AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಶರ್ ಕುಕ್ಕರ್​ನಲ್ಲಿ ಈ ಆಹಾರ ಪದಾರ್ಥಗಳನ್ನು ಎಂದೂ ಬೇಯಿಸಬೇಡಿ

ಅಡುಗೆ ಮನೆಯಲ್ಲಿ ಪ್ರೆಶರ್​ ಕುಕ್ಕರ್ ಇದ್ದರೆ ಅರ್ಧ ಅಡುಗೆಯೇ ಮುಗಿದಷ್ಟು ತೃಪ್ತಿ ದೊರೆಯುವುದಂತೂ ಸತ್ಯ. ಮೊದಲು ಸಾಂಬಾರು ಮಾಡಬೇಕೆಂದರೆ ಬೇಳೆ, ತರಕಾರಿ ಎಲ್ಲವನ್ನೂ ಬೇರೆ ಬೇರೆ ಬೇಯಿಸಿಕೊಳ್ಳಬೇಕಿತ್ತು, ಮತ್ತು ಅನ್ನ ಮಾಡಬೇಕೆಂದರೂ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ನೀರು ಬಿಸಿಯಾದ ಮೇಲೆ ಅದಕ್ಕೆ ಅದಕ್ಕೆ ಅಕ್ಕಿ ಹಾಕಿ ಹೋಗುವಾಗ ಬರುವಾಗ ನೋಡುತ್ತಲೇ ಇರಬೇಕಿತ್ತು. ಆದರೆ ಈಗ ಹಾಗಿಲ್ಲ ಕುಕ್ಕರ್​ನಿಂದ ಎಲ್ಲವೂ ಸುಲಭವಾಗಿದೆ.

ಪ್ರೆಶರ್ ಕುಕ್ಕರ್​ನಲ್ಲಿ ಈ ಆಹಾರ ಪದಾರ್ಥಗಳನ್ನು ಎಂದೂ ಬೇಯಿಸಬೇಡಿ
ಕುಕ್ಕರ್Image Credit source: ABP Live
ನಯನಾ ರಾಜೀವ್
|

Updated on:Jul 27, 2023 | 11:52 AM

Share

ಅಡುಗೆ ಮನೆಯಲ್ಲಿ ಪ್ರೆಶರ್​ ಕುಕ್ಕರ್ ಇದ್ದರೆ ಅರ್ಧ ಅಡುಗೆಯೇ ಮುಗಿದಷ್ಟು ತೃಪ್ತಿ ದೊರೆಯುವುದಂತೂ ಸತ್ಯ. ಮೊದಲು ಸಾಂಬಾರು ಮಾಡಬೇಕೆಂದರೆ ಬೇಳೆ, ತರಕಾರಿ ಎಲ್ಲವನ್ನೂ ಬೇರೆ ಬೇರೆ ಬೇಯಿಸಿಕೊಳ್ಳಬೇಕಿತ್ತು, ಮತ್ತು ಅನ್ನ ಮಾಡಬೇಕೆಂದರೂ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ನೀರು ಬಿಸಿಯಾದ ಮೇಲೆ ಅದಕ್ಕೆ ಅದಕ್ಕೆ ಅಕ್ಕಿ ಹಾಕಿ ಹೋಗುವಾಗ ಬರುವಾಗ ನೋಡುತ್ತಲೇ ಇರಬೇಕಿತ್ತು. ಆದರೆ ಈಗ ಹಾಗಿಲ್ಲ ಕುಕ್ಕರ್​ನಿಂದ ಎಲ್ಲವೂ ಸುಲಭವಾಗಿದೆ. ಆದರೆ ಎಲ್ಲವನ್ನು ತಯಾರಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸಬೇಕಾದ ಅಗತ್ಯವಿಲ್ಲ. ಕೆಲವು ಆಹಾರ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು ಅವುಗಳ ಬಗ್ಗೆ ತಿಳಿಯಿರಿ

ಹಾಲಿನ ಉತ್ಪನ್ನಗಳು ಹಾಲು, ಮೊಸರು ಅಥವಾ ಕೆನೆ ಮುಂತಾದ ಡೈರಿ ಉತ್ಪನ್ನಗಳಿಗೆ ಸಂಬಂಧಿಸಿದ ಭಕ್ಷ್ಯಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ ಕುಕ್ಕರ್‌ನಲ್ಲಿ ಅತಿಯಾದ ಶಾಖದಿಂದಾಗಿ, ಡೈರಿ ಉತ್ಪನ್ನವು ಸ್ಫೋಟಗೊಂಡು ಹಾಳಾಗಬಹುದು.

ಕರಿದ ಪದಾರ್ಥಗಳು ಕರಿದ ಪದಾರ್ಥಗಳನ್ನು ಕೂಡ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ ಅತಿಯಾದ ಶಾಖ ಮತ್ತು ಬಿಸಿ ಎಣ್ಣೆಯಿಂದಾಗಿ, ಆಹಾರವು ಚೆಲ್ಲಬಹುದು ಮತ್ತು ಸುಡುವಿಕೆಗೆ ಸಂಬಂಧಿಸಿದ ಘಟನೆಗಳು ಸಂಭವಿಸಬಹುದು.

ಮತ್ತಷ್ಟು ಓದಿ: Gut Bacteria: ಕರುಳಿನ ಆರೋಗ್ಯವನ್ನು ಕಾಪಾಡಲು ಈ ಜೀವನಶೈಲಿ ರೂಢಿಸಿಕೊಳ್ಳಿ

ಪಾಸ್ತಾ ಮತ್ತು ನೂಡಲ್ಸ್ ಪಾಸ್ಟಾ ಮತ್ತು ನೂಡಲ್ಸ್‌ನಂತಹ ಆಹಾರ ಪದಾರ್ಥಗಳನ್ನು ಅಡುಗೆ ಮಾಡಲು ಕುಕ್ಕರ್ ಅನ್ನು ಬಳಸಬಾರದು. ಏಕೆಂದರೆ ಅವು ಮುದ್ದೆಯಾಗಬಹುದು, ಅದು ತಿನ್ನಲು ರುಚಿಯಾಗಿರುವುದಿಲ್ಲ.

 ತರಕಾರಿಗಳು ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳದ ತರಕಾರಿಗಳು ಅಥವಾ ಕಡಿಮೆ ಸಮಯದಲ್ಲಿ ಮಾಡುವ ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಮಾಡಬಾರದು. ಈ ತರಕಾರಿಗಳಲ್ಲಿ ಹಸಿರು ಎಲೆಗಳ ತರಕಾರಿಗಳು, ಮೃದು ತರಕಾರಿಗಳು ಸೇರಿವೆ. ಈ ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಮೂಲ ಬಣ್ಣವನ್ನು ಕಳೆದುಕೊಳ್ಳಬಹುದು.

ಕೇಕ್ ಮತ್ತು ಬೇಕ್ ಅನೇಕ ಜನರು ಸಾಮಾನ್ಯವಾಗಿ ಕೇಕ್ ಮತ್ತು ಕುಕೀಗಳಂತಹ ಬೇಯಿಸಿದ ಆಹಾರವನ್ನು ತಯಾರಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸುತ್ತಾರೆ. ಅವುಗಳನ್ನು ತಯಾರಿಸಲು ಕುಕ್ಕರ್ ಸರಿಯಾದ ಆಯ್ಕೆಯಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:00 am, Thu, 27 July 23

ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್