ಅಥವಾ ಅನಾರೋಗ್ಯಕರ ಕೊಬ್ಬುಗಳು ತುಂಬಿರುವ, ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ. ಏಕೆಂದರೆ ಅವು ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಯೋಗ, ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು ಅಥವಾ ನಿಯಮಿತ ದೈಹಿಕ ಚಟುವಟಿಕೆಯಂತಹ ಒತ್ತಡ ಕಡಿಮೆಗೊಳಿಸುವ ತಂತ್ರಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ