ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಹೊರಗೆ ಸ್ಪಲ್ಪ ಚೆಲ್ಲಬೇಕು, ಯಾಕೆ ?

ಮಗುವಿನ ಬೆಳವಣಿಗೆಗೆ ತಾಯಿಯ ಎದೆ ಹಾಲು ಬಹಳ ಮುಖ್ಯ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವರು ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಸ್ಪಲ್ಪ ನೆಲಕ್ಕೆ ಚೆಲ್ಲುತ್ತಾರೆ. ಎಂಬುದು ತಿಳಿದಿದೆಯೇ? ಹೌದು. ಈ ವಿಷಯ ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯ ಹುಟ್ಟಿಸಿದರೂ ಕೂಡ ಈ ರೀತಿ ಮಾಡುವುದರ ಹಿಂದೆ ಹಲವು ಕಾರಣಗಳಿವೆ. ಹಾಗಾದರೆ ಯಾಕೆ ಈ ರೀತಿ ಮಾಡಲಾಗುತ್ತದೆ? ಇದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳಿ.

ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಹೊರಗೆ ಸ್ಪಲ್ಪ ಚೆಲ್ಲಬೇಕು, ಯಾಕೆ ?
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: May 06, 2025 | 3:00 PM

ಮಗು ಹುಟ್ಟಿದ ಮೇಲೆ ತಾಯಿಯ ಎದೆ ಹಾಲು (Breast Milk) ನೀಡುವುದು ಸಾಮಾನ್ಯ. ತಾಯಿಯ ಎದೆ ಹಾಲಿನಲ್ಲಿ ಮಗುವಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಇರುವುದರಿಂದ ಇದು ಮಗುವಿನ ಆರೋಗ್ಯಕರ ಬೆಳವಣಿಗೆಗೆ (Healthy growth) ಬಹಳ ಅವಶ್ಯಕವಾಗಿರುತ್ತದೆ. ಅದಕ್ಕಾಗಿಯೇ ಬಾಣಂತಿಯರು (Postpartum) ಈ ಸಮಯದಲ್ಲಿ ಒಳ್ಳೆಯ ಆಹಾರಗಳ ಸೇವನೆ ಮಾಡುವ ಮೂಲಕ ಆರೋಗ್ಯ (Health) ವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವರು ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಸ್ಪಲ್ಪ ನೆಲಕ್ಕೆ ಚೆಲ್ಲುತ್ತಾರೆ. ಅದಲ್ಲದೆ ಈ ರೀತಿ ಮಾಡುವುದರ ಹಿಂದೆ ಹಲವು ಕಾರಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಇದು ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯ ಎನಿಸಿದರೂ ಈ ರೀತಿ ಮಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಹಾಗಾದರೆ ಯಾಕೆ ಈ ರೀತಿ ಮಾಡಲಾಗುತ್ತದೆ? ಇದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳಿ.

ಕೆಟ್ಟ ಕಣ್ಣಿನಿಂದ ಮಗುವನ್ನು ಕಾಪಾಡುತ್ತದೆ!

ಸಾಮಾನ್ಯವಾಗಿ ತಾಯಿ ತನ್ನ ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಎದೆ ಹಾಲನ್ನು ಸ್ವಲ್ಪ ಚೆಲ್ಲುತ್ತಾಳೆ. ಈ ರೀತಿ ಮಾಡುವುದರಿಂದ ಮಗುವಿಗೆ ದೃಷ್ಟಿ ಬೀಳುವುದಿಲ್ಲ. ಇದರಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಈ ರೀತಿ ಎದೆ ಹಾಲು ಭೂಮಿಗೆ ಬೀಳುವುದರಿಂದ ಕೆಟ್ಟ ಕಣ್ಣು ಮಗುವಿಗೆ ಬೀಳುವುದಿಲ್ಲ. ಮಗು ಹೊಟ್ಟೆ ತುಂಬಾ ಹಾಲು ಕುಡಿಯುತ್ತದೆ ಎಂಬುದು ನಂಬಿಕೆ. ಆದರೆ ಇದನ್ನು ಕೆಲವರು ನಂಬುವುದಿಲ್ಲ. ಇದೊಂದು ಮೂಢನಂಬಿಕೆ ಎಂದು ಈ ರೀತಿಯ ಕ್ರಮಗಳನ್ನು ಅಲ್ಲಗಳೆಯುತ್ತಾರೆ. ಆದರೆ ಇದೇ ನಿಜವಲ್ಲ. ಈ ರೀತಿ ಮಾಡುವುದರ ಹಿಂದೆ ಮತ್ತೊಂದು ಕಾರಣವಿದೆ. ಏನದು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ತಾಳ್ಮೆ ಜತೆಗೆ ಬಾಣಂತಿಯರು ಇವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಟಿವಿ9 ಮೂಲಕ ಬಾಣಂತಿಯರಿಗೆ ಸಲಹೆ ನೀಡಿದ ಡಾ. ಶಿಲ್ಪಾ

ಇದನ್ನೂ ಓದಿ
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?
ಬೇರೆಯವರ ಚಪ್ಪಲಿ, ಶೂ ಬಳಸುವ ಮುನ್ನ ಈ ರೀತಿ ಮಾಡಿ
ಗೋವುಗಳು ಪ್ಲಾಸ್ಟಿಕ್​​ ತಿಂದು ಸಾಯುವುದಕ್ಕೆ ಕಾರಣವೇನು?
ಮಗುವಿಗೆ ಮಸಾಲೆ ಪದಾರ್ಥಗಳನ್ನು ಎಷ್ಟನೇ ತಿಂಗಳಿಗೆ ನೀಡಬೇಕು?

ಮೊಲೆ ಹಾಲು ನೀಡುವ ಮೊದಲು ಹೊರಗೆ ಚೆಲ್ಲುವುದು ಇದೆ ಕಾರಣಕ್ಕೆ!

ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಹಾಲನ್ನು ಹೊರಗೆ ಚೆಲ್ಲುವುದರಿಂದ ಮೊದಲು ಶೇಖರಣೆ ಆಗಿರುವ ಹಾಲು ಹೊರಗೆ ಹೋಗುತ್ತದೆ. ಜೊತೆಗೆ ಇನ್ನು ಕೆಲವರಿಗೆ ಎದೆಯಲ್ಲಿ ಬೇಗ ಹಾಲು ಬರುವುದಿಲ್ಲ ಈ ರೀತಿ ಮಾಡುವುದರಿಂದ ಹಾಲು ಬರುತ್ತಿದೆಯೋ? ಇಲ್ಲವೋ? ಎಂಬುದು ತಿಳಿಯುತ್ತದೆ. ಅಂದರೆ ಇದು ನಿಧಾನಗತಿಯ ಹಾಲಿನ ಹರಿವನ್ನು ಹೆಚ್ಚಿಸುತ್ತದೆ. ಅದಲ್ಲದೆ ಸ್ತನ ಮೃದುಗೊಳ್ಳುತ್ತದೆ ಇದರಿಂದ ಮಗುವಿಗೆ ಹಾಲು ಕುಡಿಯುವುದಕ್ಕೆ ಸುಲಭವಾಗುತ್ತದೆ. ಇನ್ನು, ಮೊಲೆ ಹಾಲು ನೀಡುವ ಮೊದಲು ಹಾಲನ್ನು ಹೊರಗೆ ಚೆಲ್ಲುವ ಕ್ರಮ ಬಾಣಂತಿಯರಿಗೆ ಸ್ತನಗಳಲ್ಲಿ ಕಂಡುಬರುವಂತಹ ಊತ, ಅಸ್ವಸ್ಥತೆಯನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗುತ್ತದೆ. ಅದಲ್ಲದೆ ಈ ರೀತಿಯ ಅಭ್ಯಾಸ ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದಾಗಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ