Health Care: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ಇದ್ದರೆ ಈ ಸಲಹೆಗಳನ್ನು ಪಾಲಿಸಿ

| Updated By: ಆಯೇಷಾ ಬಾನು

Updated on: Oct 25, 2021 | 7:46 AM

ತಲೆನೋವು ಎಂದು ನಿಮ್ಮ ಮಕ್ಕಳು ಪದೇ ಪದೇ ಹೇಳುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸುವುದು ಸೂಕ್ತವಲ್ಲ. ಬಹುಬೇಗ ತಜ್ಞರಲ್ಲಿ ಸಲಹೆ ಪಡೆಯಿರಿ.

Health Care: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ಇದ್ದರೆ ಈ ಸಲಹೆಗಳನ್ನು ಪಾಲಿಸಿ
ಸಂಗ್ರಹ ಚಿತ್ರ
Follow us on

ಇತ್ತೀಚೆಗೆ ತಲೆನೋವಿನ ಸಮಸ್ಯೆ ಮಕ್ಕಳಲ್ಲಿ ಹೆಚ್ಚು ಕಾಡುತ್ತಿದೆ. ಜೀವನ ಶೈಲಿಯಲ್ಲಿನ ಬದಲಾವಣೆ, ಮೊಬೈಲ್​, ಕಂಪ್ಯೂಟರ್, ದೂರದರ್ಶನದ ಅತಿಯಾದ ಬಳಕೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಇದರಿಂದ ದೃಷ್ಟಿ ಸಮಸ್ಯೆಯೂ ಸಹ ಮಕ್ಕಳಲ್ಲಿ ಹೆಚ್ಚು ಕಾಡುತ್ತಿದೆ. ಹೀಗಿರುವಾಗ ತಲೆನೋವು ಎಂದು ನಿಮ್ಮ ಮಕ್ಕಳು ಪದೇ ಪದೇ ಹೇಳುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸುವುದು ಸೂಕ್ತವಲ್ಲ. ಬಹುಬೇಗ ತಜ್ಞರಲ್ಲಿ ಸಲಹೆ ಪಡೆಯಿರಿ.

ಮಕ್ಕಳ ತಲೆನೋವಿಗೆ ಹಲವು ಕಾರಣವಿರಬಹುದು. ನೆಗಡಿ, ಕೆಮ್ಮು, ಕಳಪೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು, ದೃಷ್ಟಿ ಸಮಸ್ಯೆ, ದೃಷ್ಟಿ ಹೀನತೆ, ಅತಿಯಾದ ಒತ್ತಡ ಮತ್ತು ಮೆದುಳಿಗೆ ಒತ್ತಡ. ಇವೆಲ್ಲವೂ ಸಹ ತಲೆ ನೋವಿಗೆ ಕಾಣವಾಗಿರಬಹುದು. ಹಾಗಿರುವಾಗ ತಲೆ ನೋವಿನ ಸಮಸ್ಯೆ ಮಕ್ಕಳಲ್ಲಿ ಕಂಡು ಬರುತ್ತಿದ್ದರೆ ತಡ ಮಾಡದೇ ವೈದ್ಯರಲ್ಲಿ ಸಲಹೆ ಪಡೆಯಿರಿ.

ಪರಿಹಾರ ಕ್ರಮ
ತಜ್ಞರ ಸಲಹೆ
ಮಕ್ಕಳು ಸರಿಯಾಗಿ ಏನನ್ನೂ ಹೇಳುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ಬೆಳೆಯುವ ವಯಸ್ಸಿನ ಮಕ್ಕಳಲ್ಲಿ ಆರೋಗ್ಯ ತೊಂದರೆಗಳು ಕಾಣಿಸುತ್ತಿದ್ದರೆ ಮೊದಲು ತಜ್ಞರಲ್ಲಿ ಪರೀಕ್ಷೆಗೆ ಕರೆದುಕೊಂಡು ಹೋಗಿ. ತಜ್ಞರ ಸಲಹೆಯ ಮೇರೆಗೆ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಪಡೆಯಿರಿ.

ಕಣ್ಣುಗಳನ್ನು ಪರೀಕ್ಷಿಸಿ
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್, ಟಿವಿಯ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿಹೀನತೆಯ ಸಮಸ್ಯೆ ಕಂಡು ಬರುತ್ತಿದೆ. ಇದು ತಲೆನೋವಿಗೆ ಕಾರಣವಾಗುತ್ತದೆ. ಹಾಗಿರುವಾಗ ತಲೆ ನೋವಿನ ಸಮಸ್ಯೆ ಮತ್ತು ದೃಷ್ಟಿ ಹೀನತೆ ಸಮಸ್ಯೆ ಇದ್ದಲ್ಲಿ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.

ಜೀವನ ಶೈಲಿಯಲ್ಲಿನ ಬದಲಾವಣೆ
ತಲೆನೋವಿನ ಸಮಸ್ಯೆ ಹೋಗಲಾಡಿಸಲು ಉತ್ತಮ ಆಹಾರ ಪದ್ಧತಿ ಮುಖ್ಯ. ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿಗಳು, ಹಾಲು ಎಲ್ಲವೂ ಇರಲಿ. ಆದಷ್ಟು ಹೊರಗಿನ ತಿಂಡಿ ತಿನಿಸುಗಳ ಸೇವನೆಯನ್ನು ತಪ್ಪಿಸಿ. ಮಕ್ಕಳು ಚೆನ್ನಾಗಿ ನಿದ್ರೆ ಮಾಡುವಂತೆ ನೋಡಿಕೊಳ್ಳಿ. ಒಳ್ಳೆಯ ನಿದ್ರೆ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Eyes Care: ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಈ ಮಾರ್ಗಗಳನ್ನು ಅನುಸರಿಸಿ

ನಿಮಗೆ ತಲೆನೋವು, ಮೈ-ಕೈ ನೋವು ಕಾಡ್ತಿದೆಯೇ? ತಕ್ಷಣ ಟೆಸ್ಟ್​ ಮಾಡಿಸಿಕೊಳ್ಳಿ: ಡಾ. ಮಂಜುನಾಥ್​