ನಿಮ್ಮಲ್ಲಿ ಶಕ್ತಿ ತುಂಬುವ ಆರೋಗ್ಯಕರ ಆಹಾರ ಪದಾರ್ಥಗಳಿವು

| Updated By: shruti hegde

Updated on: Nov 08, 2021 | 8:39 AM

ನೀವು ಆರೋಗ್ಯವಾಗಿರಬೇಕಾದರೆ ನಿಮ್ಮ ಆಹಾರ ವ್ಯವಸ್ಥೆ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಹಾಗಿರುವಾಗ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ನಿಮ್ಮಲ್ಲಿ ಶಕ್ತಿ ತುಂಬುವ ಆರೋಗ್ಯಕರ ಆಹಾರ ಪದಾರ್ಥಗಳಿವು
ಸಂಗ್ರಹ ಚಿತ್ರ
Follow us on

ನೀವು ನಿಮ್ಮ ಅಹಾರ ಪದ್ಧತಿಯಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದು. ನೀವು ಆರೋಗ್ಯವಾಗಿರಬೇಕಾದರೆ ನಿಮ್ಮ ಆಹಾರ ವ್ಯವಸ್ಥೆ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಹಾಗಿರುವಾಗ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಈ ಕೆಳಗೆ ಹೇಳಿರುವ ಕೆಲವು ಆಹಾರ ಪದಾರ್ಥಗಳು ನಿಮ್ಮಲ್ಲಿ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಈ ಕೆಲವು ಪದಾರ್ಥಗಳು ಸೇರಿರಲಿ.

ಶುಂಠಿ, ಜೇನುತುಪ್ಪ, ದಾಲ್ಚಿನ್ನಿ, ಸಿಟ್ರಸ್ ಹಣ್ಣುಗಳು, ಅವರೆಕಾಳು ಈ ಕೆಲವು ಆಹಾರ ಪದಾರ್ಥಗಳು ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಸೇರಿರಲಿ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಚಳಿಗಾಲದ ಸಮಯದಲ್ಲಿ ಈ ಕೆಲವು ಆಹಾರ ಪದಾರ್ಥಗಳು ನಿಮ್ಮಲ್ಲಿ ಶಕ್ತಿ ತುಂಬುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಶುಂಠಿ
ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಶುಂಠಿಯನ್ನು ಬಳಸಲಾಗುತ್ತದೆ. ಅಡುಗೆಯಲ್ಲಿ ರುಚಿ ಹೆಚ್ಚಿಸುವುದರ ಜೊತೆಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುತ್ತದೆ. ಗಂಟಲು ನೋವು, ಕೆಮ್ಮು, ತಲೆನೋವಿಗೂ ಸಹ ಶುಂಠಿ ಪರಿಹಾರ ನೀಡುತ್ತದೆ.

ಜೇನು ತುಪ್ಪ
ಜೇನುತುಪ್ಪದಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೆಚ್ಚಾಗಿರುತ್ತವೆ. ಚಳಿಗಾಲದ ಸಮಯದಲ್ಲಿ ಡ್ರೈ ಸ್ಕಿನ್, ತುಟಿ ಒಡೆಯುವುದು, ಚರ್ಮದಲ್ಲಿ ಬಿರುಕಿನ ಸಮಸ್ಯೆ ನಿವಾರಣೆ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಜೇನುತುಪ್ಪ ಸೇವನೆ ಒಳ್ಳೆಯದು.

ದಾಲ್ಚಿನ್ನಿ
ದಾಲ್ಚಿನ್ನಿ ಮಸಾಲೆ ಪದಾರ್ಥವಾಗಿದ್ದರೂ ದೇಹದ ಆರೋಗ್ಯಕ್ಕೆ ಉತ್ತಮ. ಅಡುಗೆಯಲ್ಲಿ ರುಚಿ ಹೆಚ್ಚಿಸುವುದರ ಜೊತೆಗೆ ಗಂಟು ನೋವು, ಜೀರ್ಣಕಾರಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ. ಹಾಗಾಗಿ ಚಳಿಗಾಲದ ಸಮಯದಲ್ಲಿ ದಾಲ್ಚಿನ್ನಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

ಸಿಟ್ರಸ್ ಹಣ್ಣುಗಳು
ಚಳಿಗಾಲದ ಸಮಯದಲ್ಲಿ ಸಿಟ್ರಸ್ ಹಣ್ಣುಗಳು ಒಳ್ಳೆಯದು. ಕಿತ್ತಳೆ, ದ್ರಾಕ್ಷಿ ಹಣ್ಣುಗಳನ್ನು ಸೇವಿಸಿ. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಈ ಹಣ್ಣುಗಳು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಅವರೆಕಾಳು
ಅವರೆಕಾಳಿನಲ್ಲಿ ಫೈಬರ್, ಖನಿಜ, ಉತ್ಕರ್ಷಣ ನಿರೋಧಕ ಮತ್ತು ಇತರ ಪೋಷಕಾಂಶಗಳು ಇರುತ್ತದೆ. ಜೀರ್ಣಕ್ರಿಯೆ ಅಸ್ವಸ್ಥತೆಯನ್ನು ಸುಧಾರಿಸುತ್ತದೆ. ಅವರೆಕಾಳು ಅತಿಯಾದ ಸೇವನೆ ಒಳ್ಳೆಯದಲ್ಲ. ಆದರೆ ನಿಯಮಿತವಾಗಿ ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಇದನ್ನೂ ಓದಿ:

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

Health Tips: ಕೈ ಸೆಳೆತ ಸಮಸ್ಯೆ ಕಾಡುತ್ತಿದೆಯಾ? ಕಾರಣಗಳೇನು ಗೊತ್ತಾ?