ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ

ಹಲ್ಲಿನ ಆರೋಗ್ಯ ಬಹಳ ಮುಖ್ಯ. ಹಾಗಾಗಿ ವೈದ್ಯರು ಪ್ರತಿನಿತ್ಯ ಎರಡು ಬಾರಿ ಬ್ರಷ್ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಅದಕ್ಕೂ ಮಿಗಿಲಾಗಿ ಹಲ್ಲನ್ನು ಉಜ್ಜಿ ಬಂದ ನಂತರವೂ ಆಹಾರ ಸೇವನೆ ಮಾಡುತ್ತಾರೆ. ಇನ್ನು ಕೆಲವರು ಬ್ರಷ್ ಮಾಡಿ ಬಂದ ತಕ್ಷಣ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎನ್ನಲಾಗುತ್ತದೆ. ಹಾಗಾದರೆ ಇದರ ಹಿಂದಿನ ಕಾರಣ ನಿಮಗೆ ತಿಳಿದಿದೆಯೇ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಲ್ಲುಜ್ಜಿದ ತಕ್ಷಣ ಯಾಕೆ ನೀರು ಕುಡಿಯಬಾರದು? ಈ ಗಂಭೀರ ಕಾರಣ ತಿಳಿದ್ರೆ ನೀವೆಂದು ಈ ತಪ್ಪು ಮಾಡಲ್ಲ
Avoid Water After Brushing Teeth

Updated on: Sep 03, 2025 | 5:51 PM

ಹಲ್ಲಿನ ಆರೋಗ್ಯ (Oral health) ಬಹಳ ಅವಶ್ಯಕ. ನಮ್ಮ ದೇಹ ಚೆನ್ನಾಗಿರಲು ಇದು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಬಾಯಿಯ ಆರೋಗ್ಯವು ಒಟ್ಟಾರೆ ದೇಹದ ಆರೋಗ್ಯಕ್ಕೆ ಸಂಬಂಧಿಸಿರುತ್ತದೆ. ಅದಕ್ಕಾಗಿಯೇ ಆರೋಗ್ಯಕರ ಆಹಾರ ಸೇವನೆ ಮಾಡುವುದರ ಜೊತೆ ಜೋತೆಗೆ ದಂತವೈದ್ಯರನ್ನು ಭೇಟಿ ಮಾಡುವುದು ಕೂಡ ಬಹಳ ಅಗತ್ಯ. ಇದರ ಜೊತೆಗೆ ಬೆಳಿಗ್ಗೆ, ರಾತ್ರಿ ತಪ್ಪದೆ ಹಲ್ಲುಜ್ಜುವುದು ಕೂಡ ಬಹಳ ಅವಶ್ಯಕ. ಇಲ್ಲವಾದಲ್ಲಿ ಹಲ್ಲಿನ ಸಮಸ್ಯೆಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಳು ಬರಬಹುದು. ಹಾಗಾಗಿ ಪ್ರತಿನಿತ್ಯ ಹಲ್ಲುಜ್ಜುವ ಅಭ್ಯಾಸವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವರಿಗೆ ಹಲ್ಲುಜ್ಜಿದ ಬಂದ ತಕ್ಷಣ ನೀರು (Water) ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎನ್ನಲಾಗುತ್ತದೆ. ಹಾಗಾದರೆ ಇದರ ಹಿಂದಿನ ಕಾರಣ ನಿಮಗೆ ತಿಳಿದಿದೆಯೇ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾಕೆ ನೀರು ಕುಡಿಯುವುದು ಒಳ್ಳೆಯದಲ್ಲ?

ಸಾಮಾನ್ಯವಾಗಿ ಹಲ್ಲುಜ್ಜಿದ ನಂತರ, ಟೂತ್‌ಪೇಸ್ಟ್‌ನಲ್ಲಿರುವ ತೆಳುವಾದ ಫ್ಲೋರೈಡ್ ಪದರವು ನಮ್ಮ ಹಲ್ಲುಗಳ ಮೇಲೆ ನೆಲೆಗೊಂಡಿರುತ್ತದೆ. ಈ ಪದರವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ನಿಮಗೆ ತಿಳಿದಿರಬಹುದು, ಈ ಫ್ಲೋರೈಡ್‌ನ ಉದ್ದೇಶ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸುವುದು. ಜೊತೆಗೆ ಇದು ನಮ್ಮ ಒಸಡಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಹಾಗಾಗಿ ಹಲ್ಲುಜ್ಜಿದ ನಂತರ ನೀವು ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು ಹಲ್ಲುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಅಂದರೆ ಬ್ರಷ್ ಮಾಡಿ ತಕ್ಷಣ ನೀರು ಕುಡಿದರೆ ಅಥವಾ ಅತಿಯಾದ ನೀರಿನಿಂದ ಬಾಯಿ ತೊಳೆಯುವುದರಿಂದಲೂ ಫ್ಲೋರೈಡ್ ಬೇಗನೆ ತೊಳೆದು ಹೋಗುತ್ತದೆ. ಪರಿಣಾಮವಾಗಿ, ಟೂತ್‌ಪೇಸ್ಟ್‌ನ ಫಲಿತಾಂಶ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ಮಾತ್ರವಲ್ಲ ಹಲ್ಲುಗಳನ್ನು ಕುಳಿಗಳಿಂದ ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Vitamin deficiency : ಹಲ್ಲು ಚೂರು ಚೂರಾಗಿ ಬೀಳುತ್ತಾ! ಯಾವ ವಿಟಮಿನ್ ಕೊರತೆಯಾಗಿದೆ ತಿಳಿದುಕೊಳ್ಳಿ

ಇದನ್ನೂ ಓದಿ
ವಿಚಿತ್ರ ಕನಸುಗಳು ಬೀಳುವುದಕ್ಕೆ ರಾತ್ರಿ ಸೇವನೆ ಮಾಡುವ ಆಹಾರವೇ ಕಾರಣ!
ಮಲಬದ್ಧತೆ ಸಮಸ್ಯೆ ಇದ್ಯಾ? ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಬರುವುದಕ್ಕೆ ಈ ಆಹಾರಗಳ ಸೇವನೆಯೇ ಕಾರಣ
ಐವಿಎಫ್ ಮಾಡುವ ಮೊದಲು ಈ ಬಗ್ಗೆ ಗಮನ ನೀಡಿ, ಇದರ ವೆಚ್ಚ, ವಿಧಗಳು ಯಾವುವು?

ಈ ಪಾನೀಯಗಳನ್ನು ತಪ್ಪಿಯೂ ಸೇವನೆ ಮಾಡಬೇಡಿ

ದಂತ ವೈದ್ಯರ ಪ್ರಕಾರ ಫ್ಲೋರೈಡ್ ತನ್ನ ಪರಿಣಾಮವನ್ನು ತೋರಿಸಲು ಕನಿಷ್ಠ 10- 15 ನಿಮಿಷ ತೆಗೆದುಕೊಳ್ಳುತ್ತದೆ. ಆಗ ಮಾತ್ರ ಅದು ಹಲ್ಲುಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ನೀವು ಕೂಡ ಆರೋಗ್ಯಕರ ಹಲ್ಲುಗಳನ್ನು ಪಡೆಯಲು ಬಯಸುವುದಾದರೆ, ಹಲ್ಲುಜ್ಜಿದ ನಂತರ ಸ್ವಲ್ಪ ಸಮಯ ಕಾಯಬೇಕು. ನೀರು ಮಾತ್ರವಲ್ಲ, ಒಮ್ಮೆ ಸರಿಯಾಗಿ ಬ್ರಷ್ ಮಾಡಿದ ಮೇಲೆ ತಕ್ಷಣಕ್ಕೆ ಚಹಾ ಅಥವಾ ಕಾಫಿಯಂತಹ ಪಾನೀಯಗಳನ್ನು ಕೂಡ ಸೇವನೆ ಮಾಡುವುದನ್ನು ತಪ್ಪಿಸಬೇಕು. ಈ ಒಂದು ಅಭ್ಯಾಸದಿಂದ ತಪ್ಪದೆ ರೂಢಿಸಿಕೊಳ್ಳುವುದರಿಂದ ನಿಮ್ಮ ಹಲ್ಲುಗಳು ಗಟ್ಟಿಯಾಗಿರುವುದಲ್ಲದೆ ದೀರ್ಘಕಾಲದ ವರೆಗೆ ಕುಳಿಗಳಿಲ್ಲದೆ ಆರೋಗ್ಯವಾಗಿರುತ್ತದೆ. ಆರೋಗ್ಯಕರ ಹಲ್ಲುಗಳಿಗಾಗಿ ದಂತವೈದ್ಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಶಿಫಾರಸು ಮಾಡುತ್ತಾರೆ. ಇದು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯ ಉತ್ತಮ ಅಭ್ಯಾಸಗಳಿಂದ, ನೀವು ನಿಮ್ಮ ಹಲ್ಲುಗಳನ್ನು ಆರೋಗ್ಯಕರವಾಗಿಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ